kn_tw/bible/names/absalom.md

3.0 KiB

ಅಬ್ಷಾಲೋಮ

ಸತ್ಯಾಂಶಗಳು:

ಅಬ್ಷಾಲೋಮನು ಅರಸನಾದ ದಾವೀದನಿಗೆ ಮೂರನೆಯ ಮಗನಾಗಿದ್ದನು. ಈತನು ಬಹು ಸುಂದರವಾಗಿದ್ದನು ಮತ್ತು ಕೋಪಗೊಳ್ಳುವ ಸ್ವಭಾವವನ್ನು ಹೊಂದಿದವನಾಗಿದ್ದನು.

  • ಅಬ್ಷಾಲೋಮ ತಂಗಿಯಾದ ತಾಮಾರಳು ಅವನ ಸಹೋದರನಾದ ಅಮ್ನೋನನಿಂದ ಮಾನಭಂಗಕ್ಕೆ ಗುರಿಯಾಗಿದ್ದಳು. ಅದಕ್ಕಾಗಿ ಅಬ್ಷಾಲೋಮನು ಅಮ್ನೋನನನ್ನು ಕೊಲ್ಲಬೇಕೆಂದು ಉಪಾಯ ಮಾಡಿದ್ದನು.
  • ಅಮ್ನೋನನನ್ನು ಕೊಂದನಂತರ, ಅಬ್ಷಾಲೋಮನು ತಪ್ಪಿಸಿಕೊಂಡು ಗೆಷೂರಿಗೆ (ತನ್ನ ತಾಯಿ ಬಂದಿರುವ ಸ್ಥಳಕ್ಕೆ) ಓಡಿಹೋದನು ಮತ್ತು ಅಲ್ಲಿ ಮೂರು ವರ್ಷಗಳ ಕಾಲ ಇದ್ದುಕೊಂಡಿದ್ದನು. ಇದಾದನಂತರ ಅವನು ಯೆರೂಸಲೇಮಿಗೆ ತಿರುಗಿ ಬರಬೇಕೆಂದು ಅರಸನಾದ ದಾವೀದನು ಕರೆಕಳುಗಿಸಿದನು, ಆದರೆ ಸುಮಾರು ಎರಡು ವರ್ಷಗಳ ಕಾಲ ತನ್ನ ಹತ್ತಿರಕ್ಕೆ ಬರುವುದಕ್ಕೆ ದಾವೀದನು ಅಬ್ಷಾಲೋಮನಿಗೆ ಅನುಮತಿ ಕೊಟ್ಟಿರಲಿಲ್ಲ.
  • ಅಬ್ಷಾಲೋಮನು ಕೆಲವೊಂದು ಜನರನ್ನು ಅರಸನಾದ ದಾವೀದನಿಗೆ ವಿರುದ್ಧವಾಗಿ ಎಬ್ಬಿಸಿದ್ದನು ಮತ್ತು ಅವನಿಗೆ ವಿರುದ್ಧವಾಗಿ ಒಂದು ದಂಗೆಯನ್ನು ನಡೆಸಿದ್ದನು.
  • ದಾವೀದನ ಸೈನ್ಯವು ಅಬ್ಷಾಲೋಮನಿಗೆ ವಿರುದ್ಧವಾಗಿ ಹೋರಾಟ ಮಾಡಿ, ಅವನನ್ನು ಸಾಯಿಸಿದರು. ಇದೆಲ್ಲಾ ನಡೆದಾಗ ದಾವೀದನು ತುಂಬಾ ದುಃಖದಲ್ಲಿ ಮುಳುಗಿದ್ದನು.

(ಅನುವಾದ ಸಲಹೆಗಳು : ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಗೆಷೂರ್, ಅಮ್ನೋನ

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H53