kn_tw/bible/names/uzziah.md

3.0 KiB

ಉಜ್ಜೀಯ, ಅಜರ್ಯ

ಸತ್ಯಾಂಶಗಳು:

ಉಜ್ಜೀಯನು ತನ್ನ 16ನೇ ವಯಸ್ಸಿನಲ್ಲಿ ಯೆಹೂದ್ಯ ರಾಜ್ಯಕ್ಕೆ ಅರಸನಾದನು, ಸುಮಾರು 52 ವರ್ಷಗಳ ಕಾಲ ಆಳಿದನು, ಇದು ಅಸಾಧಾರಣವಾದ ದೀರ್ಘ ಆಡಳಿತವಾಗಿದ್ದಿತ್ತು. ಉಜ್ಜೀಯನಿಗೆ “ಅಜರ್ಯ” ಎನ್ನುವ ಹೆಸರೂ ಇದ್ದಿತ್ತು.

  • ಅರಸನಾದ ಉಜ್ಜೀಯನು ಸಂಘಟಿತ ಮತ್ತು ನಿಪುಣತೆಯ ಸೈನಿಕನಾಗಿ ಹೆಸರುವಾಸಿಯಾಗಿದ್ದನು. ಪಟ್ಟಣವನ್ನು ಕಾಪಾಡುವುದಕ್ಕೆ ಇವನು ದೊಡ್ಡ ದೊಡ್ಡ ಗೋಡೆಗಳನ್ನು ಕಟ್ಟಿಸಿಕೊಂಡಿದ್ದನು, ಅವುಗಳ ಮೇಲೆ ವಿಶೇಷವಾಗಿ ತಯಾರು ಮಾಡಿಸಿರುವ ದೊಡ್ಡ ದೊಡ್ಡ ಕಲ್ಲುಗಳನ್ನು ಮತ್ತು ಜೋರಾಗಿ ಹೋಗುವ ಬಾಣಗಳೆನ್ನುವ ಯುದ್ಧ ಸಾಮಾಗ್ರಿಗಳನ್ನು ಇಟ್ಟಿರುತ್ತಾರೆ.
  • ಉಜ್ಜೀಯನು ಕರ್ತನನ್ನು ಸೇವಿಸಿದ ಕಾಲದವರೆಗೂ ಅಭಿವೃದ್ಧಿ ಹೊಂದಿದ್ದನು. ತನ್ನ ಆಡಳಿತದ ಅಂತ್ಯದಲ್ಲಿ ಅವನು ಅಹಂಕಾರಿಯಾದನು ಮತ್ತು ದೇವಾಲಯದಲ್ಲಿ ಯಾಜಕನೊಬ್ಬನೇ ಧೂಪವನ್ನು ಹಾಕುವುದಕ್ಕೆ ಅನುಮತಿಯಿದ್ದಾಗ, ಅದನ್ನು ಉಲ್ಲಂಘಿಸಿ, ಅವನು ಧೂಪವನ್ನು ಉರಿಸುವುದರ ಮೂಲಕ ಕರ್ತನಿಗೆ ಅವಿಧೇಯನಾದನು.
  • ಈ ಪಾಪದ ಮೂಲಕ ಉಜ್ಜೀಯನು ಕುಷ್ಠ ರೋಗಿಯಾದನು ಮತ್ತು ತನ್ನ ಆಳ್ವಿಕೆಯನ್ನು ಮುಗಿಸುವವರೆಗೂ ಜನರ ಮಧ್ಯೆದಲ್ಲಿ ಜೀವಿಸದೇ ಆಚೆ ಜೀವಿಸಬೇಕಾಗಿತ್ತು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಯೆಹೂದ್ಯ, ಅರಸ, ಕುಷ್ಠ, ಆಳ್ವಿಕೆ, ಬುರುಜು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H5814, H5818, H5838, H5839