kn_tw/bible/other/family.md

2.4 KiB

ಕುಟುಂಬ, ಕುಟುಂಬದವರು

ಪದದ ಅರ್ಥವಿವರಣೆ

“ಕುಟುಂಬ” ಎನ್ನುವ ಪದವು ರಕ್ತ ಸಂಬಂಧ ಹೊಂದಿರುವ ಒಂದು ಗುಂಪಿನ ಜನರಿಗೆ ಸೂಚಿಸುತ್ತದೆ, ಅವರಲ್ಲಿ ತಂದೆ, ತಾಯಿ, ಮತ್ತು ತಮ್ಮ ಮಕ್ಕಳು ಇರಬಹುದು. ಕೆಲವೊಮ್ಮೆ ಅದರಲ್ಲಿ ಅಜ್ಜ, ಅಜ್ಜಿ, ಮೊಮ್ಮಕ್ಕಳು, ಚಿಕ್ಕಪ್ಪ, ಚಿಕ್ಕಮ್ಮ ಎಂಬುವ ಬೇರೆ ಸಂಬಂಧಿಕರು ಇರುತ್ತಾರೆ.

  • ಸತ್ಯವೇದ ಕಾಲದಲ್ಲಿ, ಸಾಮಾನ್ಯವಾಗಿ ಹಳೆಯ ಮನುಷ್ಯನು ಕುಟುಂಬದ ಪ್ರಮುಖ ಅಧಿಕಾರವನ್ನು ಹೊಂದಿದ್ದನು.
  • ಕುಟುಂಬದಲ್ಲಿ ಕೆಲವೊಮ್ಮೆ ಸೇವಕರು, ಉಪಪತ್ನಿಯರು ಮತ್ತು ಪರದೇಶೀಯರು ಸಹ ಇರುತ್ತಿದ್ದರು.
  • ತಂದೆತಾಯಿ ಮತ್ತು ಮಕ್ಕಳನ್ನು ಮಾತ್ರವೇ ಅಲ್ಲದೆ ಬೇರೆಯವರನ್ನು ಸಹ ಸೂಚಿಸಲು ಕೆಲವು ಭಾಷೆಗಳಲ್ಲಿ “ಕುಲ” ಅಥವಾ “ಮನೆತನ” ಎಂಬ ವಿಶಾಲ ಅರ್ಥವುಳ್ಳ ಪದಗಳನ್ನು ಹೊಂದಿರುತ್ತದೆ.
  • ಹೊಸ ಒಡಂಬಡಿಕೆಯು ಸಭೆಯನ್ನು ಉಲ್ಲೇಖಿಸಲು "ಕುಟುಂಬ" ಎಂಬ ಪರಿಕಲ್ಪನೆಗೆ ಸಂಬಂಧಿಸಿದ ಪದಗಳನ್ನು ಹೆಚ್ಚಾಗಿ ಬಳಸುತ್ತದೆ, ಅಂದರೆ ಯೇಸುವನ್ನು ನಂಬುವ ಜನರು.

(ಈ ಪದಗಳನ್ನು ಸಹ ನೋಡಿರಿ : ಕುಲ, ಪೂರ್ವಜರು, ಮನೆ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H1, H251, H272, H504, H1004, H1121, H2233, H2859, H2945, H3187, H4138, H4940, H5387, H5712, G1085, G3614, G3624, G3965