kn_tw/bible/other/preach.md

57 lines
8.7 KiB
Markdown
Raw Permalink Blame History

This file contains ambiguous Unicode characters

This file contains Unicode characters that might be confused with other characters. If you think that this is intentional, you can safely ignore this warning. Use the Escape button to reveal them.

# ಉಪದೇಶ ಉಪದೇಶಿಸುವುದು, ಉಪದೇಶಕ, ಸಾರು, ಸಾರುವುದು, ಸಾರಲ್ಪಡು,
## ಪದದ ಅರ್ಥವಿವರಣೆ:
“ಉಪದೇಶಿಸು” ಎನ್ನುವ ಪದಕ್ಕೆ ಜನರ ಗುಂಪಿನೊಂದಿಗೆ ಮಾತನಾಡು, ದೇವರ ಕುರಿತಾಗಿ ಅವರಿಗೆ ಬೋಧನೆ ಮಾಡು ಮತ್ತು ದೇವರಿಗೆ ವಿಧೇಯತೆ ತೋರಿಸಬೇಕೆಂದು ಅವರನ್ನು ಬೇಡಿಕೊಳ್ಳು ಎಂದರ್ಥ.
“ಸಾರಲ್ಪದಡು” ಎನ್ನುವ ಪದಕ್ಕೆ ಧೈರ್ಯವಾಗಿ ಬಹಿರಂಗವಾಗಿ ಯಾವುದಾದರೊಂದನ್ನು ಘೋಷಿಸುವುದು ಅಥವಾ ಸಾರುವುದು ಎಂದರ್ಥ.
* ಸಾಮಾನ್ಯವಾಗಿ ಉಪದೇಶವನ್ನು ಒಬ್ಬ ವ್ಯಕ್ತಿಯಿಂದ ದೊಡ್ಡ ಗುಂಪಿನ ಜನರಿಗೆ ಮಾಡಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಮಾತನಾಡಲಾಗುತ್ತದೆ, ಬರೆಯಲಾಗುವುದಿಲ್ಲ.
* “ಉಪದೇಶ” ಮತ್ತು “ಬೋಧನೆ” ಹೋಲುತ್ತದೆ, ಆದರೆ ನಿಖರವಾಗಿ ಒಂದೇ ಆಗಿರುವುದಿಲ್ಲ.
* “ಉಪದೇಶಿಸುವುದು” ಮುಖ್ಯವಾಗಿ ಆಧ್ಯಾತ್ಮಿಕ ಅಥವಾ ನೈತಿಕ ಸತ್ಯವನ್ನು ಸಾರ್ವಜನಿಕವಾಗಿ ಘೋಷಿಸುವುದನ್ನು ಸೂಚಿಸುತ್ತದೆ ಮತ್ತು ಪ್ರತಿಕ್ರಿಯಿಸಲು ಪ್ರೇಕ್ಷಕರನ್ನು ಒತ್ತಾಯಿಸುತ್ತದೆ. “ಬೋಧನೆ” ಎನ್ನುವುದು ಸೂಚನೆಗೆ ಒತ್ತು ನೀಡುವ ಪದವಾಗಿದೆ, ಅಂದರೆ ಜನರಿಗೆ ಮಾಹಿತಿ ನೀಡುವುದು ಅಥವಾ ಏನನ್ನಾದರೂ ಹೇಗೆ ಮಾಡಬೇಕೆಂದು ಅವರಿಗೆ ಕಲಿಸುವುದು.
* “ಉಪದೇಶ” ಎಂಬ ಪದವನ್ನು ಸಾಮಾನ್ಯವಾಗಿ “ಸುವಾರ್ತೆ” ಎಂಬ ಪದದೊಂದಿಗೆ ಬಳಸಲಾಗುತ್ತದೆ.
* ಒಬ್ಬ ವ್ಯಕ್ತಿಯು ಇತರರಿಗೆ ಬೋಧಿಸಿದ್ದನ್ನು ಸಾಮಾನ್ಯವಾಗಿ ಅವನ “ಬೋಧನೆಗಳು” ಎಂದೂ ಕರೆಯಬಹುದು.
* ಸಾಮಾನ್ಯವಾಗಿ ಸತ್ಯವೇದದಲ್ಲಿ, “ಸಾರು” ಎಂದರೆ ದೇವರು ಆಜ್ಞಾಪಿಸಿದ ಯಾವುದನ್ನಾದರೂ ಸಾರ್ವಜನಿಕವಾಗಿ ಘೋಷಿಸುವುದು, ಅಥವಾ ದೇವರ ಬಗ್ಗೆ ಇತರರಿಗೆ ಹೇಳುವುದು ಮತ್ತು ಅವನು ಎಷ್ಟು ಶ್ರೇಷ್ಠನೆಂದು.
* ಹೊಸ ಒಡಂಬಡಿಕೆಯಲ್ಲಿ, ಅಪೊಸ್ತಲರು ಯೇಸುವಿನ ಬಗ್ಗೆ ಸುವಾರ್ತೆಯನ್ನು ವಿವಿಧ ನಗರಗಳು ಮತ್ತು ಪ್ರದೇಶಗಳಲ್ಲಿ ಅನೇಕ ಜನರಿಗೆ ಸಾರಿದರು.
* "ಸಾರು” ಎಂಬ ಪದವನ್ನು ರಾಜರು ಮಾಡಿದ ತೀರ್ಪುಗಳಿಗೆ ಅಥವಾ ಸಾರ್ವಜನಿಕ ರೀತಿಯಲ್ಲಿ ಕೆಟ್ಟದ್ದನ್ನು ಖಂಡಿಸಲು ಸಹ ಬಳಸಬಹುದು.
* “ಸಾರು” ಅನ್ನು ಭಾಷಾಂತರಿಸುವ ಇತರ ಮಾರ್ಗಗಳಲ್ಲಿ “ಸಾರುವದು” ಅಥವಾ “ಬಹಿರಂಗವಾಗಿ ಬೋಧಿಸು” ಅಥವಾ “ಸಾರ್ವಜನಿಕವಾಗಿ ಘೋಷಿಸು” ಒಳಗೊಂಡಿರಬಹುದು.
* “ಸಾರು” ಎಂಬ ಪದವನ್ನು “ಪ್ರಕಟಣೆ” ಅಥವಾ “ಸಾರ್ವಜನಿಕ ಉಪದೇಶ” ಎಂದೂ ಅನುವಾದಿಸಬಹುದು.
(ಈ ಪದಗಳನ್ನು ಸಹ ನೋಡಿರಿ : [ಶುಭವಾರ್ತೆ](../kt/goodnews.md), [ಯೇಸು](../kt/jesus.md), [ದೇವರ ರಾಜ್ಯ](../kt/kingdomofgod.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ತಿಮೊಥೆ.04:1-2](rc://*/tn/help/2ti/04/01)
* [ಅಪೊ.ಕೃತ್ಯ.08:4-5](rc://*/tn/help/act/08/04)
* [ಅಪೊ.ಕೃತ್ಯ.10:42-43](rc://*/tn/help/act/10/42)
* [ಅಪೊ.ಕೃತ್ಯ.14:21-22](rc://*/tn/help/act/14/21)
* [ಅಪೊ.ಕೃತ್ಯ.20:25](rc://*/tn/help/act/20/25)
* [ಲೂಕ.04:42](rc://*/tn/help/luk/04/42)
* [ಮತ್ತಾಯ.03:1-3](rc://*/tn/help/mat/03/01)
* [ಮತ್ತಾಯ.04:17](rc://*/tn/help/mat/04/17)
* [ಮತ್ತಾಯ.12:41](rc://*/tn/help/mat/12/41)
* [ಮತ್ತಾಯ.24:14](rc://*/tn/help/mat/24/14)
* [ಅಪೊ.ಕೃತ್ಯ.09:20-22](rc://*/tn/help/act/09/20)
* [ಅಪೊ.ಕೃತ್ಯ.13:38-39](rc://*/tn/help/act/13/38)
* [ಯೋನ.03:1-3](rc://*/tn/help/jon/03/01)
* [ಲೂಕ.04:18-19](rc://*/tn/help/luk/04/18)
* [ಮಾರ್ಕ.01:14-15](rc://*/tn/help/mrk/01/14)
* [ಮತ್ತಾಯ.10:26](rc://*/tn/help/mat/10/26)
## ಸತ್ಯವೇದದಿಂದ ಉದಾಹರಣೆಗಳು:
* __[24:02](rc://*/tn/help/obs/24/02)__ “ಮಾನಸಾಂತರ ಹೊಂದಿರಿ, ದೇವರ ರಾಜ್ಯವು ಸಮೀಪವಾಗಿದೆ” ಎಂದು ಅವನು (ಯೋಹಾನು) ಅವರಿಗೆ __ ಪ್ರಸಂಗ ಮಾಡಿದನು __ .
* __[30:01](rc://*/tn/help/obs/30/01)__ ಅನೇಕ ಗ್ರಾಮಗಳಲ್ಲಿ ಬೋಧನೆ ಮಾಡುವುದಕ್ಕೆ ಮತ್ತು __ ಉಪದೇಶಿಸಲು __ ಯೇಸು ತನ್ನ ಶಿಷ್ಯರನ್ನು ಕಳುಹಿಸಿದನು.
* __[38:01](rc://*/tn/help/obs/38/01)__ ಮೂವತ್ತು ಮೂರು ವರ್ಷಗಳಾದ ಮೇಲೆ ಯೇಸು ಬಹಿರಂಗವಾಗಿ ಬೋಧಿಸುವುದಕ್ಕೆ ಮತ್ತು __ ಉಪದೇಶ ಮಾಡುವುದಕ್ಕೂ __ ಆರಂಭಿಸಿದನು, ಯೆರೂಸಲೇಮಿನಲ್ಲಿ ಶಿಷ್ಯರೊಂದಿಗೆ ಪಸ್ಕವನ್ನು ಆಚರಿಸುವುದಕ್ಕೆ ತಾನು ಬಯಸುತಿದ್ದೇನೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು, ಮತ್ತು ಅಲ್ಲಿ ಆತನನ್ನು ಮರಣಕ್ಕೆ ಗುರಿ ಮಾಡಲಾಗುತ್ತದೆ.
* __[45:06](rc://*/tn/help/obs/45/06)__ ಈ ಎಲ್ಲಾ ಸಂದರ್ಭಗಳಲ್ಲಿ ಇದ್ದಾಗಲೂ ಅವರು ಹೋದ ಪ್ರತಿಯೊಂದು ಸ್ಥಳದಲ್ಲೂ ಯೇಸುವಿನ ಕುರಿತಾಗಿ ಅವರು__ ಭೋದಿಸಿದರು __.
* __[45:07](rc://*/tn/help/obs/45/07)__ ಅವನು (ಫಿಲಿಪ್ಪನ) ಸಮಾರ್ಯಕ್ಕೆ ಹೋಗಿ, ಯೇಸುವಿನ ಕುರಿತಾಗಿ ಆತನು ಬೋಧಿಸಲು, ಆ ಊರಿನಲ್ಲಿ ಅನೇಕಮಂದಿ ರಕ್ಷಣೆ ಹೊಂದಿದರು.
* __[46:06](rc://*/tn/help/obs/46/06)__ ಆ ಕ್ಷಣದಲ್ಲಿಯೇ, ಸೌಲನು ದಮಸ್ಕದಲ್ಲಿರುವ ಯೆಹೂದ್ಯರಿಗೆ __ ಉಪದೇಶ ಮಾಡುವುದಕ್ಕೆ __ ಆರಂಭಿಸಿದನು.
* __[46:10](rc://*/tn/help/obs/46/10)__ ಅನೇಕ ಸ್ಥಳಗಳಲ್ಲಿ ಯೇಸುವಿನ ಶುಭವಾರ್ತೆಯನ್ನು __ ಬೋದಿಸಲು __ ಅವರು ಅವರನ್ನು ಕಳುಹಿಸಿದರು.
* __[47:14](rc://*/tn/help/obs/47/14)__ ಪೌಲನು ಮತ್ತು ಇತರ ಕ್ರೈಸ್ತ ನಾಯಕರು ಅನೇಕ ಪಟ್ಟಣಗಳಿಗೆ ಪ್ರಯಾಣ ಮಾಡಿ, ಯೇಸುವಿನ ಕುರಿತಾಗಿ ಶುಭವಾರ್ತೆಯನ್ನು ಜನರಿಗೆ ಬೋಧಿಸಿದರು ಮತ್ತು __ ಉಪದೇಶಿಸಿದರು __.
* __[50:02](rc://*/tn/help/obs/50/02)__ “ಸರ್ವಲೋಕದಲ್ಲಿರುವ ಜನರಿಗೆ ಮತ್ತು ಭೂಮಿಯ ಕಟ್ಟಕಡೆಯವರೆಗೂ ದೇವರ ರಾಜ್ಯದ ಕುರಿತಾಗಿ ಶುಭವಾರ್ತೆಯನ್ನು ನನ್ನ ಶಿಷ್ಯರು ಪ್ರಕಟಿಸುವರು” ಎಂದು ಈ ಭೂಮಿಯ ಮೇಲೆ ಯೇಸು ಜೀವಿಸಿದಾಗ ಹೇಳಿದರು.
## ಪದ ಡೇಟಾ:
* Strongs:
* preach: H1319, H7121, H7150, G1229, G2097, G2605, G2782, G2783, G2784, G2980, G4283
* (for proclaim): H1319, H1696, H1697, H2199, H3045, H3745, H4161, H5046, H5608, H6963, H7121, H7440, H8085, G518, G591, G1229, G1861, G2097, G2605, G2782, G2784, G2980, G3142, G4135