kn_tw/bible/names/kidronvalley.md

2.9 KiB

ಕಿದ್ರೋನ್ ಕಣಿವೆ

ಸತ್ಯಾಂಶಗಳು:

ಕಿದ್ರೋನ್ ಕಣಿವೆ ಎನ್ನುವುದು ಯೆರೂಸಲೇಮಿನ ಹೊರಗಡೆ ಇರುವ ತುಂಬಾ ಆಳವಾದ ಕಣಿವೆ, ಇದು ಯೆರೂಸಲೇಮಿನ ಆಲೀವ್ ಎಣ್ಣೆ ಮರಗಳ ಪರ್ವತ ಮತ್ತು ಇದರ ಉತ್ತರ ದಿಕ್ಕಿನ ಮಧ್ಯೆದಲ್ಲಿರುತ್ತದೆ.

  • ಆ ಕಣಿವೆಯು ಸುಮಾರು 1,000 ಮೀಟರ್.ಗಳ ಆಳದಲ್ಲಿರುತ್ತದೆ ಮತ್ತು ಸುಮಾರು 32 ಕಿಲೋಮೀಟರ್ ಉದ್ದದಲ್ಲಿರುತ್ತದೆ.
  • ಅರಸನಾದ ದಾವೀದನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿ ಹೋದಾಗ, ಅವನು ಕಿದ್ರೋನ್ ಕಣಿವೆಯ ಮೂಲಕ ಆಲೀವ್ ಎಣ್ಣೆ ಮರಗಳ ಪರ್ವತಕ್ಕೆ ಹಾದು ಹೋದನು.
  • ಸುಳ್ಳು ದೇವರಗಳ ಯಜ್ಞ ವೇದಿಗಳನ್ನು ಮತ್ತು ಅದರ ಉನ್ನತ ಸ್ಥಾನಗಳನ್ನು ದಹಿಸಿ, ನಾಶಮಾಡಬೇಕೆಂದು ಯೂದಾ ಅರಸರಾದ ಯೋಷೀಯ ಮತ್ತು ಅರಸರಿಬ್ಬರೂ ಆಜ್ಞಾಪಿಸಿದರು; ಅದರ ಭಸ್ಮಗಳನ್ನು ಕಿದ್ರೋನ್ ಕಣಿವೆಯೊಳಗೆ ಹಾಕಿದರು.
  • ಅರಸನಾದ ಹಿಜ್ಕೀಯ ಆಳ್ವಿಕೆಯಲ್ಲಿ ಯಾಜಕರು ದೇವಾಲಯದಿಂದ ತೆಗೆಯುವ ಅಪವಿತ್ರವಾದವುಗಳನ್ನು ಕಿದ್ರೋನ್ ಕಣಿವೆಯೊಳಗೆ ಹಾಕುತ್ತಿದ್ದರು.
  • ದುಷ್ಟ ರಾಣಿಯಾಗಿರುವ ಅತಲ್ಯಳು ಈ ಕಣಿವೆಯಲ್ಲಿಯೇ ಕೊಂದು ಹಾಕಲ್ಪಟ್ಟಳು, ಯಾಕಂದರೆ ಈಕೆ ಅನೇಕ ದುಷ್ಟ ಕಾರ್ಯಗಳನ್ನು ಮಾಡಿದ್ದಳು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಅಬ್ಷಾಲೋಮ, ಆಸ, ಅತಲ್ಯ, ದಾವೀದ, ಸುಳ್ಳು ದೇವರು, ಹಿಜ್ಕೀಯ, ಉನ್ನತ ಸ್ಥಳಗಳು, ಯೋಷೀಯ, ಯೂದಾ, ಆಲೀವ್ ಎಣ್ಣೆ ಮರಗಳು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H5674, H6939, G2748, G5493