36 lines
5.8 KiB
Markdown
36 lines
5.8 KiB
Markdown
# ಅಪೊಸ್ತಲ, ಅಪೊಸ್ತಲತ್ವ
|
|
|
|
## ಅರ್ಥವಿವರಣೆ:
|
|
|
|
“ಅಪೊಸ್ತಲರು” ಎನ್ನುವವರು ದೇವರ ಕುರಿತಾಗಿ ಮತ್ತು ಆತನ ರಾಜ್ಯದ ಕುರಿತಾಗಿ ಬೋಧಿಸುವುದಕ್ಕೆ ಯೇಸುವಿನಿಂದ ಕಳುಹಿಸಲ್ಪಟ್ಟವರು. “ಅಪೊಸ್ತಲತ್ವ” ಎನ್ನುವ ಪದವು ಅಪೊಸ್ತಲರಾಗಿ ನೇಮಿಸಲ್ಪಟ್ಟಿರುವವರ ಅಧಿಕಾರವನ್ನು ಮತ್ತು ಸ್ಥಾನವನ್ನು ಸೂಚಿಸುತ್ತದೆ.
|
|
|
|
“ಅಪೊಸ್ತಲ” ಎನ್ನುವ ಪದಕ್ಕೆ “ಒಂದು ವಿಶೇಷವಾದ ಉದ್ದೇಶಕ್ಕಾಗಿ ಹೊರಗೆ ಕಳುಹಿಸಲ್ಪಟ್ಟವರು” ಎಂದರ್ಥ. ಯಾರಿಂದ ಅಪೊಸ್ತಲರಾಗಿ ಕಳುಹಿಸಲ್ಪಡುತ್ತಾರೋ ಅವರಿಗಿರುವ ಅಧಿಕಾರವನ್ನೇ ಅಪೊಸ್ತಲರೂ ಹೊಂದಿರುತ್ತಾರೆ.
|
|
|
|
* ಯೇಸುವಿನ ಅತೀ ಹತ್ತಿರದ ಹನ್ನೆರಡು ಮಂದಿ ಶಿಷ್ಯರು ಮೊಟ್ಟ ಮೊದಲ ಅಪೊಸ್ತಲರಾದರು. ಇತರರು, ಎಂದರೆ ಪೌಲ ಮತ್ತು ಯಾಕೋಬ, ಸಹ ಅಪೊಸ್ತಲರಾದರು.
|
|
* ದೇವರ ಶಕ್ತಿಯಿಂದ, ಅಪೊಸ್ತಲರು ಧೈರ್ಯವಾಗಿ ಸುವಾರ್ತೆಯನ್ನು ಸಾರಿದರು ಮತ್ತು ಅನೇಕ ಜನರನ್ನು ಗುಣಪಡಿಸಿದರು, ಮತ್ತು ಜನರೊಳಗಿಂದ ದೆವ್ವಗಳೆಲ್ಲವು ಹೊರಬರುವಂತೆ ಅವರು ಮಾಡಿದರು.
|
|
|
|
## ಅನುವಾದ ಸಲಹೆಗಳು:
|
|
|
|
* “ಅಪೊಸ್ತಲ” ಎನ್ನುವ ಪದವನ್ನು “ಹೊರಗೆ ಕಳುಹಿಸಲ್ಪಟ್ಟ ಒಬ್ಬ ವ್ಯಕ್ತಿ” ಅಥವಾ “ಕಳುಹಿಸಲ್ಪಟ್ಟ ವ್ಯಕ್ತಿ” ಅಥವಾ “ಜನರಿಗೆ ದೇವರ ಸಂದೇಶವನ್ನು ಸಾರುವುದಕ್ಕೆ ಹೊರಗೆ ಹೋಗುವುದಕ್ಕೆ ಕರೆಯಲ್ಪಟ್ಟ ವ್ಯಕ್ತಿ” ಎನ್ನುವ ಪದಗಳಿಂದ ಅಥವಾ ನುಡಿಗಟ್ಟಿನಿಂದಲೂ ಅನುವಾದ ಮಾಡಬಹುದು.
|
|
* “ಅಪೊಸ್ತಲ” ಮತ್ತು “ಶಿಷ್ಯ” ಎನ್ನುವ ಪದಗಳನ್ನು ಬೇರೆ ಬೇರೆಯಾಗಿ ಅನುವಾದ ಮಾಡುವುದು ಇಲ್ಲಿ ತುಂಬಾ ಪ್ರಾಮುಖ್ಯ.
|
|
* ಅದೇರೀತಿ ಈ ಪದವನ್ನು ಜಾತೀಯ ಭಾಷೆಯಲ್ಲಿ ಅಥವಾ ಸ್ಥಳೀಯ ಭಾಷೆಯಲ್ಲಿ ಸತ್ಯವೇದದ ಅನುವಾದದಲ್ಲಿ ಯಾವರೀತಿ ಅನುವಾದ ಮಾಡಿದ್ದಾರೆಂಬುದನ್ನು ಕೂಡ ಪರಿಗಣಿಸಿರಿ. (ನೋಡಿರಿ [ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-unknown))
|
|
|
|
(ಇವುಗಳನ್ನು ಸಹ ನೋಡಿರಿ : [ಅಧಿಕಾರ](../kt/authority.md), [ಶಿಷ್ಯ](../kt/disciple.md), [ಯಾಕೋಬ (ಜೆಬೆದಾಯನ ಮಗ)](../names/jamessonofzebedee.md), [ಪೌಲ](../names/paul.md), [ಹನ್ನೆರಡು](../kt/thetwelve.md))
|
|
|
|
## ಸತ್ಯವೇದದ ಉಲ್ಲೇಖಗಳು:
|
|
|
|
* [ಯೂದ 1:17-19](rc://*/tn/help/jud/01/17)
|
|
* [ಲೂಕ 9:12-14](rc://*/tn/help/luk/09/12)
|
|
|
|
## ಸತ್ಯವೇದದ ಕಥೆಗಳಿಂದ ಉದಾಹರಣೆಗಳು:
|
|
|
|
* __[26:10](rc://*/tn/help/obs/26/10)__ ಯೇಸು ಹನ್ನೆರಡು ಮಂದಿಯನ್ನು ಆರಿಸಿಕೊಂಡನು, ಅವರೇ ಆತನ __ ಅಪೊಸ್ತಲರು __ ಎಂದು ಕರೆಯಲ್ಪಟ್ಟವರು. __ ಅಪೊಸ್ತಲರು __ಯೇಸುವಿನೋಟ್ಟಿಗೆ ಪ್ರಯಾಣ ಮಾಡುತ್ತಾ ಆತನಿಂದ ಕಲಿತುಕೊಂಡರು.
|
|
* __[30:01](rc://*/tn/help/obs/30/01)__ ಯೇಸು ಅನೇಕ ಗ್ರಾಮಗಳಲ್ಲಿ ಜನರಿಗೆ ಬೋಧಿಸುವುದಕ್ಕೆ ಮತ್ತು ಪ್ರಸಂಗಿಸುವುದಕ್ಕೆ ತನ್ನ __ ಅಪೊಸ್ತಲರನ್ನು __ ಕಳುಹಿಸಿದರು.
|
|
* __[38:02](rc://*/tn/help/obs/38/02)__ ಯೂದನು ಯೇಸುವಿನ __ ಅಪೊಸ್ತಲರಲ್ಲಿ __ ಒಬ್ಬರಾಗಿದ್ದರು. ಇವನು __ ಅಪೊಸ್ತಲರ __ ಹಣದ ಚೀಲಕ್ಕೆ ಜವಾಬ್ದಾರಿ ವಹಿಸಿದ್ದನು, ಆದರೆ ಆತನು ಹಣವನ್ನು ಪ್ರೀತಿಸಿದ್ದನು ಮತ್ತು ಅನೇಕಸಲ ಆ ಚೀಲದಿಂದ ಹಣವನ್ನು ಕದ್ದಿದ್ದನು.
|
|
* __[43:13](rc://*/tn/help/obs/43/13)__ ಶಿಷ್ಯರೆಲ್ಲರೂ ತಮ್ಮನು ತಾವು __ ಅಪೊಸ್ತಲರ __ ಬೋಧನೆ, ಸಹವಾಸ, ಸೇರಿ ಊಟಮಾಡುವುದು, ಮತ್ತು ಪ್ರಾರ್ಥನೆಗಳಲ್ಲಿ ಕಾರ್ಯನಿರತರಾಗಿದ್ದರು.
|
|
* __[46:08](rc://*/tn/help/obs/46/08)__ ವಿಶ್ವಾಸಿಯಾಗಿದ್ದ ಬಾರ್ನಬ ಸೌಲನನ್ನು __ ಅಪೊಸ್ತಲರ __ ಬಳಿಗೆ ಕರೆದುಕೊಂಡು ಬಂದನು ಮತ್ತು ಸೌಲನು ದಮಸ್ಕದಲ್ಲಿ ಯಾವರೀತಿ ಧೈರ್ಯದಿಂದ ಸುವಾರ್ತೆಯನ್ನು ಸಾರಿದನೆಂದು ಅವರಿಗೆ ತಿಳಿಸಿದನು.
|
|
|
|
## ಪದದ ದತ್ತಾಂಶ:
|
|
|
|
* Strong's: G06510, G06520, G24910, G53760, G55700
|