3.4 KiB
3.4 KiB
ಮನ್ನ
ಅರ್ಥವಿವರಣೆ:
ಮನ್ನ ಎನ್ನುವುದು ಧಾನ್ಯದ ಹಾಗಿರುವ ಬಿಳಿಯ ಪದಾರ್ಥವಾಗಿರುತ್ತದೆ, ಇದನ್ನು ದೇವರು ಐಗುಪ್ತದಿಂದ ಇಸ್ರಾಯೇಲ್ಯರು ಹೊರಬಂದು ಅರಣ್ಯದಲ್ಲಿ ಜೀವಿಸಿದ 40 ವರ್ಷಗಳ ಕಾಲ ತಿನ್ನುವುದಕ್ಕೆ ಕೊಟ್ಟ ಆಹಾರವಾಗಿರುತ್ತದೆ.
- ಮನ್ನ ಎನ್ನುವುದು ಇಬ್ಬನಿ ಕೆಳಗೆ ನೆಲದ ಮೇಲೆ ಪ್ರತಿ ಉದಯ ಕಾಲದಲ್ಲಿ ಕಾಣಿಸಿಕೊಳ್ಳುವ ತೆಳುವಾದ ಚಕ್ಕೆಗಳ ಹಾಗೆ ಕಾಣಿಸಿಕೊಳ್ಳುತ್ತವೆ. ಇದು ಜೇನಿನ ಹಾಗೆ ತುಂಬಾ ಸಿಹಿಯಾಗಿರುತ್ತವೆ.
- ಇಸ್ರಾಯೇಲ್ಯರು ಈ ಮನ್ನವನ್ನು ಸಬ್ಬತ್ ದಿನವನ್ನು ಹೊರತುಪಡಿಸಿ ಪ್ರತಿಯೊಂದು ದಿನ ಸಂಗ್ರಹಿಸಿಕೊಳ್ಳುತ್ತಿದ್ದರು.
- ಸಬ್ಬತ್ ದಿನಕ್ಕೆ ಮುಂದಿನ ದಿನದಂದು ಎರಡುಪಟ್ಟು ಮನ್ನವನ್ನು ಸಂಗ್ರಹಿಸಿಕೊಳ್ಳಬೇಕೆಂದು ದೇವರು ಇಸ್ರಾಯೇಲ್ಯರಿಗೆ ಹೇಳಿದನು, ಇದರಿಂದ ಅವರು ವಿಶ್ರಾಂತಿ ದಿನದಂದು ಅದನ್ನು ಸಂಗ್ರಹಿಸಿಕೊಳ್ಳುತ್ತಿರಲಿಲ್ಲ.
- “ಮನ್ನ” ಎನ್ನುವ ಪದಕ್ಕೆ “ಏನಿದು?” ಎಂದರ್ಥ.
- ಸತ್ಯವೇದದಲ್ಲಿ ಮನ್ನ ಎನ್ನುವುದು “ಪರಲೋಕದಿಂದ ಬಂದಿರುವ ಆಹಾರ” ಮತ್ತು “ಪರಲೋಕದಿಂದ ಬಂದ ಧಾನ್ಯ” ಎಂದೂ ಸೂಚಿಸುತ್ತದೆ.
ಅನುವಾದ ಸಲಹೆಗಳು
- ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ತೆಳುವಾದ ಬಿಳಿಯ ಚಕ್ಕೆಗಳ ಆಹಾರ” ಅಥವಾ “ಪರಲೋಕದಿಂದ ಬಂದ ಆಹಾರ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
- ಸ್ಥಳೀಯ ಅಥವಾ ಜಾತೀಯ ಭಾಷೆಯಲ್ಲಿ ಸತ್ಯವೇದದ ಅನುವಾದದಲ್ಲಿ ಈ ಪದವನ್ನು ಯಾವರೀತಿ ಅನುವಾದ ಮಾಡಿದ್ದಾರೆಂದು ನೋಡಿಕೊಳ್ಳಿರಿ. (ನೋಡಿ: ಅಪರಿಚಿತರನ್ನು ಹೇಗೆ ಅನುವಾದಿಸುವುದು)
(ಇವುಗಳನ್ನು ಸಹ ನೋಡಿರಿ: ರೊಟ್ಟಿ, ಮರುಭೂಮಿ, ಧಾನ್ಯ, ಪರಲೋಕ, ಸಬ್ಬತ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದದ ಡೇಟಾ:
- Strong's: H4478, G31310