kn_tw/bible/other/reign.md

2.3 KiB

ಆಳ್ವಿಕೆ, ಆಳುವುದು, ಆಳ್ವಿಕೆ ಮಾಡಿದೆ, ಆಳ್ವಿಕೆ ಮಾಡುತ್ತಿರುವುದು

ಪದದ ಅರ್ಥವಿವರಣೆ:

“ಆಳ್ವಿಕೆ” ಎನ್ನುವ ಪದಕ್ಕೆ ಒಂದು ನಿರ್ದಿಷ್ಟವಾದ ದೇಶದ ಅಥವಾ ರಾಜ್ಯದ ಜನರ ಮೇಲೆ ಆಡಳಿತ ಮಾಡುವುದು ಎಂದರ್ಥ. ಅರಸನ ಆಳ್ವಿಕೆ ಎಂದರೆ ಆತನು ಆಳುತ್ತಿರುವ ಕಾಲಾವಧಿ ಎಂದರ್ಥ.

  • “ಆಳ್ವಿಕೆ” ಎನ್ನುವ ಪದವನ್ನು ಸರ್ವ ಲೋಕದ ಮೇಲೆ ದೇವರು ಅರಸನಾಗಿ ಆಳುತ್ತಿದ್ದಾರೆನ್ನುವ ವಿಷಯವನ್ನು ಸೂಚಿಸುತ್ತದೆ.
  • ದೇವರನ್ನು ಇಸ್ರಾಯೇಲ್ಯರು ತಮ್ಮ ಅರಸನನ್ನಾಗಿ ತಿರಸ್ಕಾರ ಮಾಡಿದನಂತರ ಇಸ್ರಾಯೇಲಿರನ್ನು ಆಳುವುದಕ್ಕೆ ಅನೇಕಮಂದಿ ಮನುಷ್ಯ ಅರಸರನ್ನು ದೇವರು ಅನುಮತಿಸಿದರು.
  • ಯೇಸು ಕ್ರಿಸ್ತ ಹಿಂದುರಿಗಿ ಬರುವಾಗ, ಆತನು ಬಹಿರಂಗವಾಗಿ ಇಡೀ ಲೋಕದ ಮೇಲೆ ಅರಸನಾಗಿ ಆಳುತ್ತಾನೆ ಮತ್ತು ಕ್ರೈಸ್ತರು ಕೂಡ ಆತನೊಂದಿಗೆ ಆಳುವರು.
  • ಈ ಪದವನ್ನು “ಸಂಪೂರ್ಣವಾಗಿ ಆಳುವುದು” ಅಥವಾ “ಅರಸನಾಗಿ ಆಳುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ರಾಜ್ಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3427, H4427, H4437, H4438, H4467, H4468, H4475, H4791, H4910, H6113, H7287, H7786, G757, G936, G2231, G4821