kn_tw/bible/kt/anoint.md

6.2 KiB

ಅಭಿಷೇಕಿಸು, ಅಭಿಷೇಕಿಸಿದ್ದು, ಅಭಿಷೇಕ

ಪದದ ಅರ್ಥವಿವರಣೆ:

“ಅಭಿಷೇಕ” ಎಂಬ ಪದವು ಒಬ್ಬ ವ್ಯಕ್ತಿ ಅಥವಾ ವಸ್ತುವಿನ ಮೇಲೆ ಎಣ್ಣೆಯನ್ನು ಹಚ್ಚುವುದು ಅಥವಾ ಸುರಿಯುವುದು ಎಂದರ್ಥ. ಕೆಲವೊಮ್ಮೆ ಎಣ್ಣೆಯಲ್ಲಿ ಪರಿಮಳ ದ್ರವ್ಯಗಳನ್ನು ಬೆರಸಲಾಗುತ್ತದೆ. ಇದು ಒಂದು ಒಳ್ಳೇಯ ಸುಗಂಧದ ವಾಸನೆಯನ್ನು ನೀಡುತ್ತದೆ. ಸತ್ಯವೇದದ ಸಮಯಗಳಲ್ಲಿ, ಎಣ್ಣೆಯಿಂದ ಅಭಿಷೇಕಿಸಲು ಅನೇಕ ಕಾರಣಗಳಿದ್ದವು.

  • ಹಳೇ ಒಡಂಬಡಿಕೆಯಲ್ಲಿ, ಯಾಜಕರು, ಅರಸರು, ಮತ್ತು ಪ್ರವಾದಿಗಳನ್ನುದೇವರ ವಿಶೇಷವಾದ ಸೇವೆಗೋಸ್ಕರ ಪ್ರತ್ಯೇಕಿಸಲು ಎಣ್ಣೆಯಿಂದ ಅಭಿಷೇಕಿಸಲಾಗುತ್ತಿತ್ತು.
  • ದೇವರನ್ನು ಮಹಿಮೆಪಡಿಸುವುದಕ್ಕೆ ಮತ್ತು ಆರಾಧಿಸುವುದಕ್ಕೆ ಉಪಯೋಗಿಸಲ್ಪಡುತ್ತಿರುವ ಯಜ್ಞವೇದಿಗಳು ಅಥವಾ ಗುಡಾರ ಎನ್ನುವ ವಸ್ತುಗಳ ಮೇಲೆ ಎಣ್ಣೆಯನ್ನು ಸುರಿಸಿ ಅಭಿಷೇಕ ಮಾಡಲಾಗುತ್ತಿತ್ತು.
  • ಹೊಸ ಒಡಂಬಡಿಕೆಯಲ್ಲಿ ಅನಾರೋಗ್ಯ ಜನರ ಸ್ವಸ್ಥತೆಗಾಗಿ ಎಣ್ಣೆಯಿಂದ ಅಭಿಷೇಕಿಸಿಲಾಗುತ್ತಿತ್ತು.
  • ಆರಾಧನೆ ಕ್ರಿಯೆಯಾಗಿ ತೋರ್ಪಡುವಂತೆ ಒಬ್ಬ ಸ್ತ್ರೀಯಿಂದ ಸುಗಂಧ ದ್ರವ್ಯದ ಎಣ್ಣೆಯೊಂದಿಗೆ ಯೇಸು ಅಭಿಷೇಕಿಸಲ್ಪಟ್ಟಿರುವ ಸಂದರ್ಭಗಳನ್ನು ಹೊಸ ಒಡಂಬಡಿಕೆಯಲ್ಲಿ ಎರಡು ಸಾರಿ ದಾಖಲಿಸಿದ್ದನ್ನು ನಾವು ನೋಡಬಹುದು. ಇದನ್ನು ಮಾಡುವ ಮೂಲಕ ಅವಳು ತನ್ನ ಭವಿಷ್ಯದ ಸಮಾಧಿಗಾಗಿ ಸಿದ್ಧಮಾಡುತ್ತಿದ್ದಾಳೆಂದು ಯೇಸು ಪ್ರತಿಕ್ರಿಯಿಸಿದನು.
  • ಯೇಸು ಸತ್ತ ನಂತರ, ಆತನ ದೇಹವನ್ನು ತನ್ನ ಸ್ನೇಹಿತರು ಎಣ್ಣೆಗಳಿಂದ ಮತ್ತು ಸುಗಂಧ ದ್ರವ್ಯಗಳಿಂದ ಅಭಿಷೇಕ ಮಾಡಿ ಸಮಾಧಿಗೋಸ್ಕರ ಸಿದ್ಧಗೊಳಿಸಿದ್ದರು.
  • “ಮೆಸ್ಸೀಯನು” (ಇಬ್ರಿಯ) ಮತ್ತು “ಕ್ರಿಸ್ತನು” (ಗ್ರೀಕ್) ಎನ್ನುವ ಬಿರುದುಗಳಿಗೆ “ಅಭಿಷೇಕಿಸಲ್ಪಟ್ಟವನು” ಎಂದರ್ಥ.
  • ಯೇಸು ಮೆಸ್ಸೀಯ ಅಂದರೆ ಪ್ರವಾದಿಯಾಗಿರಲು, ಮಹಾ ಯಾಜಕನಾಗಿರಲು ಮತ್ತು ಅರಸನಾಗಿರಲು ಆಯ್ಕೆಮಾಡಲ್ಪಟ್ಟಿರುವನು ಮತ್ತು ಅಭಿಷೇಕ ಹೊಂದಿದವನೂ ಎಂದರ್ಥ.
  • ಸತ್ಯವೇದದ ಸಮಯಗಳಲ್ಲಿ, ಒಬ್ಬ ಸ್ತ್ರೀಯು ತನ್ನನ್ನು ತಾನು ಲೈಂಗಿಕವಾಗಿ ಆಕರ್ಷಣೆಯುಳ್ಳವಳಾಗಿ ಮಾಡಿಕೊಳ್ಳಲು ಎಣ್ಣೆಯಿಂದ ತನ್ನನ್ನು ತಾನೇ ಅಭಿಷೇಕಿಸುತ್ತಿದ್ದಳು.

ಅನುವಾದ ಸಲಹೆಗಳು:

  • ಸಂದರ್ಭಕ್ಕೆ ತಕ್ಕಹಾಗೆ, “ಅಭಿಷೇಕ” ಎನ್ನುವ ಪದವನ್ನು “ಎಣ್ಣೆಯನ್ನು ಹೊಯ್ಯುವುದು” ಅಥವಾ “ಎಣ್ಣೆಯನ್ನು ಹಚ್ಚುವುದು” ಅಥವಾ “ಸುಗಂಧ ದ್ರವ್ಯದ ಎಣ್ಣೆಯಿಂದ ಪ್ರತಿಷ್ಠೆ ಮಾಡುವುದು” ಎಂದೂ ಅನುವಾದ ಮಾಡಬಹುದು.
  • “ಅಭಿಷೇಕಿಸಿದ್ದು” ಎನ್ನುವ ಪದವನ್ನು “ಎಣ್ಣೆಯಿಂದ ಪ್ರತಿಷ್ಠೆ ಮಾಡಲ್ಪಟ್ಟವನು” ಅಥವಾ “ನೇಮಿಸಲ್ಪಟ್ಟವನು” ಅಥವಾ “ಪ್ರತಿಷ್ಠೆ ಮಾಡಲ್ಪಟ್ಟವನು” ಎಂದೂ ಅನುವಾದ ಮಾಡಬಹುದು.
  • “ಅಭಿಷೇಕ” ಎನ್ನುವ ಪದವು ಕೆಲವು ಸಂದರ್ಭಗಳಲ್ಲಿ “ನೇಮಕ” ಎಂದೂ ಅನುವಾದ ಮಾಡಬಹುದು.
  • “ಅಭಿಷೇಕಿಸಲ್ಪಟ್ಟ ಯಾಜಕ” ಎನ್ನುವ ಮಾತನ್ನು “ಎಣ್ಣೆಯಿಂದ ಪ್ರತಿಷ್ಠೆ ಮಾಡಲ್ಪಟ್ಟ ಯಾಜಕನು” ಅಥವಾ “ಎಣ್ಣೆಯನ್ನು ಸುರಿಸುವುದರ ಮೂಲಕ ಪ್ರತ್ಯೇಕಿಸಲ್ಪಟ್ಟ ಯಾಜಕ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕ್ರಿಸ್ತ, ಪ್ರತಿಷ್ಠೆ, ಮಹಾಯಾಜಕ, ಯೆಹೂದ್ಯರ ಅರಸ, ಯಾಜಕ, ಪ್ರವಾದಿ)

ಸತ್ಯವೇದದ ಉಲ್ಲೇಖ ವಚನಗಳು:

ಪದದ ದತ್ತಾಂಶ:

  • Strong's: H47, H430, H1101, H1878, H3323, H4397, H4398, H4473, H4886, H4888, H4899, H5480, H8136, G32, G218, G743, G1472, G2025, G3462, G5545, G5548