2.8 KiB
2.8 KiB
ದೈವಿಕ
ಪದದ ಅರ್ಥವಿವರಣೆ:
“ದೈವಿಕ” ಎನ್ನುವ ಪದವು ದೇವರಿಗೆ ಸಂಬಂಧಿಸಿದ ಪ್ರತಿಯೊಂದು ವಿಷಯವನ್ನು ಸೂಚಿಸುತ್ತದೆ.
- ಈ ಪದವನ್ನು ಉಪಯೋಗಿಸುವ ಕೆಲವೊಂದು ವಿಧಾನಗಳಲ್ಲಿ “ದೈವಿಕ ಅಧಿಕಾರ”, “ದೈವಿಕ ನ್ಯಾಯತೀರ್ಪು”, “ದೈವಿಕ ಸ್ವಭಾವ”, “ದೈವಿಕ ಶಕ್ತಿ”, ಮತ್ತು “ದೈವಿಕ ಮಹಿಮೆ” ಎಂದೂ ಉಪಯೋಗಿಸಿದ್ದಾರೆ.
- ಸತ್ಯವೇದದಲ್ಲಿರುವ ಒಂದು ವಾಕ್ಯಭಾಗದಲ್ಲಿ “ದೈವಿಕ” ಎನ್ನುವ ಪದವನ್ನು ತಪ್ಪು ದೈವಿಕತ್ವದ ಕುರಿತಾಗಿ ವಿವರಿಸುವುದಕ್ಕೆ ಉಪಯೋಗಿಸಿದ್ದಾರೆ.
ಅನುವಾದ ಸಲಹೆಗಳು:
- “ದೈವಿಕ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ದೇವರ” ಅಥವಾ “ದೇವರಿಂದ” ಅಥವಾ “ದೇವರಿಗೆ ಸಂಬಂಧಪಟ್ಟ” ಅಥವಾ “ದೇವರಿಂದ ಉಂಟಾದ ಗುಣಲಕ್ಷಣ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
- ಉದಾಹರಣೆಗೆ, “ದೈವಿಕ ಅಧಿಕಾರ” ಎನ್ನುವ ಮಾತನ್ನು “ದೇವರ ಅಧಿಕಾರ” ಅಥವಾ “ದೇವರಿಂದ ಬರುವ ಅಧಿಕಾರ” ಎಂದು ಅನುವಾದ ಮಾಡಬಹುದು.
- “ದೈವಿಕ ಮಹಿಮೆ” ಎನ್ನುವ ಮಾತನ್ನು “ದೇವರ ಮಹಿಮೆ” ಅಥವಾ “ದೇವರಿಗಿರುವ ಮಹಿಮೆ” ಅಥವಾ “ದೇವರಿಂದ ಬರುವ ಮಹಿಮೆ” ಎಂದೂ ಅನುವಾದ ಮಾಡಬಹುದು.
- ಸುಳ್ಳು ದೇವರಿಗೆ ಸಂಬಂಧಪಟ್ಟ ವಿಷಯಗಳನ್ನು ವಿವರಿಸುವಾಗ ಕೆಲವೊಂದು ಅನುವಾದಕರು ಬೇರೊಂದು ಪದವನ್ನು ಉಪಯೋಗಿಸುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : ಅಧಿಕಾರ, ಸುಳ್ಳು ದೇವರು, ಮಹಿಮೆ, ದೇವರು, ತೀರ್ಪು, ಶಕ್ತಿ)
ಸತ್ಯವೇದದ ವಾಕ್ಯಗಳು :
ಪದ ಡೇಟಾ:
- Strong's: G23040, G29990