kn_tw/bible/names/mishael.md

3.2 KiB

ಮೀಶಾಯೇಲ

ಸತ್ಯಾಂಶಗಳು:

ಮೀಶಾಯೇಲ ಎನ್ನುವ ಹೆಸರುಗಳು ಹಳೇ ಒಡಂಬಡಿಕೆಯಲ್ಲಿ ಮೂವರು ವ್ಯಕ್ತಿಗಳಿದ್ದಾರೆ.

  • ಮೀಶಾಯೇಲನ ಹೆಸರಿನ ಮೇಲೆ ಇರುವ ಒಬ್ಬ ವ್ಯಕ್ತಿ ಆರೋನನ ಸೋದರ ಸಂಬಂಧಿಯಾಗಿರುತ್ತಾನೆ. ದೇವರು ಅವರಿಗೆ ಹೇಳಿದಂತೆ ಅಲ್ಲದೇ ಬೇರೆ ಇತರ ಧೂಪವನ್ನು ಆರೋನನ ಮಕ್ಕಳಲ್ಲಿ ಇಬ್ಬರು ಮಕ್ಕಳು ಅರ್ಪಿಸಿದ್ದಕ್ಕೆ, ದೇವರು ಅವರನ್ನು ಸಾಯಿಸಿದರು, ಆ ಸಮಯದಲ್ಲಿ ಮೀಶಾಯೇಲನು ಮತ್ತು ತನ್ನ ಸಹೋದರನು ಸತ್ತಂತ ತಮ್ಮ ಸಹೋದರರ ಶವಗಳನ್ನು ಇಸ್ರಾಯೇಲ್ ಅಂಗಳದಿಂದ ಹೊರ ತೆಗೆದುಕೊಂಡು ಬರುವುದಕ್ಕೆ ಬಾಧ್ಯತೆಯನ್ನು ಹೊಂದಿದ್ದರು.
  • ಎಜ್ರಾನು ಬಹಿರಂಗವಾಗಿ ಧರ್ಮಶಾಸ್ತ್ರವನ್ನು ಓದಿ ಎಲ್ಲರಿಗೆ ಕೇಳಿಸುತ್ತಿರುವಾಗ ಮೀಶಾಯೇಲನ ಹೆಸರಿನ ಮೇಲೆ ಇರುವ ಇನ್ನೊಬ್ಬ ವ್ಯಕ್ತಿ ಆತನ ಪಕ್ಕದಲ್ಲಿಯೇ ನಿಂತುಕೊಂಡಿದ್ದನು.
  • ಇಸ್ರಾಯೇಲ್ ಜನರು ಬಬೆಲೋನಿಯಗೆ ಸೆರೆಗೆ ಹೋದಾಗ, ಮೀಶಾಯೇಲನ ಹೆಸರಿನಲ್ಲಿರುವ ಒಬ್ಬ ಯೌವನಸ್ಥನು ಕೂಡ ಸೆರೆಗೆ ಹೊಯ್ಯಲ್ಪಟ್ಟಿದ್ದನು ಮತ್ತು ಬಾಬೆಲೋನಿಯಾದಲ್ಲಿ ಜೀವಿಸುವುದಕ್ಕೆ ಬಲವಂತಿಕೆ ಮಾಡಲ್ಪಟ್ಟಿದ್ದನು. ಬಾಬೆಲೋನಿಯದಲ್ಲಿ ತನಗೆ “ಮೇಶೆಕ್” ಎನ್ನುವ ಹೆಸರನ್ನು ಇಟ್ಟಿದ್ದರು. ಈತನು ಮತ್ತು ತನ್ನ ಜೊತೆಯಲ್ಲಿರುವ ಅಜರ್ಯ (ಅಬೇದ್ನೆಗೋ), ಮತ್ತು ಹನನ್ಯ (ಶದ್ರಕ್) ಎನ್ನುವವರು ಅರಸನ ವಿಗ್ರಹಕ್ಕೆ ಆರಾಧನೆ ಮಾಡುವುದನ್ನು ತಿರಸ್ಕರಿಸಿದರು, ಮತ್ತು ಅವರನ್ನು ಧಗಧಗನೆ ಉರಿಯುವ ಬೆಂಕಿಯ ಕೆರೆಯೊಳಗೆ ಎಸೆದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಆರೋನ, ಅಜರ್ಯ, ಬಾಬೆಲೋನಿಯ, ದಾನಿಯೇಲ, ಹನನ್ಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H4332, H4333