kn_tw/bible/kt/lordyahweh.md

5.0 KiB

ಕರ್ತನಾದ ಯೆಹೋವ, ಯೆಹೋವ ದೇವರು

ಸತ್ಯಾಂಶಗಳು:

ಹಳೇ ಒಡಂಬಡಿಕೆಯಲ್ಲಿ “ಕರ್ತನಾದ ಯೆಹೋವ” ಎನ್ನುವ ಮಾತು ಒಬ್ಬನೇ ದೇವರೆಂದು ಸೂಚಿಸುವುದಕ್ಕೆ ಅತೀ ಹೆಚ್ಚಾಗಿ ಉಪಯೋಗಿಸಲ್ಪಟ್ಟಿದೆ.

  • “ಕರ್ತನು” ಎನ್ನುವ ಪದವು ದೈವಿಕವಾದ ಬಿರುದಾಗಿರುತ್ತದೆ ಮತ್ತು “ಯೆಹೋವ” ಎನ್ನುವುದು ದೇವರ ವೈಯುಕ್ತಿಕ ಹೆಸರಾಗಿರುತ್ತದೆ.
  • “ಯೆಹೋವ” ಎನ್ನುವುದು ಅನೇಕಬಾರಿ “ದೇವರು” ಎನ್ನುವ ಪದದೊಂದಿಗೆ “ಯೆಹೋವ ದೇವರು” ಎಂಬುದಾಗಿ ಸೇರಿರುತ್ತದೆ.

ಅನುವಾದ ಸಲಹೆಗಳು:

  • “ಯೆಹೋವ” ಎನ್ನುವ ಪದವನ್ನು ದೇವರ ವೈಯುಕ್ತಿಕ ಹೆಸರಿಗೆ ಅನುವಾದವಾಗಿ ಉಪಯೋಗಿಸಲಾಗಿರುತ್ತದೆ, “ಕರ್ತನಾದ ಯೆಹೋವ” ಮತ್ತು “ಯೆಹೋವ ದೇವರು” ಎನ್ನುವ ಮಾತುಗಳು ಅಕ್ಷರಾರ್ಥವಾಗಿ ಉಪಯೋಗಿಸಬಹುದು. ಈ ಪದವು ದೇವರನ್ನು ಸೂಚಿಸಿದಾಗ ಅನೇಕವಾದ ಸಂದರ್ಭಗಳಲ್ಲಿ “ಕರ್ತನು” ಎನ್ನುವ ಪದವನ್ನು ಯಾವರೀತಿ ಅನುವಾದ ಮಾಡಿದ್ದಾರೆಂದು ನೋಡಿಕೊಳ್ಳಿರಿ.
  • ಕೆಲವೊಂದು ಭಾಷೆಗಳಲ್ಲಿ ಹೆಸರಾದ ಮೇಲೆ ಬಿರುದುಗಳನ್ನು ಇಡುತ್ತಾರೆ ಮತ್ತು ಈ ಮಾತನ್ನು “ಯೆಹೋವ ಕರ್ತನು” ಎಂಬುದಾಗಿ ಅನುವಾದ ಮಾಡುತ್ತಾರೆ. ಅನುವಾದ ಮಾಡುವ ಭಾಷೆಯಲ್ಲಿ ಯಾವುದು ಸ್ವಾಭಾವಿಕವಾದದ್ದೆಂದು ಗಮನಿಸಿರಿ: “ಕರ್ತನು” ಎನ್ನುವ ಬಿರುದು “ಯೆಹೋವ” ಎನ್ನುವ ಹೆಸರಿಗೆ ಮುಂದೆ ಬರುತ್ತದೋ ಅಥವಾ ಹಿಂದೆ ಬರುತ್ತದೋ?
  • “ಯೆಹೋವ ದೇವರು” ಎನ್ನುವ ಮಾತು “ಯೆಹೋವ ಎಂದು ಕರೆಯಲ್ಪಡುವ ದೇವರು” ಅಥವಾ “ಜೀವಿಸುವ ದೇವರು” ಅಥವಾ “ದೇವರಾಗಿರುವ ನಾನು” ಎನ್ನುವ ಮಾತುಗಳಿಗೆ ಸಂಬಂಧಿಸಿರುತ್ತದೆ.
  • ಒಂದುವೇಳೆ “ಯೆಹೋವ” ಎನ್ನುವ ಪದವನ್ನು “ಕರ್ತನು” ಎಂಬುದಾಗಿ ಸಂಪ್ರದಾಯಿಕವಾಗಿ ಅನುವಾದ ಮಾಡುವುದಾಗಿದ್ದರೆ, “ಕರ್ತನಾದ ಯೆಹೋವ” ಎನ್ನುವ ಮಾತನ್ನು “ಕರ್ತನಾದ ದೇವರು” ಅಥವಾ “ಕರ್ತನಾಗಿರುವ ದೇವರು” ಎಂದೂ ಅನುವಾದ ಮಾಡಬಹುದು. ಬೇರೊಂದು ರೀತಿಯ ಅನುವಾದಗಳಲ್ಲಿ “ಯಜಮಾನನಾದ ಕರ್ತನು” ಅಥವಾ “ದೇವರಾಗಿರುವ ಕರ್ತನು” ಎಂಬುದಾಗಿ ಅನುವಾದ ಮಾಡಬಹುದು.
  • “ಕರ್ತನಾದ ಯೆಹೋವ” ಎನ್ನುವ ಮಾತು “ಕರ್ತಾದಿ ಕರ್ತನು” ಎಂದೂ ಸೂಚಿಸುವುದಿಲ್ಲ, ಯಾಕಂದರೆ ಓದುಗಾರರು ಈ ಎರಡು ಪದಗಳನ್ನು ವ್ಯತ್ಯಾಸಗೊಳಿಸುವುದಕ್ಕೆ ಉಪಯೋಗಿಸಿರುವ ಸಂಪ್ರದಾಯಿಕವಾದ ದೊಡ್ಡ ದೊಡ್ಡ ಅಕ್ಷರಗಳನ್ನು ಗಮನಿಸುವುದಿಲ್ಲ ಮತ್ತು ಅದು ವಿಚಿತ್ರವಾಗಿ ಕಾಣಿಸಿಕೊಳ್ಳುತ್ತದೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ದೇವರು, ಯಜಮಾನ, ಕರ್ತನು, ಯೆಹೋವ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H136, H430, H3068, G2316, G2962