kn_tw/bible/kt/kingofthejews.md

4.8 KiB

ಯೆಹೂದ್ಯರ ಅರಸ, ಯೆಹೂದ್ಯರ ಅರಸ

ಪದದ ಅರ್ಥವಿವರಣೆ:

“ಯೆಹೂದ್ಯರ ಅರಸ” ಎನ್ನುವ ಮಾತು ಒಂದು ಬಿರುದಾಗಿರುತ್ತದೆ, ಇದು ಮೆಸ್ಸೀಯನಾದ ಯೇಸುವನ್ನು ಸೂಚಿಸುತ್ತದೆ.

  • “ಯೆಹೂದ್ಯರ ಅರಸ”ನಾಗಿ ಹುಟ್ಟಿರುವ ಶಿಶುವನ್ನು ನೋಡುವುದಕ್ಕೆ ಬೆತ್ಲೆಹೇಮಿಗೆ ಪ್ರಯಾಣ ಮಾಡುತ್ತಿರುವ ಜ್ಞಾನಿಗಳಿಂದ ಉಪಯೋಗಿಸಲ್ಪಟ್ಟಾಗ ಈ ಬಿರುದನ್ನು ಮೊಟ್ಟ ಮೊದಲು ಸತ್ಯವೇದದಲ್ಲಿ ದಾಖಲಿಸಲಾಗಿದೆ.
  • “ನಿನಗೆ ಹುಟ್ಟುವ ಮಗನು ದಾವೀದನ ವಂಶಸ್ಥನಾಗಿರುತ್ತಾನೆ, ಈತನು ಅರಸನಾಗಿ ನಿರಂತರವಾಗಿ ಆಳುವವನಾಗಿರುತ್ತಾನೆ” ಎಂದು ದೂತನು ಮರಿಯಳಿಗೆ ಹೇಳಿದನು.
  • ಯೇಸುವನ್ನು ಶಿಲುಬೆಗೇರಿಸುವುದಕ್ಕೆ ಮುಂಚಿತವಾಗಿ, ರೋಮಾ ಸೈನಿಕರು ಯೇಸುವನ್ನು ಹಿಯಾಳಿಸುತ್ತಾ “ಯೆಹೂದ್ಯರ ಆರಸ” ಎಂದು ಕೂಗಿದರು. ಈ ಮಾತನ್ನು ಯೇಸುವಿನ ಶಿಲುಬೆಯ ಮೇಲೆ ಒಂದು ಕಟ್ಟಿಗೆಯ ಹಲಿಗೆಯ ಮೇಲೆ ಬರೆದಿದ್ದರು.
  • ಯೇಸು ನಿಜವಾಗಿಯೂ ಯೆಹೂದ್ಯರ ಅರಸನಾಗಿರುತ್ತಾನೆ ಮತ್ತು ಎಲ್ಲಾ ಸೃಷ್ಟಿಗೂ ಅರಸನಾಗಿರುತ್ತಾನೆ.

ಅನುವಾದ ಸಲಹೆಗಳು:

  • “ಯೆಹೂದ್ಯರ ಅರಸ” ಎನ್ನುವ ಮಾತನ್ನು “ಯೆಹೂದ್ಯರಿಗೆ ಅರಸ” ಅಥವಾ “ಯೆಹೂದ್ಯರನ್ನು ಆಳುವ ಅರಸ” ಅಥವಾ “ಯೆಹೂದ್ಯರ ಸರ್ವೋಚ್ಚ ಪಾಲಕ” ಎಂದೂ ಅನುವಾದ ಮಾಡಬಹುದು.
  • ಅನುವಾದದಲ್ಲಿ ಇತರ ಸ್ಥಳಗಳಲ್ಲಿ “ಅರಸ” ಎನ್ನುವ ಮಾತನ್ನು ಹೇಗೆ ಅನುವಾದ ಮಾಡಿದ್ದಾರೆಂದು ಪರಿಶೀಲನೆ ಮಾಡಿರಿ.

(ಈ ಪದಗಳನ್ನು ಸಹ ನೋಡಿರಿ : ವಂಶಸ್ಥರು, ಯೆಹೂದ, ಯೇಸು, ಅರಸ, ರಾಜ್ಯ, ದೇವರ ರಾಜ್ಯ, ಜ್ಞಾನಿಗಳು)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 23:09 ಸ್ವಲ್ಪ ಕಾಲವಾದನಂತರ, ಪೂರ್ವ ದೇಶಗಳಿಂದ ಬಂದಿರುವ ಜ್ಞಾನಿಗಳು ಆಕಾಶದಲ್ಲಿ ಅಸಹಜವಾಗಿ ಕಾಣಿಸಿಕೊಂಡ ನಕ್ಷತ್ರವನ್ನು ನೋಡಿದರು. __ ಯೆಹೂದ್ಯರ ಹೊಸ ಅರಸನು __ ಹುಟ್ಟುತ್ತಿದ್ದಾನೆ ಎನ್ನುವುದಕ್ಕೆ ಇದೇ ಅರ್ಥವೆಂದು ಅವರು ತಿಳಿದುಕೊಂಡರು.
  • 39:09 “ನೀನು __ ಯೆಹೂದ್ಯರ ಅರಸನೋ__? “ ಎಂದು ಪಿಲಾತನು ಯೇಸುವನ್ನು ಕೇಳಿದನು.
  • 39:12 ರೋಮಾ ಸೈನಿಕರು ಯೇಸುವನ್ನು ಕೋಲಿನಿಂದ ಹೊಡೆದು, ಒಂದು ಹಗ್ಗವನ್ನು ನಡುವಿಗೆ ಕಟ್ಟಿ, ಆತನ ತಲೆಯ ಮೇಲೆ ಮುಳ್ಳಿನ ಕಿರೀಟವನ್ನು ಧರಿಸಿದರು. “ನೋಡು, __ ಯೆಹೂದ್ಯರ ಅರಸನೇ__ ?” ಎಂದು ಹೇಳುತ್ತಾ ಆತನನ್ನು ಹಿಯಾಳಿಸಿದರು.
  • 40:02 “ಯೆಹೂದ್ಯರ ಅರಸ” ಎಂಬುದಾಗಿ ಒಂದು ಗುರುತನ್ನು ಶಿಲುಬೆಯಲ್ಲಿರುವ ಯೇಸುವಿನ ತಲೆಯ ಮೇಲೆ ಇಡಬೇಕೆಂದು ಪಿಲಾತನು ಅವರಿಗೆ ಆಜ್ಞಾಪಿಸಿದನು.

ಪದ ಡೇಟಾ:

  • Strong's: G935, G2453