kn_tw/bible/names/azariah.md

3.0 KiB

ಅಜರ್ಯ

ಸತ್ಯಾಂಶಗಳು:

ಅಜರ್ಯ ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಅನೇಕರಿದ್ದಾರೆ.

  • ಒಬ್ಬ ಅಜರ್ಯ ಬಾಬೆಲೋನಿಯ ಹೆಸರಾದ ಅಬೇದ್ನೆಗೋ ಹೆಸರಿನ ಮೂಲಕ ಚೆನ್ನಾಗಿ ಗೊತ್ತು. ಈತನು ನೆಬುಕದ್ನೆಚರ ಸೈನ್ಯದಿಂದ ಸೆರೆಗೊಯ್ಯಲ್ಪಟ್ಟ ಯೂದಾದಿಂದ ಹೊರಟ ಅನೇಕಮಂದಿ ಇಸ್ರಾಯೇಲ್ಯರಲ್ಲಿ ಒಬ್ಬರಾಗಿದ್ದರು ಮತ್ತು ಇವರನ್ನು ಬಾಬೆಲೋನಿಯದಲ್ಲಿ ನಿವಾಸವಾಗಿರಲು ಕರೆದೊಯ್ಯಲ್ಪಟ್ಟಿದ್ದರು. ಅಜರ್ಯ ಮತ್ತು ತನ್ನ ಜೊತೆಯಲ್ಲಿರುವ ಇಸ್ರಾಯೇಲ್ಯರಾದ ಹನನ್ಯ, ಮೀಶಾಯೇಲರು ಬಾಬೆಲೋನಿಯ ಅರಸನನ್ನು ಆರಾಧಿಸುವುದನ್ನು ತಿರಸ್ಕರಿಸಿದರು, ಅದಕ್ಕಾಗಿ ಅವನು ಅವರಗೆ ಶಿಕ್ಷೆಯಾಗಿ ಅವರನ್ನು ಧಗಧಗನೆ ಉರಿಯುತ್ತಿರುವ ಬೆಂಕಿ ಕೊಂಡದಲ್ಲಿ ಹಾಕಿಸಿದನು. ಆದರೆ ದೇವರು ಅವರನ್ನು ಸಂರಕ್ಷಿಸಿದನು ಮತ್ತು ಅವರಿಗೆ ಯಾವ ಹಾನಿ ಆಗಿರಲಿಲ್ಲ.
  • ಯೂದಯ ಅರಸನಾದ ಉಜ್ಜೀಯನನ್ನು ಕೂಡ “ಅಜರ್ಯ” ಎಂದು ಕರೆಯುತ್ತಿದ್ದರು.
  • ಇನ್ನೊಬ್ಬ ಅಜರ್ಯ ಹಳೇ ಒಡಂಬಡಿಕೆಯಲ್ಲಿ ಪ್ರಧಾನ ಯಾಜಕನಾಗಿದ್ದನು.
  • ಪ್ರವಾದಿಯಾದ ಯೆರೆಮೀಯ ಕಾಲದಲ್ಲಿ, ಅಜರ್ಯ ಎಂದು ಹೆಸರಿರುವ ಒಬ್ಬ ಮನುಷ್ಯನು ಇಸ್ರಾಯೇಲ್ಯರಿಗೆ ತಮ್ಮ ನಿವಾಸ ಸ್ಥಳವನ್ನು ಬಿಟ್ಟು ದೇವರಿಗೆ ಅವಿಧೇಯರಾಗಿರಿ ಎಂದು ತಪ್ಪಾಗಿ ಬೇಡಿಕೊಂಡನು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಬಾಬೇಲ್, ದಾನಿಯೇಲ, ಹನನ್ಯ, ಮೀಶಾಯೇಲ, ಉಜ್ಜೀಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H5838