kn_tw/bible/kt/yahwehofhosts.md

4.8 KiB

ಸೇನಾಧೀಶ್ವರನಾದ ಯೆಹೋವ, ಸೇನಾಧೀಶ್ವರನಾದ ದೇವರು, ಪರಲೋಕ ಸೇನೆ, ಆಕಾಶಗಳ ಸೈನ್ಯ, ಸೇನಾಧೀಶ್ವರನಾದ ಕರ್ತನು

ಪದದ ಅರ್ಥವಿವರಣೆ:

“ಸೇನಾಧೀಶ್ವರನಾದ ಯೆಹೋವ” ಮತ್ತು “ಸೇನಾಧೀಶ್ವರನಾದ ದೇವರು” ಎನ್ನುವ ಮಾತುಗಳು ದೇವರಿಗೆ ವಿಧೇಯತೆ ತೋರಿಸುವ ಸಾವಿರಾರು ದೂತಗಳ ಮೇಲೆ ಆತನಿಗಿರುವ ಅಧಿಕಾರವನ್ನು ವ್ಯಕ್ತಗೊಳಿಸುವ ಬಿರುದುಗಳಾಗಿರುತ್ತವೆ.

  • “ಸೈನ್ಯ” ಅಥವಾ “ಸೈನ್ಯಗಳು” ಎನ್ನುವ ಪದವು ಯಾವುದಾದರೊಂದರ ಹೆಚ್ಚಿನ ಸಂಖ್ಯೆಯನ್ನು ಸೂಚಿಸುವ ಪದಗಳಾಗಿರುತ್ತವೆ, ಉದಾಹರಣೆಗೆ ಜನರ ಸೇನೆ ಅಥವಾ ನಕ್ಷತ್ರಗಳ ಅಸಂಖ್ಯಾತ ಗುಂಪು. ಈ ಪದವು ಎಲ್ಲಾ ಆತ್ಮಗಳನ್ನು ಮತ್ತು ಅನೇಕ ದುರಾತ್ಮಗಳನ್ನು ಕೂಡ ಸೂಚಿಸುತ್ತದೆ. ಇದು ಯಾವುದನ್ನು ಸೂಚಿಸುತ್ತದೆಯೆಂದು ಅಲ್ಲಿ ಹೇಳಲ್ಪಡುವ ಸಂದರ್ಭವೇ ಸ್ಪಷ್ಟಗೊಳಿಸುತ್ತದೆ.
  • ಈ ಮಾತುಗಳು “ಆಕಾಶಗಳ ಸೈನ್ಯ” ಎನ್ನುವ ಮಾತಿಗೆ ಸಮಾಂತರವಾಗಿರುತ್ತದೆ, ಇದು ಆಕಾಶದಲ್ಲಿರುವ ಗ್ರಹಗಳನ್ನು, ನಕ್ಷತ್ರಗಳನ್ನು ಮತ್ತು ಇತರ ವಿಶ್ವದಲ್ಲಿರುವ ಭಾಗಗಳನ್ನು ಸೂಚಿಸುತ್ತದೆ.
  • ಹೊಸ ಒಡಂಬಡಿಕೆಯಲ್ಲಿ “ಸೇನಾಧೀಶ್ವರನಾದ ಕರ್ತನು” ಎನ್ನುವ ಮಾತಿಗೆ “ಸೇನಾಧೀಶ್ವರನಾದ ಯೆಹೋವ” ಎನ್ನುವ ಮಾತಿಗಿರುವ ಅರ್ಥವಿರುತ್ತದೆ, ಆದರೆ ಆ ರೀತಿ ಇಲ್ಲಿ ಭಾಷಾಂತರ ಮಾಡಲಿಲ್ಲ, ಯಾಕೆಂದರೆ ಇಬ್ರಿ ಪದವಾಗಿರುವ ‘ಯೆಹೋವ” ಎನ್ನುವ ಪದವನ್ನು ಹೊಸ ಒಡಂಬಡಿಕೆಯಲ್ಲಿ ಉಪಯೋಗಿಸಲಿಲ್ಲ.

ಅನುವಾದ ಸಲಹೆಗಳು:

  • “ಸೇನಾಧೀಶ್ವರನಾದ ಯೆಹೋವ” ಎನ್ನುವ ಮಾತನ್ನು ಅನುವಾದ ಮಾಡುವುದರಲ್ಲಿ “ದೂತರನ್ನು ಆಳುವ ಯೆಹೋವ” ಅಥವಾ “ದೂತರ ಸೈನ್ಯಗಳನ್ನು ಆಳುವ ಯೆಹೋವ” ಅಥವಾ “ಸರ್ವ ಸೃಷ್ಟಿಯನ್ನು ಆಳುವ ಯೆಹೋವ” ಎನ್ನುವ ಮಾತುಗಳನ್ನು ಉಪಯೋಗಿಸಬಹುದು.
  • “ಸೇನಾಧೀಶ್ವರನಾದ ದೇವರು” ಮತ್ತು “ಸೇನಾಧೀಶ್ವರನಾದ ಕರ್ತನು” ಎನ್ನುವ ಮಾತುಗಳಲ್ಲಿರುವ “ಸೇನೆಗಳು” ಎನ್ನುವ ಪದವನ್ನು ಮೇಲೆ ಇರುವ “ಸೇನಾಧೀಶ್ವರನಾದ ಯೆಹೋವ” ಎನ್ನುವ ಮಾತಿನಲ್ಲಿರುವಂತೆಯೇ ಅನುವಾದ ಮಾಡಬಹುದು.
  • ಕೆಲವೊಂದು ಸಭೆಗಳು “ಯಾವ್ಹೆ” ಎನ್ನುವ ಪದವನ್ನು ಸ್ವೀಕರಿಸುವುದಿಲ್ಲ, ಇದಕ್ಕೆ ಬದಲಾಗಿ ಅನೇಕ ಭಾಷಾಂತರಗಳ ಸಂಪ್ರದಾಯವನ್ನು ಅನುಸರಿಸಿ “ಕರ್ತನು” ಎನ್ನುವ ಪದವನ್ನು ಬಳಸುವುದಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ. ಇಂಥಹ ಸಭೆಗಳಲ್ಲಿ “ಸೇನಾಧೀಶ್ವರನಾದ ಕರ್ತನು” ಎನ್ನುವ ಮಾತನ್ನೇ ಹಳೇ ಒಡಂಬಡಿಕೆಯಲ್ಲಿರುವ “ಸೇನಾಧೀಶ್ವರನಾದ ಯೆಹೋವ” ಎನ್ನುವ ಮಾತಿಗೆ ಬದಲಾಗಿ ಉಪಯೋಗಿಸಿರುತ್ತಾರೆ.

(ಈ ಪದಗಳನ್ನು ಸಹ ನೋಡಿರಿ: ದೂತ, ಅಧಿಕಾರ, ದೇವರು, ಕರ್ತನು, ಕರ್ತನಾದ ಯೆಹೋವ, ಯೆಹೋವ)

ಸತ್ಯವೇದದಲ್ಲಿರುವ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H430, H3068, H6635