kn_tw/bible/kt/eternity.md

11 KiB

ನಿತ್ಯತೆ, ಅಮರತ್ವ, ನಿತ್ಯ, ನಿರಂತರ

ಪದದ ಅರ್ಥವಿವರಣೆ:

“ಅಮರತ್ವ” ಮತ್ತು “ನೀತ್ಯ” ಎನ್ನುವ ಪದಗಳು ಒಂದೇ ರೀತಿಯ ಸಮಾನಾರ್ಥವನ್ನು ಹೊಂದಿರುತ್ತವೆ ಮತ್ತು ಎಂದೆಂದಿಗೂ ನಿರಂತರವಾಗಿರುವ ಅಥವಾ ಯಾವಾಗಲೂ ಅಸ್ತಿತ್ವದಲ್ಲಿರುವವುಗಳನ್ನು ಸೂಚಿಸುತ್ತದೆ.

  • “ನಿತ್ಯತೆ” ಎನ್ನುವ ಪದವು ಆರಂಭವು ಅಥವಾ ಅಂತ್ಯವು ಇಲ್ಲದ ಸ್ಥಿತಿಯನ್ನು ಸೂಚಿಸುತ್ತದೆ. ಎಂದಿಗೂ ಕೊನೆಯಾಗದ ಜೀವನವನ್ನೂ ಇದು ಸೂಚಿಸುತ್ತದೆ.
  • ಭೂಮಿಯ ಮೇಲಿರುವ ಈ ಪ್ರಸ್ತುತ ಜೀವನದನಂತರ, ಮನುಷ್ಯರು ನಿತ್ಯತೆಯಲ್ಲಿರುತ್ತಾರೆ, ಆದರೆ ಅದು ದೇವರೊಂದಿಗೆ ಪರಲೋಕದಲ್ಲಾಗಲಿ ಅಥವಾ ದೇವರಿಂದ ದೂರವಾಗಿ ನರಕದಲ್ಲಾಗಲಿ ಇರುತ್ತಾರೆ.
  • “ನಿತ್ಯಜೀವ” ಮತ್ತು “ಅಮರತ್ವದಲ್ಲಿರುವ ಜೀವನ” ಎನ್ನುವ ಪದಗಳು ಪರಲೋಕದಲ್ಲಿ ದೇವರೊಂದಿಗೆ ಎಂದೆಂದಿಗೂ ಜೀವಿಸುವುದಕ್ಕೆ ಸೂಚಿಸಲು ಹೊಸ ಒಡಂಬಡಿಕೆಯಲ್ಲಿ ಉಪಯೋಗಿಸಲಾಗಿರುತ್ತದೆ.
  • “ನಿರಂತರ ಮತ್ತು ಎಂದಿಗೂ” ಎನ್ನುವ ಮಾತು ಎಂದಿಗೂ ಕೊನೆಯಾಗದ ಸಮಯದ ಆಲೋಚನೆಯನ್ನು ಮತ್ತು ನಿತ್ಯ ಜೀವ ಅಥವಾ ಅಮರತ್ವ ಎನ್ನುವ ಮಾತುಗಳನ್ನು ಹೊಂದಿರುತ್ತದೆ.

“ನಿರಂತರ” ಎನ್ನುವುದು ಎಂದಿಗೂ ಕೊನೆಯಾಗದ ಸಮಯವನ್ನು ಸೂಚಿಸುತ್ತದೆ. ಕೆಲವೊಂದುಬಾರಿ “ಬಹುಕಾಲ” ಎನ್ನುವ ಅರ್ಥವನ್ನು ಕೊಡುವುದಕ್ಕೆ ಇದನ್ನು ಅಲಂಕಾರಿಕ ಭಾಷೆಯಲ್ಲಿ ಉಪಯೋಗಿಸುತ್ತಾರೆ.

  • “ನಿರಂತರ ಮತ್ತು ಎಂದೆಂದಿಗೂ” ಎನ್ನುವ ಮಾತು ಯಾವುದಾದರೊಂದು ಯಾವಾಗಲೂ ನಡೆಯುತ್ತದೆ ಅಥವಾ ಯಾವಾಗಲೂ ಅಸ್ತಿತ್ವದಲ್ಲಿರುತ್ತದೆಯೆಂದು ತಿಳಿಸುತ್ತಿದೆ.
  • “ನಿರಂತರ ಮತ್ತು ಎಂದೆಂದಿಗೂ” ಎನ್ನುವ ಮಾತು ಅಮರತ್ವ ಎಂದರೇನು ಅಥವಾ ನಿತ್ಯಜೀವ ಎಂದರೇನು ಎನ್ನುವ ವಿಷಯವನ್ನು ವ್ಯಕ್ತಗೊಳಿಸುವ ವಿಧಾನವಾಗಿರುತ್ತದೆ. ಈ ಪದದಲ್ಲಿಯೂ ಕೊನೆಯಿಲ್ಲದ ಸಮಯ ಎನ್ನುವ ಆಲೋಚನೆಯನ್ನು ಹೊಂದಿರುತ್ತದೆ
  • ದಾವೀದನ ಸಿಂಹಾಸನವು “ನಿರಂತರವಾಗಿ” ಇರುವುದೆಂದು ದೇವರು ಹೇಳಿದರು. ದಾವೀದನ ಸಂತಾನವಾಗಿರುವ ಯೇಸುವು ಅರಸನಾಗಿ ನಿರಂತರವಾಗಿ ಆಳುತ್ತಾನೆನ್ನುವ ಸತ್ಯವನ್ನು ಇದು ಸೂಚಿಸುತ್ತದೆ.

ಅನುವಾದ ಸಲಹೆಗಳು:

  • “ನಿತ್ಯ” ಅಥವಾ “ಅಮರತ್ವ” ಎನ್ನುವ ಪದಗಳನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಕೊನೆಯಿಲ್ಲದ” ಅಥವಾ “ಎಂದಿಗೂ ನಿಂತುಹೋಗದ” ಅಥವಾ “ಯಾವಾಗಲೂ ಮುಂದುವರೆಯುವ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ನಿತ್ಯ ಜೀವ” ಮತ್ತು “ಅಮರತ್ವ ಜೀವನ” ಎನ್ನುವ ಪದಗಳನ್ನು “ಎಂದಿಗೂ ಕೊನೆಯಾಗದ ಜೀವನ” ಅಥವಾ “ಎಂದಿಗೂ ನಿಂತುಹೋಗದೇ ಮುಂದುವರೆಯುವ ಜೀವನ” ಅಥವಾ “ಎಂದೆಂದಿಗೂ ಜೀವಿಸುವುದಕ್ಕೆ ನಮ್ಮ ದೇಹಗಳು ಎಬ್ಬಿಸಲ್ಪಡುವವು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ “ನಿತ್ಯತೆ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಸಮಯವು ಮುಗಿದರೂ ಅಸ್ತಿತ್ವದಲ್ಲಿರುವುದು” ಅಥವಾ “ಕೊನೆಯಿಲ್ಲದ ಜೀವನ” ಅಥವಾ “ಪರಲೋಕದಲ್ಲಿರುವ ಜೀವನ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಸ್ಥಳೀಯ ಅಥವಾ ಜಾತೀಯ ಭಾಷೆಗಳಲ್ಲಿರುವ ಬೈಬಲ್ ಅನುವಾದದಲ್ಲಿ ಈ ಪದವನ್ನು ಯಾವರೀತಿ ಅನುವಾದ ಮಾಡಿದ್ದಾರೆನ್ನುವದನ್ನೂ ನೋಡಿಕೊಳ್ಳಿರಿ. (ನೋಡಿರಿ: ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು)
  • “ನಿರಂತರ” ಎನ್ನುವ ಪದವನ್ನು “ಯಾವಾಗಲೂ” ಅಥವಾ “ಕೊನೆಯಿಲ್ಲದ” ಎಂದೂ ಅನುವಾದ ಮಾಡಬಹುದು.
  • “ನಿರಂತರವಾಗಿ ಇರುವ” ಎನ್ನುವ ಮಾತನ್ನು “ಯಾವಾಗಲೂ ಅಸ್ತಿತ್ವದಲ್ಲಿರುವ” ಅಥವಾ “ಎಂದಿಗೂ ನಿಂತುಹೋಗದ” ಅಥವಾ “ಯಾವಾಗಲೂ ಮುಂದುವರೆಯುವ” ಎಂದೂ ಅನುವಾದ ಮಾಡಬಹುದು.
  • “ನಿರಂತರ ಮತ್ತು ಎಂದೆಂದಿಗೂ” ಎಂದು ಎದ್ದುಕಾಣುವ ಮಾತನ್ನು “ಯಾವಾಗಲೂ ಮತ್ತು ಯಾವಾಗಲೂ” ಅಥವಾ “ಎಂದಿಗೂ ಕೊನೆಯಾಗದ” ಅಥವಾ “ಅದು ಎಂದೆಂದಿಗೂ ಕೊನೆಯಾಗದ” ಎಂದೂ ಅನುವಾದ ಮಾಡಬಹುದು.
  • ದಾವೀದನ ಸಿಂಹಾಸನವು ನಿರಂತರವಾಗಿ ಇರುವುದು ಎನ್ನುವದನ್ನು “ದಾವೀದನ ಸಂತಾನವು ನಿರಂತರವಾಗಿ ಆಳುತ್ತಾ ಇರುವರು” ಅಥವಾ “ದಾವೀದನ ಸಂತಾನವು ಯಾವಾಗಲೂ ಆಳುತ್ತಾ ಇರುವರು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ದಾವೀದ, ಪಾಲಿಸು, ಜೀವ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 27:01 ಒಂದು ದಿನ ಯೆಹೂದ್ಯರ ಧರ್ಮಶಾಸ್ತ್ರದಲ್ಲಿ ನಿಪುಣನಾಗಿರುವ ಒಬ್ಬ ಯೇಸುವನ್ನು ಪರೀಕ್ಷೆ ಮಾಡಲು ಯೇಸುವಿನ ಬಳಿಗೆ ಬಂದು, “ಬೋಧಕನೆ, ನಾನು __ ನಿತ್ಯಜೀವವನ್ನು __ ಹೊಂದಿಕೊಳ್ಳುವುದಕ್ಕೆ ಏನು ಮಾಡಬೇಕು?” ಎಂದು ಕೇಳಿದನು.
  • 28:01 ಒಂದು ದಿನ ಶ್ರೀಮಂತನಾದ ಒಬ್ಬ ಯೌವನಸ್ಥನು ಯೇಸು ಬಳಿಗೆ ಬಂದು, “ಒಳ್ಳೇಯ ಬೋಧಕನೆ, ನಾನು __ ನಿತ್ಯಜೀವವನ್ನು __ ಹೊಂದಿಕೊಳ್ಳಬೇಕಾದರೆ ಏನು ಮಾಡಬೇಕು?” ಎಂದು ಕೇಳಿದನು. “ಯಾವುದು ಒಳ್ಳೇಯದು ಎನ್ನುವುದರ ಕುರಿತಾಗಿ ನನ್ನನ್ನು ಯಾಕೆ ಕೇಳುತ್ತೀ? ಎಂದು ಯೇಸು ಅವನಿಗೆ ಉತ್ತರ ಕೊಟ್ಟನು. ಒಳ್ಳೆಯವನು ಒಬ್ಬನೇ ಇದ್ದಾನೆ, ಅವರೇ ದೇವರು ಎಂದು ಹೇಳಿದನು. ಆದರೆ ನಿನಗೆ __ ನಿತ್ಯಜೀವ __ ಬೇಕೆಂದಿದ್ದರೆ, ದೇವರ ಆಜ್ಞೆಗಳನ್ನು ಕೈಗೊಳ್ಳು ಎಂದು ಹೇಳಿದನು.
  • 28:10 “ಯಾರ್ಯಾರು ನನಗೋಸ್ಕರ ಮನೆಗಳನ್ನು, ಅಣ್ಣತಮ್ಮಂದಿಯರನ್ನು, ಅಕ್ಕತಂಗಿಯರನ್ನು, ತಂದೆಯನ್ನು, ತಾಯಿಯನ್ನು, ಮಕ್ಕಳನ್ನು ಅಥವಾ ಅಸ್ತಿಪಾಸ್ತಿಗಳನ್ನು ಕಳೆದುಕೊಳ್ಳುತ್ತಾರೋ, ಅವರು 100 ಪಟ್ಟು ಹೆಚ್ಚಾಗಿ ತಿರುಗಿ ಹೊಂದಿಕೊಳ್ಳುವರು ಮತ್ತು __ ನಿತ್ಯಜೀವವನ್ನು __ ಪಡೆದುಕೊಳ್ಳುವರು” ಎಂದು ಯೇಸು ಉತ್ತರಕೊಟ್ಟರು.

ಪದ ಡೇಟಾ:

  • Strong's: H3117, H4481, H5331, H5703, H5705, H5769, H5865, H5957, H6924, G126, G165, G166, G1336