kn_tw/bible/kt/thetwelve.md

31 lines
3.6 KiB
Markdown

# ಹನ್ನೆರಡು, ಹನ್ನೊಂದು
## ಪದದ ಅರ್ಥವಿವರಣೆ:
“ಹನ್ನೆರಡು” ಎನ್ನುವ ಪದವು ಯೇಸು ತನಗೆ ಶಿಷ್ಯರಾಗಿರುವುದಕ್ಕೆ ಅಥವಾ ಅಪೊಸ್ತಲರಾಗಿರುವುದಕ್ಕೆ ಆಯ್ಕೆ ಮಾಡಿಕೊಂಡಿರುವ ಹನ್ನೆರಡು ಮಂದಿಯನ್ನು ಸೂಚಿಸುತ್ತದೆ. ಯೂದಾನು ತನ್ನನ್ನು ತಾನು ಸಾಯಿಸಿಕೊಂಡನಂತರ, ಅವರು “ಹನ್ನೊಂದು” ಮಂದಿ ಕರೆಯಲ್ಪಟ್ಟರು.
* ಯೇಸುವಿಗೆ ಇವರನ್ನು ಬಿಟ್ಟು ಇತರ ಶಿಷ್ಯರು ಅನೇಕಮಂದಿ ಇದ್ದಿದ್ದರು, ಆದರೆ “ಹನ್ನೆರಡು” ಎನ್ನುವ ಈ ಬಿರುದು ಯೇಸುವಿಗೆ ತುಂಬಾ ಹತ್ತಿರವಾಗಿರುವ ಜನರನ್ನು ಪ್ರತ್ಯೇಕಿಸಿ ತೋರಿಸುತ್ತದೆ.
* ಈ ಹನ್ನೆರಡು ಮಂದಿ ಶಿಷ್ಯರ ಹೆಸರುಗಳು ಮತ್ತಾಯ 10, ಮಾರ್ಕ 3, ಮತ್ತು ಲೂಕ 6 ಅಧ್ಯಾಯಗಳಲ್ಲಿ ಪಟ್ಟಿ ಮಾಡಿ ದಾಖಲಿಸಲಾಗಿರುತ್ತದೆ.
* ಕೆಲವೊಂದುಬಾರಿ ಯೇಸುವು ಪರಲೋಕಕ್ಕೆ ಹಿಂದುರಿಗಿ ಹೋದಾಗ, “ಹನ್ನೊಂದು” ಮಂದಿ ಯೂದನ ಸ್ಥಾನದಲ್ಲಿರುವುದಕ್ಕೆ ಮತ್ತೀಯ ಎನ್ನುವ ಹೆಸರಿನ ಶಿಷ್ಯನನ್ನು ಆಯ್ಕೆ ಮಾಡಿಕೊಂಡರು. ಆದನಂತರ, ಅವರು ತಿರುಗಿ “ಹನ್ನೆರಡು” ಎಂಬುದಾಗಿ ಕರೆಯಲ್ಪಟ್ಟರು.
## ಅನುವಾದ ಸಲಹೆಗಳು:
* ಅನೇಕ ಭಾಷೆಗಳಲ್ಲಿ ಇದಕ್ಕೆ ನಾಮಪದವನ್ನು ಜೋಡಿಸುವುದು ಅತೀ ಸ್ವಾಭಾವಿಕವಾಗಿರುತ್ತದೆ ಅಥವಾ ತುಂಬಾ ಸ್ಪಷ್ಟವಾಗಿರುತ್ತದೆ, “ಹನ್ನೆರಡು ಮಂದಿ ಅಪೊಸ್ತಲರು” ಅಥವಾ “ಯೇಸುವಿನ ಹನ್ನೆರಡು ಮಂದಿ ಹತ್ತಿರವಾದ ಶಿಷ್ಯರು” ಎಂದು ಹೇಳಲಾಗುತ್ತದೆ.
* “ಹನ್ನೊಂದು” ಎನ್ನುವ ಪದವನ್ನು “ಉಳಿದ ಯೇಸುವಿನ ಹನ್ನೊಂದು ಮಂದಿ ಶಿಷ್ಯರು” ಎಂದೂ ಅನುವಾದ ಮಾಡಬಹುದು.
* ಕೆಲವೊಂದು ಅನುವಾದಗಳಲ್ಲಿ ಇವು ಬಿರುದುಗಳಾಗಿ ಕೊಡಲ್ಪಟ್ಟಿವೆ ಎಂದು ತೋರಿಸುವುದಕ್ಕೆ “ಹನ್ನೆರಡು” ಮತ್ತು “ಹನ್ನೊಂದು” ಎನ್ನುವ ಪದಗಳಲ್ಲಿನ ಮೊದಲನೇ ಅಕ್ಷರವನ್ನು ದೊಡ್ಡದಾಗಿ ಉಪಯೋಗಿಸುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : [ಅಪೊಸ್ತಲ](../kt/apostle.md), [ಶಿಷ್ಯ](../kt/disciple.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಕೊರಿಂಥ.15:5-7](rc://*/tn/help/1co/15/05)
* [ಅಪೊ.ಕೃತ್ಯ.06:2-4](rc://*/tn/help/act/06/02)
* [ಲೂಕ.09:1-2](rc://*/tn/help/luk/09/01)
* [ಲೂಕ.18:31-33](rc://*/tn/help/luk/18/31)
* [ಮಾರ್ಕ.10:32-34](rc://*/tn/help/mrk/10/32)
* [ಮತ್ತಾಯ.10:5-7](rc://*/tn/help/mat/10/05)
## ಪದ ಡೇಟಾ:
* Strong's: G1427, G1733