kn_tw/bible/names/josiah.md

2.9 KiB

ಯೋಷೀಯ

ಸತ್ಯಾಂಶಗಳು:

ಯೋಷೀಯ ದೈವಿಕ ಅರಸನಾಗಿದ್ದನು, ಈತನು ಸುಮಾರು ಮುವತ್ತೊಂದು ವರ್ಷಗಳ ಕಾಲ ಯೂದಾ ರಾಜ್ಯವನ್ನು ಆಳಿದನು. ಈತನು ಯೂದಾ ಜನರು ಪಶ್ಚಾತ್ತಾಪ ಹೊಂದುವುದಕ್ಕೆ ಮತ್ತು ಯೆಹೋವನನ್ನು ಆರಾಧಿಸುವುದಕ್ಕೆ ನಡೆಸಿದನು.

  • ತನ್ನ ತಂದೆಯಾದ ಅರಸ ಅಮ್ಮೋನನನ್ನು ಕೊಂದನಂತರ, ಯೋಷೀಯ ತನ್ನ ಎಂಟನೇ ವಯಸ್ಸಿನಲ್ಲಿ ಯೂದಾ ರಾಜ್ಯದ ಮೇಲೆ ಅರಸನಾದನು.
  • ತನ್ನ ಆಳ್ವಿಕೆಯಲ್ಲಿ ಹದಿನೆಂಟನೇ ವರ್ಷದಲ್ಲಿ, ಕರ್ತನ ದೇವಾಲಯವನ್ನು ಪುನಃರ್ ನಿರ್ಮಿಸಲು ಮಹಾ ಯಾಜಕನಾದ ಹಿಲ್ಕೀಯನನ್ನು ನೇಮಿಸಿದನು. ಇದೆಲ್ಲಾ ನಿರ್ಮಿಸಿದನಂತರ, ಧರ್ಮಶಾಸ್ತ್ರವು ದೊರಕಿತು.
  • ಧರ್ಮಶಾಸ್ತ್ರದ ಪುಸ್ತಕಗಳನ್ನು ಯೋಷೀಯನಿಗೆ ಓದಿ ತಿಳಿಸಿದನಂತರ, ಆತನ ಜನರು ಯಾವರೀತಿ ದೇವರಿಗೆ ಅವಿಧೇಯತೆಯನ್ನು ತೋರಿಸುತ್ತಿದ್ದಾರೆಂದು ತಿಳಿದು, ತುಂಬಾ ದುಃಖಪಟ್ಟನು. ಆತನು ವಿಗ್ರಹಾರಾಧನೆ ನಡೆಯುವ ಸ್ಥಳಗಳನ್ನೆಲ್ಲಾ ನಾಶ ಮಾಡಬೇಕೆಂದು ಮತ್ತು ಸುಳ್ಳು ದೇವರುಗಳ ಯಾಜಕರನ್ನು ಕೊಂದು ಹಾಕಬೇಕೆಂದು ಆಜ್ಞಾಪಿಸಿದನು.
  • ಪಸ್ಕ ಹಬ್ಬವನ್ನು ತಿರುಗಿ ಆಚರಿಸಬೇಕೆಂದೂ ಆತನು ಜನರೆಲ್ಲರಿಗೆ ಆಜ್ಞಾಪಿಸಿದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಸುಳ್ಳು ದೇವರು, ಯೂದಾ, ಧರ್ಮಶಾಸ್ತ್ರ, ಪಸ್ಕ, ದೇವಾಲಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2977, G2502