4.5 KiB
4.5 KiB
ವ್ಯಭಿಚಾರ, ಹಾದರ, ವ್ಯಭಿಚಾರಿ, ವ್ಯಭಿಚಾರಿಣಿ
ಅರ್ಥವಿವರಣೆ:
“ವ್ಯಭಿಚಾರ” ಎನ್ನುವ ಪದವು ಮದುವೆ ಮಾಡಿಕೊಂಡಿರುವ ವ್ಯಕ್ತಿಯು ತನ್ನ ಸಂಗಾತಿ ಅಲ್ಲದವರೊಂದಿಗೆ ಲೈಂಗಿಕ ಸಂಬಂಧ ಇಟ್ವುಕೊಂಡ ಪಾಪವನ್ನು ಸೂಚಿಸುತ್ತದೆ. ಅವರಿಬ್ಬರೂ ವ್ಯಭಿಚಾರ ಮಾಡಿದ ತಪ್ಪಿತಸ್ಥರಾಗಿರುತ್ತಾರೆ. “ಹಾದರ” ಎಂಬ ಪದವು ಈ ರೀತಿಯ ವರ್ತನೆಯ ಕುರಿತು ಅಥವಾ ಇಂತಹ ಪಾಪ ಮಾಡುವ ವ್ಯಕ್ತಿಯ ಕುರಿತು ವಿವರಿಸುತ್ತದೆ.
- “ವ್ಯಭಿಚಾರಿ” ಎನ್ನುವ ಪದವು ಸಹಜವಾಗಿ ವ್ಯಭಿಚಾರವನ್ನು ಮಾಡುವ ವ್ಯಕ್ತಿಯನ್ನು ಸೂಚಿಸುತ್ತದೆ.
- “ವ್ಯಭಿಚಾರಿಣಿ” ಎನ್ನುವ ಪದವು ಕೆಲವೊಂದು ಸಲ ನಿರ್ದಿಷ್ಟವಾಗಿ ವ್ಯಭಿಚಾರ ಮಾಡಿದ ಸ್ತ್ರೀಯನ್ನು ಸೂಚಿಸುತ್ತದೆ.
- ಗಂಡ ಹೆಂಡತಿಯರು ತಮ್ಮ ವಿವಾಹ ಒಡಂಬಡಿಕೆಯಲ್ಲಿ ಒಬ್ಬರಿಗೊಬ್ಬರು ಮಾಡಿರುವ ವಾಗ್ಧಾನಗಳನ್ನು ವ್ಯಭಿಚಾರವು ಮುರಿದುಹಾಕುತ್ತದೆ.
- ದೇವರು ಇಸ್ರಾಯೇಲ್ಯರಿಗೆ ವ್ಯಭಿಚಾರ ಮಾಡಬಾರದೆಂದು ಆಜ್ಞಾಪಿಸಿದನು.
ಅನುವಾದ ಸಲಹೆಗಳು:
- ಅನುವಾದ ಮಾಡಬೇಕಾದ ಭಾಷೆಯಲ್ಲಿ “ವ್ಯಭಿಚಾರ” ಎಂಬ ಅರ್ಥವು ಕೊಡುವ ಪದವು ಇಲ್ಲದಿದ್ದರೆ, ಈ ಪದವನ್ನು “ಇನ್ನೊಬ್ಬರ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುವುದು” ಎಂದು ಅಥವಾ “ಇನ್ನೊಬ್ಬರ ಹೆಂಡತಿಯೊಂದಿಗೆ ಅಥವಾ ಗಂಡನೊಂದಿಗೆ ಅಕ್ರಮ ಸಂಬಂಧದಲ್ಲಿರುವುದು” ಎಂದು ಅನುವಾದ ಮಾಡಬಹುದು.
- ಕೆಲವೊಂದು ಭಾಷೆಗಳಲ್ಲಿ ವ್ಯಭಿಚಾರದ ಕುರಿತಾಗಿ ಪರೋಕ್ಷವಾಗಿ, “ಇನ್ನೊಬ್ಬರ ಹೆಂಡತಿಯೊಂದಿಗೆ ಅಥವಾ ಗಂಡನೊಂದಿಗೆ ಮಲಗುವುದು” ಅಥವಾ “ಹೆಂಡತಿಗೆ ಅಪನಂಬಿಗಸ್ತರಾಗಿರುವುದು” ಎಂದು ಹೇಳುತ್ತಾರೆ. (ನೋಡಿರಿ: ಸೌಮ್ಯೋಕ್ತಿ)
(ಈ ಪದಗಳನ್ನು ಸಹ ನೋಡಿರಿ: ತಪ್ಪು ಮಾಡುವುದು, ಒಡಂಬಡಿಕೆ, ಲೈಂಗಿಕವಾದ ಅನೈತಿಕತೆ, ಇನ್ನೊಬ್ಬರೊಂದಿಗೆ ಮಲಗುವದು, ನಂಬಿಗಸ್ತಿಕೆ)
ಸತ್ಯವೇದದ ಉಲ್ಲೇಖ ವಚನಗಳು:
ಸತ್ಯವೇದದ ಕಥೆಗಳ ಉದಾಹರಣೆಗಳು:
- 13:06 “ವ್ಯಭಿಚಾರ ಮಾಡಬೇಡಿರಿ.”
- 28:02 “ವ್ಯಭಿಚಾರ ಮಾಡಬೇಡಿರಿ.”
- 34:07 “ದೇವರೇ ನಿಮಗೆ ವಂದನೆಗಳು, ಯಾಕಂದರೆ ನಾನು ಕಳ್ಳರಂತೆ, ಅನ್ಯಾಯಸ್ಥರಂತೆ, ವ್ಯಭಿಚಾರಗಳಂತೆ, ಅಥವಾ ಸುಂಕದವರಂತೆ ಪಾಪಿಯಲ್ಲ ಎಂದು ಒಬ್ಬ ಧಾರ್ಮೀಕ ನಾಯಕನು ಪ್ರಾರ್ಥನೆ ಮಾಡಿದ್ದನು.
ಪದದ ದತ್ತಾಂಶ:
- Strong's: H5003, H5004, G3428, G3429, G3430, G3431, G3432