kn_tw/bible/kt/apostle.md

5.8 KiB

ಅಪೊಸ್ತಲ, ಅಪೊಸ್ತಲತ್ವ

ಅರ್ಥವಿವರಣೆ:

“ಅಪೊಸ್ತಲರು” ಎನ್ನುವವರು ದೇವರ ಕುರಿತಾಗಿ ಮತ್ತು ಆತನ ರಾಜ್ಯದ ಕುರಿತಾಗಿ ಬೋಧಿಸುವುದಕ್ಕೆ ಯೇಸುವಿನಿಂದ ಕಳುಹಿಸಲ್ಪಟ್ಟವರು. “ಅಪೊಸ್ತಲತ್ವ” ಎನ್ನುವ ಪದವು ಅಪೊಸ್ತಲರಾಗಿ ನೇಮಿಸಲ್ಪಟ್ಟಿರುವವರ ಅಧಿಕಾರವನ್ನು ಮತ್ತು ಸ್ಥಾನವನ್ನು ಸೂಚಿಸುತ್ತದೆ.

“ಅಪೊಸ್ತಲ” ಎನ್ನುವ ಪದಕ್ಕೆ “ಒಂದು ವಿಶೇಷವಾದ ಉದ್ದೇಶಕ್ಕಾಗಿ ಹೊರಗೆ ಕಳುಹಿಸಲ್ಪಟ್ಟವರು” ಎಂದರ್ಥ. ಯಾರಿಂದ ಅಪೊಸ್ತಲರಾಗಿ ಕಳುಹಿಸಲ್ಪಡುತ್ತಾರೋ ಅವರಿಗಿರುವ ಅಧಿಕಾರವನ್ನೇ ಅಪೊಸ್ತಲರೂ ಹೊಂದಿರುತ್ತಾರೆ.

  • ಯೇಸುವಿನ ಅತೀ ಹತ್ತಿರದ ಹನ್ನೆರಡು ಮಂದಿ ಶಿಷ್ಯರು ಮೊಟ್ಟ ಮೊದಲ ಅಪೊಸ್ತಲರಾದರು. ಇತರರು, ಎಂದರೆ ಪೌಲ ಮತ್ತು ಯಾಕೋಬ, ಸಹ ಅಪೊಸ್ತಲರಾದರು.
  • ದೇವರ ಶಕ್ತಿಯಿಂದ, ಅಪೊಸ್ತಲರು ಧೈರ್ಯವಾಗಿ ಸುವಾರ್ತೆಯನ್ನು ಸಾರಿದರು ಮತ್ತು ಅನೇಕ ಜನರನ್ನು ಗುಣಪಡಿಸಿದರು, ಮತ್ತು ಜನರೊಳಗಿಂದ ದೆವ್ವಗಳೆಲ್ಲವು ಹೊರಬರುವಂತೆ ಅವರು ಮಾಡಿದರು.

ಅನುವಾದ ಸಲಹೆಗಳು:

  • “ಅಪೊಸ್ತಲ” ಎನ್ನುವ ಪದವನ್ನು “ಹೊರಗೆ ಕಳುಹಿಸಲ್ಪಟ್ಟ ಒಬ್ಬ ವ್ಯಕ್ತಿ” ಅಥವಾ “ಕಳುಹಿಸಲ್ಪಟ್ಟ ವ್ಯಕ್ತಿ” ಅಥವಾ “ಜನರಿಗೆ ದೇವರ ಸಂದೇಶವನ್ನು ಸಾರುವುದಕ್ಕೆ ಹೊರಗೆ ಹೋಗುವುದಕ್ಕೆ ಕರೆಯಲ್ಪಟ್ಟ ವ್ಯಕ್ತಿ” ಎನ್ನುವ ಪದಗಳಿಂದ ಅಥವಾ ನುಡಿಗಟ್ಟಿನಿಂದಲೂ ಅನುವಾದ ಮಾಡಬಹುದು.
  • “ಅಪೊಸ್ತಲ” ಮತ್ತು “ಶಿಷ್ಯ” ಎನ್ನುವ ಪದಗಳನ್ನು ಬೇರೆ ಬೇರೆಯಾಗಿ ಅನುವಾದ ಮಾಡುವುದು ಇಲ್ಲಿ ತುಂಬಾ ಪ್ರಾಮುಖ್ಯ.
  • ಅದೇರೀತಿ ಈ ಪದವನ್ನು ಜಾತೀಯ ಭಾಷೆಯಲ್ಲಿ ಅಥವಾ ಸ್ಥಳೀಯ ಭಾಷೆಯಲ್ಲಿ ಸತ್ಯವೇದದ ಅನುವಾದದಲ್ಲಿ ಯಾವರೀತಿ ಅನುವಾದ ಮಾಡಿದ್ದಾರೆಂಬುದನ್ನು ಕೂಡ ಪರಿಗಣಿಸಿರಿ. (ನೋಡಿರಿ ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಇವುಗಳನ್ನು ಸಹ ನೋಡಿರಿ : ಅಧಿಕಾರ, ಶಿಷ್ಯ, ಯಾಕೋಬ (ಜೆಬೆದಾಯನ ಮಗ), ಪೌಲ, ಹನ್ನೆರಡು)

ಸತ್ಯವೇದದ ಉಲ್ಲೇಖಗಳು:

ಸತ್ಯವೇದದ ಕಥೆಗಳಿಂದ ಉದಾಹರಣೆಗಳು:

  • 26:10 ಯೇಸು ಹನ್ನೆರಡು ಮಂದಿಯನ್ನು ಆರಿಸಿಕೊಂಡನು, ಅವರೇ ಆತನ __ ಅಪೊಸ್ತಲರು __ ಎಂದು ಕರೆಯಲ್ಪಟ್ಟವರು. __ ಅಪೊಸ್ತಲರು __ಯೇಸುವಿನೋಟ್ಟಿಗೆ ಪ್ರಯಾಣ ಮಾಡುತ್ತಾ ಆತನಿಂದ ಕಲಿತುಕೊಂಡರು.
  • 30:01 ಯೇಸು ಅನೇಕ ಗ್ರಾಮಗಳಲ್ಲಿ ಜನರಿಗೆ ಬೋಧಿಸುವುದಕ್ಕೆ ಮತ್ತು ಪ್ರಸಂಗಿಸುವುದಕ್ಕೆ ತನ್ನ __ ಅಪೊಸ್ತಲರನ್ನು __ ಕಳುಹಿಸಿದರು.
  • 38:02 ಯೂದನು ಯೇಸುವಿನ __ ಅಪೊಸ್ತಲರಲ್ಲಿ __ ಒಬ್ಬರಾಗಿದ್ದರು. ಇವನು __ ಅಪೊಸ್ತಲರ __ ಹಣದ ಚೀಲಕ್ಕೆ ಜವಾಬ್ದಾರಿ ವಹಿಸಿದ್ದನು, ಆದರೆ ಆತನು ಹಣವನ್ನು ಪ್ರೀತಿಸಿದ್ದನು ಮತ್ತು ಅನೇಕಸಲ ಆ ಚೀಲದಿಂದ ಹಣವನ್ನು ಕದ್ದಿದ್ದನು.
  • 43:13 ಶಿಷ್ಯರೆಲ್ಲರೂ ತಮ್ಮನು ತಾವು __ ಅಪೊಸ್ತಲರ __ ಬೋಧನೆ, ಸಹವಾಸ, ಸೇರಿ ಊಟಮಾಡುವುದು, ಮತ್ತು ಪ್ರಾರ್ಥನೆಗಳಲ್ಲಿ ಕಾರ್ಯನಿರತರಾಗಿದ್ದರು.
  • 46:08 ವಿಶ್ವಾಸಿಯಾಗಿದ್ದ ಬಾರ್ನಬ ಸೌಲನನ್ನು __ ಅಪೊಸ್ತಲರ __ ಬಳಿಗೆ ಕರೆದುಕೊಂಡು ಬಂದನು ಮತ್ತು ಸೌಲನು ದಮಸ್ಕದಲ್ಲಿ ಯಾವರೀತಿ ಧೈರ್ಯದಿಂದ ಸುವಾರ್ತೆಯನ್ನು ಸಾರಿದನೆಂದು ಅವರಿಗೆ ತಿಳಿಸಿದನು.

ಪದದ ದತ್ತಾಂಶ:

  • Strong's: G06510, G06520, G24910, G53760, G55700