kn_tw/bible/other/peoplegroup.md

9.9 KiB

ಜನರ ಗುಂಪು, ಜನಾಂಗಗಳು, ನಿರ್ದಿಷ್ಟ ಜನರು, ಜನರು

ಪದದ ಅರ್ಥವಿವರಣೆ:

“ಜನರು” ಅಥವಾ “ಜನರ ಗುಂಪುಗಳು” ಎನ್ನುವ ಪದವು ಒಂದೇ ಭಾಷೆಯನ್ನೂ ಮತ್ತು ಸಂಸ್ಕೃತಿಯನ್ನು ಹಂಚಿಕೊಳ್ಳುವ ಜನರ ಗುಂಪನ್ನು ಸೂಚಿಸುತ್ತದೆ. “ನಿರ್ದಿಷ್ಟ ಜನರು’ ಎನ್ನುವ ಮಾತು ಅನೇಕಬಾರಿ ವಿಶೇಷವಾದ ಸಂದರ್ಭದಲ್ಲಿ ಅಥವಾ ಒಂದು ನಿರ್ದಿಷ್ಟವಾದ ಸ್ಥಳದಲ್ಲಿ ಸೇರಿಬರುವ ಜನರನ್ನು ಸೂಚಿಸುತ್ತದೆ.

  • ದೇವರು ತನಗಾಗಿ “ಜನರನ್ನು” ಪ್ರತ್ಯೇಕಿಸಿಕೊಂಡಾಗ, ಇದಕ್ಕೆ ಆತನಿಗೆ ಸೇವೆ ಮಾಡುವುದಕ್ಕೆ ಮತ್ತು ಆತನ ಜನರಾಗಿ ಇರುವುದಕ್ಕೆ ಕೆಲವೊಂದು ನಿರ್ದಿಷ್ಟ ಜನರನ್ನು ಆತನು ಆಯ್ಕೆ ಮಾಡಿಕೊಂಡಿರುತ್ತಾರೆ ಎಂದರ್ಥ.
  • ಸತ್ಯವೇದ ಕಾಲಗಳಲ್ಲಿ ಜನರ ಗುಂಪಿನ ಸದಸ್ಯರು ಸಾಧಾರಣವಾಗಿ ಒಂದೇ ಪೂರ್ವಜರನ್ನು ಹೊಂದಿರುತ್ತಾರೆ ಮತ್ತು ನಿರ್ದಿಷ್ಟವಾದ ದೇಶದಲ್ಲಿ ಅಥವಾ ಭೂಮಿಯ ಪ್ರಾಂತ್ಯದಲ್ಲಿ ಎಲ್ಲರು ಸೇರಿ ನಿವಾಸ ಮಾಡಿರುತ್ತಾರೆ.
  • ಸಂದರ್ಭಾನುಸಾರವಾಗಿ “ನಿಮ್ಮ ಜನರು” ಎನ್ನುವ ಮಾತಿಗೆ “ನಿಮ್ಮ ಜನರ ಗುಂಪು” ಅಥವಾ “ನಿಮ್ಮ ಕುಟುಂಬ “ ಅಥವಾ “ನಿಮ್ಮ ಬಂಧುಗಳು” ಎಂದರ್ಥವಾಗಿರುತ್ತದೆ.
  • “ಜನಾಂಗಗಳು” ಎನ್ನುವ ಪದವು ಅನೇಕಬಾರಿ ಭೂಮಿಯ ಮೇಲಿರುವ ಎಲ್ಲಾ ಜನರ ಗುಂಪುಗಳನ್ನು ಸೂಚಿಸುವದಾಗಿರುತ್ತದೆ. ಕೆಲವೊಂದುಬಾರಿ ಈ ಪದವು ವಿಶೇಷವಾಗಿ ಇಸ್ರಾಯೇಲ್ಯರಲ್ಲದ ಜನರನ್ನು ಅಥವಾ ಯೆಹೋವನನ್ನು ಸೇವಿಸದ ಜನರನ್ನು ಹೆಚ್ಚಾಗಿ ಸೂಚಿಸುತ್ತದೆ. ಕೆಲವೊಂದು ಆಂಗ್ಲ ಬೈಬಲ್ ಅನುವಾದಗಳಲ್ಲಿ “ದೇಶಗಳು” ಎಂದು ಉಪಯೋಗಿಸಿರುತ್ತಾರೆ.

ಅನುವಾದ ಸಲಹೆಗಳು:

  • “ಜನರ ಗುಂಪು” ಎನ್ನುವ ಪದವನ್ನು “ದೊಡ್ಡ ಕುಟುಂಬದ ಗುಂಪು” ಅಥವಾ “ವಂಶ” ಅಥವಾ “ಜನಾಂಗ ಗುಂಪು” ಎಂದು ಅರ್ಥಬರುವ ಪದದೊಂದಿಗೆ ಅಥವಾ ಮಾತಿನೊಂದಿಗೆ ಅನುವಾದ ಮಾಡಬಹುದು.
  • “ನನ್ನ ಜನರು” ಎನ್ನುವಂತಹ ಮಾತುಗಳನ್ನು “ನನ್ನ ಬಂಧುಗಳು” ಅಥವಾ “ನನ್ನ ಜೊತೆಯ ಇಸ್ರಾಯೇಲ್ಯರು” ಅಥವಾ “ನನ್ನ ಕುಟುಂಬ” ಅಥವಾ “ನನ್ನ ಜನರ ಗುಂಪು” ಎಂದು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.
  • “ಜನರ ಮಧ್ಯೆದೊಳಗೆ ನಿಮ್ಮನ್ನು ಚೆದರಿಸುತ್ತಿದ್ದೇನೆ” ಎನ್ನುವ ಮಾತನ್ನು “ಅನೇಕ ವಿಧವಾದ ಜನರೊಂದಿಗೆ ನೀವು ನಿವಾಸ ಮಾಡುವಂತೆ ಮಾಡುತ್ತೇನೆ” ಅಥವಾ “ನಿಮ್ಮನ್ನು ಒಬ್ಬರಿಂದ ಒಬ್ಬರನ್ನು ದೂರ ಮಾಡಿ, ಲೋಕದಲ್ಲಿರುವ ಅನೇಕ ಪ್ರಾಂತ್ಯಗಳಲ್ಲಿ ಜೀವಿಸುವಂತೆ ಮಾಡುವುದು” ಎಂದೂ ಅನುವಾದ ಮಾಡಬಹುದು.
  • “ನಿರ್ದಿಷ್ಟ ಜನಾಂಗಗಳು” ಅಥವಾ “ನಿರ್ದಿಷ್ಟ ಜನರು” ಎನ್ನುವ ಪದವನ್ನು “ಲೋಕದಲ್ಲಿರುವ ಜನರು” ಅಥವಾ “ಜನರ ಗುಂಪುಗಳು” ಎಂದು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.
  • “ನಿರ್ದಿಷ್ಟ ಜನರು” ಎನ್ನುವ ಮಾತನ್ನು “ಒಂದು ಪ್ರಾಂತ್ಯದಲ್ಲಿ ನಿವಾಸ ಮಾಡುವ ಜನರು” ಅಥವಾ “ಒಬ್ಬರಿಂದ ಬಂದಿರುವ ವಂಶಸ್ಥರಾದ ಜಾಣರು” ಅಥವಾ “ಒಬ್ಬರ ಕುಟುಂಬ” ಎಂದೂ ಅನುವಾದ ಮಾಡಬಹುದು, ಮತ್ತು ಅದು ಒಬ್ಬ ವ್ಯಕ್ತಿಯ ಅಥವಾ ಒಂದು ಸ್ಥಳದ ಹೆಸರಿನಿಂದ ಅನುಸರಿಸುವ ಯಾವುದೇ ಗುಂಪನ್ನು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.
  • ಭೂಮಿಯ ಎಲ್ಲಾ ಜನರು” ಎನ್ನುವ ಮಾತನ್ನು “ಭೂಮಿಯ ನಿವಾಸವಾಗಿರುವ ಪ್ರತಿಯೊಬ್ಬರು” ಅಥವಾ “ಲೋಕದಲ್ಲಿರುವ ಪ್ರತಿಯೊಬ್ಬರೂ” ಅಥವಾ “ಎಲ್ಲಾ ಜನರು” ಎಂದೂ ಅನುವಾದ ಮಾಡಬಹುದು.
  • “ಜನರು” ಎನ್ನುವ ಪದವನ್ನು “ಜನರ ಗುಂಪು” ಅಥವಾ “ನಿರ್ದಿಷ್ಟ ಜನರು” ಅಥವಾ “ಜನರ ಸಮುದಾಯ” ಅಥವಾ “ಜನರ ಕುಟುಂಬ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ವಂಶಸ್ಥ, ದೇಶ, ಕುಲ, ಲೋಕ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 14:02 ಅಬ್ರಾಹಾಮ, ಇಸಾಕ, ಯಾಕೋಬರ ಸಂತಾನದವರಿಗೆ ವಾಗ್ಧಾನ ಭೂಮಿಯನ್ನು ಕೊಡುತ್ತೇನೆಂದು ದೇವರು ಅವರೊಂದಿಗೆ ವಾಗ್ಧಾನ ಮಾಡಿದ್ದರು, ಆದರೆ ಈಗ ಅಲ್ಲಿ ಅನೇಕ ಸಂಸ್ಕೃತಿಗಳನ್ನು ಅನುಸರಿಸುವ ಅನೇಕ ___ ಜನರ ಗುಂಪುಗಳು ___ ಜೀವಿಸುತ್ತಿವೆ,
  • 21:02 ಅಬ್ರಾಹಾಮನ ಮೂಲಕ ಈ ಲೋಕದ ಎಲ್ಲಾ ___ ಜನರ ಗುಂಪುಗಳು ___ ಆಶೀರ್ವಾದಗಳನ್ನು ಹೊಂದುತ್ತವೆಯೆಂದು ದೇವರು ಆತನೊಂದಿಗೆ ವಾಗ್ಧಾನ ಮಾಡಿದರು. ಈ ಆಶೀರ್ವಾದವು ಲೋಕದಲ್ಲಿರುವ ಎಲ್ಲಾ ___ ಗುಂಪಿನ ಜನಗಳಿಂದ ___ ಬರುವ ಜನರಿಗೆ ರಕ್ಷಣೆ ಮಾರ್ಗವನ್ನು ಒದಗಿಸಿಕೊಡುವುದು ಮತ್ತು ಭವಿಷ್ಯತ್ತಿನಲ್ಲಿ ಒಂದು ಸಮಯದಲ್ಲಿ ಮೆಸ್ಸೀಯಾ ಬರುವನೆಂದೆನ್ನುವುದು ಆಗಿರಬಹುದು.
  • 42:08 “ಜನರ ಪಾಪಗಳಿಗಾಗಿ ಕ್ಷಮಾಪಣೆಯನ್ನು ಪಡೆದುಕೊಳ್ಳುವುದಕ್ಕೆ ಪ್ರತಿಯೊಬ್ಬರು ಪಶ್ಚಾತ್ತಾಪವನ್ನು ಹೊಂದಬೇಕೆಂದು ನನ್ನ ಶಿಷ್ಯರು ಪ್ರಕಟಿಸುವರೆಂದು ಲೇಖನಗಳಲ್ಲಿ ಬರೆಯಲ್ಪಟ್ಟಿರುತ್ತದೆ. ಅವರು ಈ ಸೇವೆಯನ್ನು ಯೆರೂಸಲೇಮಿನಲ್ಲಿ ಆರಂಭಿಸಿ, ಪ್ರತಿಯೊಂದು ಸ್ಥಳದಲ್ಲಿರುವ ಎಲ್ಲಾ ___ ಜನರ ಗುಂಪುಗಳ ___ ವರೆಗೂ ಹೋಗುವರು.”
  • 42:10 “ಆದ್ದರಿಂದ, ತಂದೆ, ಮಗ, ಮತ್ತು ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ ಕೊಡುವುದರ ಮೂಲಕ, ನಾನು ನಿಮಗೆ ಆದೇಶಿಸಿದ ಪ್ರತಿಯೊಂದು ಆಜ್ಞೆಗೆ ವಿಧೇಯತೆ ತೋರಿಸಬೇಕೆಂದು ಬೋಧನೆ ಮಾಡುವುದರ ಮೂಲಕ ಎಲ್ಲಾ ___ ಜನರ ಗುಂಪುಗಳನ್ನು ___ ಶಿಷ್ಯರನ್ನಾಗಿ ಮಾಡಿರಿ.”
  • 48:11 ಈ ಹೊಸ ಒಡಂಬಡಿಕೆಯ ಮೂಲಕ, ಯಾವುದೇ ___ ಗುಂಪಿನ ಜನರಿಂದ ___ ಯಾರೇ ಒಬ್ಬರು ಯೇಸುವಿನಲ್ಲಿ ನಂಬುವುದರ ಮೂಲಕ ದೇವರ ಜನರಲ್ಲಿ ಭಾಗವಾಗಿರಬಹುದು.
  • 50:03 “ಹೋಗಿ, ಎಲ್ಲಾ ___ ಜನರ ಗುಂಪುಗಳನ್ನು ___ ನನ್ನ ಶಿಷ್ಯರನ್ನಾಗಿ ಮಾಡಿರಿ! ಮತ್ತು “ಬೆಳೆಗಳು ಕೊಯ್ಲಿಗೆ ಬಂದಿವೆ!” ಎಂದು ಆತನು (ಯೇಸು) ಹೇಳಿದರು.

ಪದ ಡೇಟಾ:

  • Strong's: H249, H523, H524, H776, H1121, H1471, H3816, H5712, H5971, H5972, H6153, G246, G1074, G1085, G1218, G1484, G2560, G2992, G3793