3.2 KiB
3.2 KiB
ಯಾತನೆ, ಯಾತನೆಪಟ್ಟಿದೆ, ಯಾತನೆಪಡುತ್ತಿರುವುದು, ಯಾತನೆ ಕೊಡುವವರು
ಸತ್ಯಾಂಶಗಳು:
“ಯಾತನೆ” ಎನ್ನುವ ಮಾತು ಭಯಾನಕವಾದ ಶ್ರಮೆಯನ್ನು ಸೂಚಿಸುತ್ತದೆ. ಒಬ್ಬ ವ್ಯಕ್ತಿಗೆ ಚಿತ್ರಹಿಂಸೆ ಕೊಡುವುದು ಎಂದರೆ ಆ ವ್ಯಕ್ತಿ ಭಯಾನಕವಾದ ರೀತಿಯಲ್ಲಿ ಶ್ರಮೆಯನ್ನು ಅನುಭವಿಸುವಂತೆ ಮಾಡು ಎಂದರ್ಥವಾಗಿರುತ್ತದೆ.
- ಕೆಲವೊಂದುಬಾರಿ “ಯಾತನೆ” ಎನ್ನುವ ಪದವು ಭೌತಿಕ ಬಾಧೆಯನ್ನು ಮತ್ತು ಶ್ರಮೆಯನ್ನು ಸೂಚಿಸುತ್ತದೆ. ಉದಾಹರಣೆಗೆ, ಪ್ರಕಟನೆ ಗ್ರಂಥವು “ಮೃಗವನ್ನು” ಆರಾಧಿಸುವವರು ಅಂತ್ಯಕಾಲದಲ್ಲಿ ಶ್ರಮಿಸುತ್ತಾರೆಂದು ಭೌತಿಕ ಚಿತ್ರಹಿಂಸೆಗಳ ಕುರಿತಾಗಿ ವಿವರಿಸುತ್ತದೆ.
- ಶ್ರಮೆ ಎನ್ನುವುದು ಯೋಬನು ಅನುಭವಿಸಿದಂತೆಯೇ ಭಾವೋದ್ರೇಕವಾದ ಮತ್ತು ಆತ್ಮೀಕವಾದ ನೋವನ್ನು ತೆಗೆದುಕೊಳ್ಳುದನ್ನೂ ಸೂಚಿಸುತ್ತದೆ.
- ಅಪೊಸ್ತಲನಾದ ಯೋಹಾನನು ಪ್ರಕಟನೆ ಗ್ರಂಥದಲ್ಲಿ ಯೇಸುವನ್ನು ತಮ್ಮ ರಕ್ಷಕನಾಗಿ ನಂಬದ ಜನರು ಬೆಂಕಿಯ ಕೆರೆಯಲ್ಲಿ ನಿತ್ಯ ಯಾತನೆಯನ್ನು ಅನುಭವಿಸುವರು ಎಂದು ಬರೆದಿದ್ದಾನೆ.
- ಈ ಪದವನ್ನು “ಭಯಾನಕವಾದ ಶ್ರಮೆ” ಅಥವಾ “ಒಬ್ಬರು ಹೆಚ್ಚಾಗಿ ಶ್ರಮೆಯನ್ನು ಅನುಭವಿಸುವಂತೆ ಮಾಡು” ಅಥವಾ “ಸಂಕಟ” ಎಂದೂ ಅನುವಾದ ಮಾಡಬಹುದು. ಕೆಲವೊಂದು ಅನುವಾದಕರು ಈ ಪದವು ಇನ್ನೂ ಸ್ಪಷ್ಟವಾಗಿರುವುದಕ್ಕೆ “ಭೌತಿಕ” ಅಥವಾ “ಅತ್ಮೀಯಕ” ಎಂದು ಆ ಪದಕ್ಕೆ ಜೋಡಿಸುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : ಮೃಗ, ನಿತ್ಯತ್ವ, ಯೋಬ, ರಕ್ಷಕ, ಆತ್ಮ, ಶ್ರಮೆ, ಆರಾಧನೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3013, G928, G929, G930, G931, G2558, G2851, G3600