kn_tw/bible/kt/abomination.md

4.5 KiB

ಅಸಹ್ಯ, ಅಸಹ್ಯಕರ

ಅರ್ಥವಿವರಣೆ:

“ಅಸಹ್ಯ” ಎನ್ನುವ ಪದವು ಹೇಸಿಗೆಯನ್ನು ಉಂಟುಮಾಡುವ ವಿಷಯಗಳಿಗೆ ಅಥವಾ ಅತೀ ಹೆಚ್ಚಾಗಿ ಇಷ್ಟವಾಗದ ವಿಷಯಗಳಿಗೆ ಸೂಚಿಸುವುದಕ್ಕೆ ಉಪಯೋಗಿಸಲಾಗುತ್ತದೆ.

  • ಐಗುಪ್ತರು ಇಬ್ರಿಯರನ್ನು “ಅಸಹ್ಯ” ಜನರಾಗಿ ಕಾಣುತ್ತಿದ್ದರು. ಇದರ ಅರ್ಥವೇನೆಂದರೆ ಐಗುಪ್ತರು ಇಬ್ರಿಯರನ್ನು ಇಷ್ಟಪಡುತ್ತಿರಲಿಲ್ಲ ಮತ್ತು ಅವರ ಬಳಿಗೆ ಹೋಗುತ್ತಿರಲಿಲ್ಲ ಅಥವಾ ಅವರೊಂದಿಗೆ ಸಹವಾಸ ಮಾಡುವುದಕ್ಕೆ ಇವರು ಇಷ್ಟಪಡುತ್ತಿರಲಿಲ್ಲ.
  • ಕೆಲವೊಂದು ವಿಷಯಗಳನ್ನು “ಯೆಹೋವನಿಗೆ ಅಸಹ್ಯ” ಎಂದು ಸತ್ಯವೇದವು ಕರೆಯುತ್ತದೆ, ಆ ವಿಷಯಗಳಲ್ಲಿ ಸುಳ್ಳಾಡುವುದು, ಗರ್ವ, ಮನುಷ್ಯರನ್ನು ಬಲಿಕೊಡುವುದು, ವಿಗ್ರಹಗಳಿಗೆ ಆರಾಧನೆ ಮಾಡುವುದು, ನರಹತ್ಯೆ, ಮತ್ತು ಲೈಂಗಿಕ ಪಾಪಗಳಾದ ವ್ಯಭಿಚಾರ ಮತ್ತು ಸಲಿಂಗ ಕಾರ್ಯಗಳನ್ನು ಒಳಗೊಂಡಿರುತ್ತದೆ.
  • ಯೇಸು ಕ್ರಿಸ್ತನು ಅಂತ್ಯಕಾಲದ ಕುರಿತಾಗಿ ತನ್ನ ಶಿಷ್ಯರಿಗೆ ಬೋಧನೆ ಮಾಡುತ್ತಿರುವಾಗ, ದೇವರಿಗೆ ವಿರುದ್ಧವಾಗಿ ತಿರಿಗಿಬೀಳುವ , ಆರಾಧನೆಯ ಸ್ಥಳವನ್ನು ನಾಶಗೊಳಿಸುವುದಾಗಿರುವ “ಹಾಳು ಮಾಡುವ ಅಸಹ್ಯ ವಸ್ತುಗಳ” ಕುರಿತಾಗಿ ಪ್ರವಾದಿಯಾದ ದಾನಿಯೇಲನ ಮುಖಾಂತರ ಬಂದಿರುವ ಪ್ರವಾದನೆಯನ್ನು ಸೂಚಿಸಿದನು.

ಅನುವಾದ ಸಲಹೆಗಳು:

  • “ಅಸಹ್ಯ” ಎನ್ನುವ ಪದವನ್ನು “ದೇವರು ದ್ವೇಷಿಸುವ ಕಾರ್ಯಗಳು” ಅಥವಾ “ಅಸಹ್ಯವಾದ ಕೃತ್ಯಗಳು” ಅಥವಾ “ಅಸಹ್ಯವಾದ ಆಚರಣೆ” ಅಥವಾ “ಅತೀ ಕೆಟ್ಟ ದುಷ್ಟ ಕಾರ್ಯ” ಎಂಬುದಾಗಿ ಕೂಡ ಅನುವಾದ ಮಾಡಬಹುದು.
  • ಸಂದರ್ಭ ತಕ್ಕಂತೆ, “ಅಸಹ್ಯವಾದ ಕಾರ್ಯ” ಎನ್ನುವ ಮಾತನ್ನು “ಅತಿ ಹೆಚ್ಚಾಗಿ ದ್ವೇಷಿಸಲ್ಪಡುವದು” ಅಥವಾ “ಅತೀ ನೀಚವಾದ ಕಾರ್ಯ” ಅಥವಾ “ಸ್ವೀಕಾರ ಮಾಡಲಾಗದ ಕಾರ್ಯ” ಅಥವಾ “ಅತೀ ಹೆಚ್ಚಾಗಿ ದ್ವೇಷಿಸುವುದಕ್ಕೆ, ಅಸಹ್ಯಪಟ್ಟುಕೊಳ್ಳುವುದಕ್ಕೆ ಕಾರಣವಾದ ಕಾರ್ಯ” ಎಂಬುದಾಗಿ ಅನುವಾದ ಮಾಡಬಹುದು.
  • “ಹಾಳು ಮಾಡುವ ಅಸಹ್ಯ ವಸ್ತುವು” ಎನ್ನುವ ಮಾತನ್ನು “ಜನರಿಗೆ ತುಂಬಾ ಹೆಚ್ಚಾಗಿ ಹಾನಿಯನ್ನುಂಟು ಮಾಡುವ ವಿನಾಶಕಾರಿಯಾದ ವಸ್ತುವು” ಅಥವಾ “ಅತೀ ಹೆಚ್ಚಾದ ನೋವನ್ನುಂಟು ಮಾಡುವ ಅಸಹ್ಯಕರವಾದ ವಸ್ತು” ಎಂಬುದಾಗಿಯೂ ಅನುವಾದ ಮಾಡಬಹುದು.

(ಇವುಗಳನ್ನು ಸಹ ನೋಡಿರಿ : /ವ್ಯಭಿಚಾರ, /ಅಪರಿಶುದ್ಧ, /ವಿನಾಶ, /ಸುಳ್ಳು ದೇವರು, /ಯಜ್ಞ)

ಸತ್ಯವೇದದ ಉಲ್ಲೇಖಗಳು:

ಪದದ ದತ್ತಾಂಶ:

  • Strong's: H0887, H6292, H8251, H8262, H8263, H8441, G9460