kn_tw/bible/names/kingdomofjudah.md

6.1 KiB

ಯೆಹೂದ, ಯೆಹೂದ ರಾಜ್ಯ

ಸತ್ಯಾಂಶಗಳು:

ಯೆಹೂದ ಕುಲ ಎನ್ನುವುದು ಇಸ್ರಾಯೇಲ್ ಹನ್ನೆರಡು ಕುಲಗಳಲ್ಲಿ ಅತಿ ದೊಡ್ಡದಾದ ಕುಲ. ಯೆಹೂದ ಕುಲವು ಯೆಹೂದ ಮತ್ತು ಬೆನ್ಯಾಮೀನ ಕುಲಗಳಿಂದ ಉಂಟಾಗಿರುತ್ತದೆ.

  • ಅರಸನಾದ ಸೊಲೊಮೋನನು ಸತ್ತುಹೋದನಂತರ, ಇಸ್ರಾಯೇಲ್ ರಾಜ್ಯವು ಎರಡು ರಾಜ್ಯಗಳಾಗಿ ವಿಂಗಡನೆಯಾಯಿತು: ಇಸ್ರಾಯೇಲ್ ಮತ್ತು ಯೆಹೂದ. ಯೆಹೂದ ರಾಜ್ಯವು ದಕ್ಷಿಣ ರಾಜ್ಯವಾಗಿರುತ್ತದೆ, ಇದು ಲವಣ ಸಮುದ್ರದ ಪಶ್ಚಿಮ ಭಾಗದಲ್ಲಿ ಕಂಡುಬರುತ್ತದೆ.
  • ಯೆಹೂದ ರಾಜ್ಯದ ರಾಜಧಾನಿ ಪಟ್ಟಣವು ಯೆರೂಸಲೇಮ್ ಆಗಿತ್ತು.
  • ಯೆಹೂದ ರಾಜ್ಯದ ಎಂಟು ಮಂದಿ ಅರಸರು ಯೆಹೋವನಿಗೆ ವಿಧೇಯರಾದರು ಮತ್ತು ಆತನನ್ನೇ ಜನರು ಆರಾಧನೆ ಮಾಡುವಂತೆ ಮಾಡಿದರು. ಯೆಹೂದದಲ್ಲಿರುವ ಇತರ ಅರಸರೆಲ್ಲರೂ ದುಷ್ಟರಾಗಿದ್ದರು ಮತ್ತು ಎಲ್ಲಾ ಜನರು ವಿಗ್ರಹಗಳಿಗೆ ಆರಾಧನೆ ಮಾಡುವಂತೆ ನಡೆಸಿದರು.
  • ಅಶ್ಯೂರಿಯರು ಇಸ್ರಾಯೇಲ್ (ಉತ್ತರ ರಾಜ್ಯ) ರಾಜ್ಯವನ್ನು ಸೋಲಿಸಿ 120 ವರ್ಷಗಳಾದನಂತರ, ಯೆಹೂದ ರಾಜ್ಯವನ್ನು ಬಾಬೆಲೋನಿಯ ದೇಶದವರು ವಶಪಡಿಸಿಕೊಂಡರು. ಬಾಬೆಲೋನಿಯನ್ನರು ಪಟ್ಟಣವನ್ನು ಮತ್ತು ದೇವಾಲಯವನ್ನು ನಾಶಗೊಳಿಸಿದರು, ಮತ್ತು ಅನೇಕಮಂದಿ ಯೆಹೂದ್ಯರನ್ನು ಸೆರೆ ಹಿಡಿದು ಬಾಬೆಲೋನಿಯಾಗೆ ಕರೆದೊಯ್ದರು.

(ಈ ಪದಗಳನ್ನು ಸಹ ನೋಡಿರಿ : ಯೆಹೂದ, ಲವಣ ಸಮುದ್ರ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 18:07_ ಅವನಿಗೆ (ರೆಹೊಬ್ಬಾಮನಿಗೆ) ಕೇವಲ ಎರಡು ಕುಲದವರು ಮಾತ್ರ ನಂಬಿಕೆಯಿಂದ ಇದ್ದರು. ಈ ಎರಡು ಕುಲಗಳು ___ ಯೆಹೂದ ರಾಜ್ಯವಾಗಿ ___ ಮಾರ್ಪಟ್ಟಿದವು.\
  • 18:10_ ___ ಯೆಹೂದ ರಾಜ್ಯವು ___ ಮತ್ತು ಇಸ್ರಾಯೇಲ್ ರಾಜ್ಯವು ಶತ್ರುಗಳಾದರು, ಮತ್ತು ಅವರು ಒಬ್ಬರಿಗೊಬ್ಬರ ವಿರುದ್ಧ ಹೋರಾಟ ಮಾಡಿಕೊಂಡರು. \
  • 18:13_ ___ ಯೆಹೂದ ಅರಸರು ____ ದಾವೀದನ ವಂಶಸ್ಥರಾಗಿದ್ದರು. ಈ ಅರಸರಲ್ಲಿ ಕೆಲವರು ಒಳ್ಳೇಯ ವ್ಯಕ್ತಿಗಳು, ನ್ಯಾಯವಾಗಿ ಪಾಲನೆ ಮಾಡಿದರು ಮತ್ತು ದೇವರನ್ನು ಆರಾಧಿಸಿದರು. ಆದರೆ ___ ಯೆಹೂದದ ___ ಅರಸರಲ್ಲಿ ಹೆಚ್ಚಿನ ಜನರು ದುಷ್ಟರು, ಭ್ರಷ್ಟರು ಮತ್ತು ಅವರು ವಿಗ್ರಹಗಳನ್ನು ಆರಾಧನೆ ಮಾಡಿದರು. \
  • 20:01_ ___ ಯೆಹೂದ ಮತ್ತು ಇಸ್ರಾಯೇಲ್ ರಾಜ್ಯಗಳೆರಡು ___ ದೇವರಿಗೆ ವಿರುದ್ಧವಾಗಿ ಪಾಪಮಾಡಿದರು.\
  • 20:05_ ದೇವರಿಗೆ ಅವಿಧೇಯರಾಗಿದ್ದಕ್ಕಾಗಿ ಮತ್ತು ಆತನಲ್ಲಿ ನಂಬಿಕೆ ಇಡದಿದ್ದಕ್ಕಾಗಿ ಇಸ್ರಯೇಲ್ ರಾಜ್ಯದ ಜನರನ್ನು ದೇವರು ಯಾವರೀತಿ ಶಿಕ್ಷಿಸಿದ್ದಾನೆಂದು ___ ಯೆಹೂದ ರಾಜ್ಯದಲ್ಲಿರುವ ___ ಜನರು ಚೆನ್ನಾಗಿ ನೋಡಿದ್ದಾರೆ. ಆದರೂ ಅವರು ವಿಗ್ರಹಗಳಿಗೆ ಆರಾಧನೆ ಮಾಡಿದರು, ಆ ವಿಗ್ರಹಗಳಲ್ಲಿ ಕಾನಾನ್ಯರ ಸುಳ್ಳು ದೇವರುಗಳೂ ಒಳಗೊಂಡಿದ್ದವು.
  • 20:06_ ಇಸ್ರಾಯೇಲ್ ರಾಜ್ಯವನ್ನು ಅಶ್ಯೂರಿಯನ್ನರು ನಾಶಗೊಳಿಸಿ ಸುಮಾರು 100 ವರ್ಷಗಳು ಆದನಂತರ, ___ ಯೆಹೂದ ರಾಜ್ಯದ ಮೇಲೆ ___ ಧಾಳಿ ಮಾಡುವುದಕ್ಕಾಗಿ ದೇವರು ಬಾಬೆಲೋನಿಯ ಅರಸನಾಗಿರುವ ನೆಬೂಕದ್ನೆಚ್ಚರನನ್ನು ಕಳುಹಿಸಿಕೊಟ್ಟರು. \
  • 20:09_ ನೆಬೂಕದ್ನೆಚ್ಚರ ಮತ್ತು ತನ್ನ ಸೈನ್ಯವು ___ ಯೆಹೂದ ರಾಜ್ಯದಲ್ಲಿರುವ ___ ಜನರೆಲ್ಲರನ್ನು ಬಾಬೆಲೋನಿಗೆ ಸೆರೆಗೊಯ್ದರು, ಆದರೆ ಹೊಲಗಳಲ್ಲಿ ಮತ್ತು ಮರಗಳ ಕೆಳಗೆ ಇರುವ ಬಡ ಜನರನ್ನು ಮಾತ್ರ ಅಲ್ಲಿಯೇ ಬಿಟ್ಟುಬಿಟ್ಟರು.

ಪದ ಡೇಟಾ:

  • Strong's: H4438, H3063