kn_tw/bible/names/daniel.md

3.4 KiB

ದಾನಿಯೇಲ

ಸತ್ಯಾಂಶಗಳು:

ದಾನಿಯೇಲ ಇಸ್ರಾಯೇಲ್ ಯೌವ್ವನ ಪ್ರವಾದಿಯಾಗಿದ್ದನು, ಇವನು ಸುಮಾರು ಕ್ರಿ.ಪೂ.600 ವರ್ಷದಲ್ಲಿ ಬಾಬೆಲೋನಿಯ ಅರಸನಾದ ನೆಬೂಕದ್ನೆಚ್ಚರನಿಂದ ಸೆರೆಗೊಯ್ಯಲ್ಪಟ್ಟಿದ್ದನು.

  • ಈ ಸಮಯದಲ್ಲಿ ಯೂದಾದಿಂದ ಇತರ ಅನೇಕ ಇಸ್ರಾಯೇಲ್ಯರು ಸುಮಾರು 70 ವರ್ಷಗಳ ಕಾಲ ಬಾಬೆಲೋನಿಯಾದಲ್ಲಿ ಸೆರೆಗೊಯ್ಯಲ್ಪಟ್ಟಿದ್ದರು.
  • ದಾನಿಯೇಲನಿಗೆ ಬಾಬೆಲೋನಿಯಾದಲ್ಲಿ ಬೇಲ್ತೆಶೆಚ್ಚರ್ ಎಂದು ಹೆಸರಿಟ್ಟಿದ್ದರು.
  • ದಾನಿಯೇಲನಿಗೆ ದೇವರಿಗೆ ವಿಧೇಯನಾಗಿರುವ ನೀತಿವಂತನಾದ ಯೌವನಸ್ಥನು ಮತ್ತು ಸನ್ಮಾನ್ಯ ಯೋಗ್ಯನೂ ಆಗಿದ್ದನು.
  • ಬಾಬೆಲೋನಿಯ ಅರಸರಿಗೆ ಬಂದ ಅನೇಕವಾದ ಕನಸುಗಳಿಗೆ ಅಥವಾ ದರ್ಶನಗಳಿಗೆ ಅರ್ಥವನ್ನು ಹೇಳುವುದಕ್ಕೆ ದೇವರು ದಾನಿಯೇಲನನ್ನು ಬಲಪಡಿಸಿದನು.
  • ಈ ಸಾಮರ್ಥ್ಯದಿಂದ ಮತ್ತು ಈ ರೀತಿಯ ಸನ್ಮಾನ್ಯ ನಡತೆಯಿಂದ ದಾನಿಯೇಲನಿಗೆ ಬಾಬೆಲೋನಿಯ ಸಾಮ್ರಾಜ್ಯದಲ್ಲಿ ಅತ್ಯುನ್ನತ ನಾಯಕತ್ವ ಸ್ಥಾನವು ಕೊಡಲ್ಪಟ್ಟಿತ್ತು.
  • ಅನೇಕ ವರ್ಷಗಳಾದನಂತರ, ದಾನಿಯೇಲನ ಶತ್ರುಗಳು ಅರಸನಾದ ದಾರ್ಯಾವೇಷನನ್ನು ಮೋಸಗೊಳಿಸಿ, ಅರಸನನ್ನು ಬಿಟ್ಟು ಇನ್ನಾರನ್ನಾದರೂ ಆರಾಧನೆ ಮಾಡಬಾರದೆನ್ನುವ ನಿಷೇಧ ಆಜ್ಞೆಯನ್ನು ತರುವಂತೆ ಅರಸನನ್ನು ಪ್ರೇರೇಪಿಸಿದರು. * ದಾನಿಯೇಲನು ದೇವರಿಗೆ ನಿರಂತರವಾಗಿ ಪ್ರಾರ್ಥನೆ ಮಾಡುತ್ತಿದ್ದನು, ಆದ್ದರಿಂದ ಈತನನ್ನು ಬಂಧಿಸಿ, ಸಿಂಹಗಳ ಗುಹೆಯೊಳಗೆ ಹಾಕಲ್ಪಟ್ಟಿದ್ದನು. ಆದರೆ ದೇವರು ಆತನನ್ನು ರಕ್ಷಿಸಿದನು ಮತ್ತು ಆತನಿಗೆ ಯಾವ ಹಾನಿಯೂ ಉಂಟಾಗಲಿಲ್ಲ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಬಾಬೆಲೋನಿಯ, ನೆಬೂಕದ್ನೆಚ್ಚರ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1840, H1841, G1158