kn_tw/bible/kt/manna.md

31 lines
3.4 KiB
Markdown

# ಮನ್ನ
## ಅರ್ಥವಿವರಣೆ:
ಮನ್ನ ಎನ್ನುವುದು ಧಾನ್ಯದ ಹಾಗಿರುವ ಬಿಳಿಯ ಪದಾರ್ಥವಾಗಿರುತ್ತದೆ, ಇದನ್ನು ದೇವರು ಐಗುಪ್ತದಿಂದ ಇಸ್ರಾಯೇಲ್ಯರು ಹೊರಬಂದು ಅರಣ್ಯದಲ್ಲಿ ಜೀವಿಸಿದ 40 ವರ್ಷಗಳ ಕಾಲ ತಿನ್ನುವುದಕ್ಕೆ ಕೊಟ್ಟ ಆಹಾರವಾಗಿರುತ್ತದೆ.
* ಮನ್ನ ಎನ್ನುವುದು ಇಬ್ಬನಿ ಕೆಳಗೆ ನೆಲದ ಮೇಲೆ ಪ್ರತಿ ಉದಯ ಕಾಲದಲ್ಲಿ ಕಾಣಿಸಿಕೊಳ್ಳುವ ತೆಳುವಾದ ಚಕ್ಕೆಗಳ ಹಾಗೆ ಕಾಣಿಸಿಕೊಳ್ಳುತ್ತವೆ. ಇದು ಜೇನಿನ ಹಾಗೆ ತುಂಬಾ ಸಿಹಿಯಾಗಿರುತ್ತವೆ.
* ಇಸ್ರಾಯೇಲ್ಯರು ಈ ಮನ್ನವನ್ನು ಸಬ್ಬತ್ ದಿನವನ್ನು ಹೊರತುಪಡಿಸಿ ಪ್ರತಿಯೊಂದು ದಿನ ಸಂಗ್ರಹಿಸಿಕೊಳ್ಳುತ್ತಿದ್ದರು.
* ಸಬ್ಬತ್ ದಿನಕ್ಕೆ ಮುಂದಿನ ದಿನದಂದು ಎರಡುಪಟ್ಟು ಮನ್ನವನ್ನು ಸಂಗ್ರಹಿಸಿಕೊಳ್ಳಬೇಕೆಂದು ದೇವರು ಇಸ್ರಾಯೇಲ್ಯರಿಗೆ ಹೇಳಿದನು, ಇದರಿಂದ ಅವರು ವಿಶ್ರಾಂತಿ ದಿನದಂದು ಅದನ್ನು ಸಂಗ್ರಹಿಸಿಕೊಳ್ಳುತ್ತಿರಲಿಲ್ಲ.
* “ಮನ್ನ” ಎನ್ನುವ ಪದಕ್ಕೆ “ಏನಿದು?” ಎಂದರ್ಥ.
* ಸತ್ಯವೇದದಲ್ಲಿ ಮನ್ನ ಎನ್ನುವುದು “ಪರಲೋಕದಿಂದ ಬಂದಿರುವ ಆಹಾರ” ಮತ್ತು “ಪರಲೋಕದಿಂದ ಬಂದ ಧಾನ್ಯ” ಎಂದೂ ಸೂಚಿಸುತ್ತದೆ.
## ಅನುವಾದ ಸಲಹೆಗಳು
* ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ತೆಳುವಾದ ಬಿಳಿಯ ಚಕ್ಕೆಗಳ ಆಹಾರ” ಅಥವಾ “ಪರಲೋಕದಿಂದ ಬಂದ ಆಹಾರ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
* ಸ್ಥಳೀಯ ಅಥವಾ ಜಾತೀಯ ಭಾಷೆಯಲ್ಲಿ ಸತ್ಯವೇದದ ಅನುವಾದದಲ್ಲಿ ಈ ಪದವನ್ನು ಯಾವರೀತಿ ಅನುವಾದ ಮಾಡಿದ್ದಾರೆಂದು ನೋಡಿಕೊಳ್ಳಿರಿ. (ನೋಡಿ: [ಅಪರಿಚಿತರನ್ನು ಹೇಗೆ ಅನುವಾದಿಸುವುದು](rc://*/ta/man/translate/translate-unknown))
(ಇವುಗಳನ್ನು ಸಹ ನೋಡಿರಿ: [ರೊಟ್ಟಿ](../other/bread.md), [ಮರುಭೂಮಿ](../other/desert.md), [ಧಾನ್ಯ](../other/grain.md), [ಪರಲೋಕ](../kt/heaven.md), [ಸಬ್ಬತ್](../kt/sabbath.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಧರ್ಮೋ.8:3](rc://*/tn/help/deu/08/03)
* [ವಿಮೋ.16:27](rc://*/tn/help/exo/16/27)
* [ಇಬ್ರಿ.9:3-5](rc://*/tn/help/heb/09/03)
* [ಯೋಹಾನ.6:30-31](rc://*/tn/help/jhn/06/30)
* [ಯೆಹೋ.5:12](rc://*/tn/help/jos/05/12)
## ಪದದ ಡೇಟಾ:
* Strong's: H4478, G31310