3.6 KiB
3.6 KiB
ಹನ್ನೆರಡು, ಹನ್ನೊಂದು
ಪದದ ಅರ್ಥವಿವರಣೆ:
“ಹನ್ನೆರಡು” ಎನ್ನುವ ಪದವು ಯೇಸು ತನಗೆ ಶಿಷ್ಯರಾಗಿರುವುದಕ್ಕೆ ಅಥವಾ ಅಪೊಸ್ತಲರಾಗಿರುವುದಕ್ಕೆ ಆಯ್ಕೆ ಮಾಡಿಕೊಂಡಿರುವ ಹನ್ನೆರಡು ಮಂದಿಯನ್ನು ಸೂಚಿಸುತ್ತದೆ. ಯೂದಾನು ತನ್ನನ್ನು ತಾನು ಸಾಯಿಸಿಕೊಂಡನಂತರ, ಅವರು “ಹನ್ನೊಂದು” ಮಂದಿ ಕರೆಯಲ್ಪಟ್ಟರು.
- ಯೇಸುವಿಗೆ ಇವರನ್ನು ಬಿಟ್ಟು ಇತರ ಶಿಷ್ಯರು ಅನೇಕಮಂದಿ ಇದ್ದಿದ್ದರು, ಆದರೆ “ಹನ್ನೆರಡು” ಎನ್ನುವ ಈ ಬಿರುದು ಯೇಸುವಿಗೆ ತುಂಬಾ ಹತ್ತಿರವಾಗಿರುವ ಜನರನ್ನು ಪ್ರತ್ಯೇಕಿಸಿ ತೋರಿಸುತ್ತದೆ.
- ಈ ಹನ್ನೆರಡು ಮಂದಿ ಶಿಷ್ಯರ ಹೆಸರುಗಳು ಮತ್ತಾಯ 10, ಮಾರ್ಕ 3, ಮತ್ತು ಲೂಕ 6 ಅಧ್ಯಾಯಗಳಲ್ಲಿ ಪಟ್ಟಿ ಮಾಡಿ ದಾಖಲಿಸಲಾಗಿರುತ್ತದೆ.
- ಕೆಲವೊಂದುಬಾರಿ ಯೇಸುವು ಪರಲೋಕಕ್ಕೆ ಹಿಂದುರಿಗಿ ಹೋದಾಗ, “ಹನ್ನೊಂದು” ಮಂದಿ ಯೂದನ ಸ್ಥಾನದಲ್ಲಿರುವುದಕ್ಕೆ ಮತ್ತೀಯ ಎನ್ನುವ ಹೆಸರಿನ ಶಿಷ್ಯನನ್ನು ಆಯ್ಕೆ ಮಾಡಿಕೊಂಡರು. ಆದನಂತರ, ಅವರು ತಿರುಗಿ “ಹನ್ನೆರಡು” ಎಂಬುದಾಗಿ ಕರೆಯಲ್ಪಟ್ಟರು.
ಅನುವಾದ ಸಲಹೆಗಳು:
- ಅನೇಕ ಭಾಷೆಗಳಲ್ಲಿ ಇದಕ್ಕೆ ನಾಮಪದವನ್ನು ಜೋಡಿಸುವುದು ಅತೀ ಸ್ವಾಭಾವಿಕವಾಗಿರುತ್ತದೆ ಅಥವಾ ತುಂಬಾ ಸ್ಪಷ್ಟವಾಗಿರುತ್ತದೆ, “ಹನ್ನೆರಡು ಮಂದಿ ಅಪೊಸ್ತಲರು” ಅಥವಾ “ಯೇಸುವಿನ ಹನ್ನೆರಡು ಮಂದಿ ಹತ್ತಿರವಾದ ಶಿಷ್ಯರು” ಎಂದು ಹೇಳಲಾಗುತ್ತದೆ.
- “ಹನ್ನೊಂದು” ಎನ್ನುವ ಪದವನ್ನು “ಉಳಿದ ಯೇಸುವಿನ ಹನ್ನೊಂದು ಮಂದಿ ಶಿಷ್ಯರು” ಎಂದೂ ಅನುವಾದ ಮಾಡಬಹುದು.
- ಕೆಲವೊಂದು ಅನುವಾದಗಳಲ್ಲಿ ಇವು ಬಿರುದುಗಳಾಗಿ ಕೊಡಲ್ಪಟ್ಟಿವೆ ಎಂದು ತೋರಿಸುವುದಕ್ಕೆ “ಹನ್ನೆರಡು” ಮತ್ತು “ಹನ್ನೊಂದು” ಎನ್ನುವ ಪದಗಳಲ್ಲಿನ ಮೊದಲನೇ ಅಕ್ಷರವನ್ನು ದೊಡ್ಡದಾಗಿ ಉಪಯೋಗಿಸುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲ, ಶಿಷ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G1427, G1733