kn_tw/bible/names/jeremiah.md

4.3 KiB

ಯೆರೆಮೀಯ

ಸತ್ಯಾಂಶಗಳು:

ಯೆರೆಮೀಯ ಎನ್ನುವ ವ್ಯಕ್ತಿ ಯೂದಾ ರಾಜ್ಯದಲ್ಲಿ ದೇವರ ಪ್ರವಾದಿಯಾಗಿರುತ್ತಾನೆ. ಹಳೇ ಒಡಂಬಡಿಕೆಯಲ್ಲಿರುವ ಯೆರೆಮೀಯ ಗ್ರಂಥದಲ್ಲಿ ಆತನ ಪ್ರವಾದನೆಗಳು ಇರುತ್ತವೆ.

  • ಅನೇಕ ಪ್ರವಾದಿಗಳಂತೆ, ಇಸ್ರಾಯೇಲ್ ಜನರ ಪಾಪ ಕೃತ್ಯಗಳಿಗಾಗಿ ದೇವರು ಅವರನ್ನು ಶಿಕ್ಷಿಸುತ್ತಾನೆಂದು ಯೆರೆಮೀಯ ಅವರನ್ನು ಎಚ್ಚರಿಸಿದನು.
  • ಯೂದಾ ಜನರಲ್ಲಿ ಕೆಲವರನ್ನು ಸಿಟ್ಟಿಗೆಬ್ಬಿಸುತ್ತಾ, ಬಾಬೆಲೋನಿಯರು ಯೆರೂಸಲೇಮನ್ನು ವಶಪಡಿಸಿಕೊಳ್ಳುತ್ತಾರೆಂದು ಪ್ರವಾದಿಸಿದನು. ಅದಕ್ಕಾಗಿ ಆ ಜನರು ಅವನನ್ನು ಒಂದು ಆಳವಾದ ಒಣ ಬಾವಿಯಲ್ಲಿ ಹಾಕಿ, ಸಾಯುವುದಕ್ಕೆ ಆಲ್ಲೇ ಬಿಟ್ಟುಬಿಟ್ಟರು. ಆದರೆ ಆ ಬಾವಿಯಿಂದ ಯೆರೆಮೀಯಾನನ್ನು ರಕ್ಷಿಸುವುದಕ್ಕೆ ಯೂದಾ ಅರಸನು ತನ್ನ ಆಳುಗಳಿಗೆ ಆಜ್ಞಾಪಿಸಿದನು.
  • ಯೆರೆಮೀಯಾ ತನ್ನ ಜನರ ಶ್ರಮೆಗಳ ಮತ್ತು ತಿರಸ್ಕಾರಗಳ ಮಧ್ಯೆದಲ್ಲಿದ್ದು ಆಳವಾದ ಬಾಧೆಯನ್ನು ಅಥವಾ ನೋವನ್ನು ಅನುಭವಿಸಿದ್ದನ್ನು ವ್ಯಕ್ತಗೊಳಿಸಲು, ನನ್ನ ನೇತ್ರಗಳು “ಕಣ್ಣೀರಿನ ಬುಗ್ಗೆಯಾಗಿದ್ದರೆ” ಎಷ್ಟೋ ಲೇಸು ಎಂದು ತನ್ನ ಗ್ರಂಥದಲ್ಲಿ ಬರೆದಿದ್ದಾನೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಬಾಬಿಲೋನಿಯ, ಯೂದಾ, ಪ್ರವಾದಿ, ತಿರಸ್ಕಾರ, ಶ್ರಮಿಸು, ಬಾವಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 19:17 ಪ್ರವಾದಿಯಾದ ___ ಯೆರೆಮೀಯಾನನ್ನು ____ ಒಣಗಿದ ಬಾವಿಯಲ್ಲಿ ಹಾಕಿ, ಅಲ್ಲೇ ಅವನು ಸಾಯುವುದಕ್ಕೆ ಬಿಟ್ಟುಬಿಟ್ಟರು. ಅವನು ಬಾವಿಯ ಕೆಳಭಾಗದಲ್ಲಿರುವ ಕೆಸರಿನಲ್ಲಿ ಸಿಳುಕಿಕೊಂಡನು, ಆದರೆ ಅರಸನು ಅವನ ಮೇಲೆ ದಯೆ ತೋರಿಸಿದ್ದನು ಮತ್ತು ಆ ಬಾವಿಯಲ್ಲಿ ___ ಯೆರೆಮೀಯಾ ___ ಸಾಯುವುದಕ್ಕೆ ಮುಂಚಿತವಾಗಿ, ಅವನನ್ನು ಮೇಲಕ್ಕೆ ಎಳೆಯಿರಿ ಎಂದು ತನ್ನ ದಾಸರಿಗೆ ಆಜ್ಞಾಪಿಸಿದನು.
  • 21:05 ಪ್ರವಾದಿಯಾದ ___ಯೆರೆಮೀಯಾ ___ ಮೂಲಕ, ದೇವರು ಒಂದು ಹೊಸ ಒಡಂಬಡಿಕೆಯನ್ನು ಮಾಡುತ್ತೇನೆಂದು ವಾಗ್ಧಾನ ಮಾಡಿದರು, ಆದರೆ ಸೀನಾಯಿ ಮೇಲೆ ಇಸ್ರಾಯೇಲ್.ನೊಂದಿಗೆ ಮಾಡಿದ ಒಡಂಬಡಿಕೆಯಂಥದ್ದಲ್ಲ.

ಪದ ಡೇಟಾ:

  • Strong's: H3414, G2408