kn_tw/bible/other/torment.md

25 lines
3.2 KiB
Markdown

# ಯಾತನೆ, ಯಾತನೆಪಟ್ಟಿದೆ, ಯಾತನೆಪಡುತ್ತಿರುವುದು, ಯಾತನೆ ಕೊಡುವವರು
## ಸತ್ಯಾಂಶಗಳು:
“ಯಾತನೆ” ಎನ್ನುವ ಮಾತು ಭಯಾನಕವಾದ ಶ್ರಮೆಯನ್ನು ಸೂಚಿಸುತ್ತದೆ. ಒಬ್ಬ ವ್ಯಕ್ತಿಗೆ ಚಿತ್ರಹಿಂಸೆ ಕೊಡುವುದು ಎಂದರೆ ಆ ವ್ಯಕ್ತಿ ಭಯಾನಕವಾದ ರೀತಿಯಲ್ಲಿ ಶ್ರಮೆಯನ್ನು ಅನುಭವಿಸುವಂತೆ ಮಾಡು ಎಂದರ್ಥವಾಗಿರುತ್ತದೆ.
* ಕೆಲವೊಂದುಬಾರಿ “ಯಾತನೆ” ಎನ್ನುವ ಪದವು ಭೌತಿಕ ಬಾಧೆಯನ್ನು ಮತ್ತು ಶ್ರಮೆಯನ್ನು ಸೂಚಿಸುತ್ತದೆ. ಉದಾಹರಣೆಗೆ, ಪ್ರಕಟನೆ ಗ್ರಂಥವು “ಮೃಗವನ್ನು” ಆರಾಧಿಸುವವರು ಅಂತ್ಯಕಾಲದಲ್ಲಿ ಶ್ರಮಿಸುತ್ತಾರೆಂದು ಭೌತಿಕ ಚಿತ್ರಹಿಂಸೆಗಳ ಕುರಿತಾಗಿ ವಿವರಿಸುತ್ತದೆ.
* ಶ್ರಮೆ ಎನ್ನುವುದು ಯೋಬನು ಅನುಭವಿಸಿದಂತೆಯೇ ಭಾವೋದ್ರೇಕವಾದ ಮತ್ತು ಆತ್ಮೀಕವಾದ ನೋವನ್ನು ತೆಗೆದುಕೊಳ್ಳುದನ್ನೂ ಸೂಚಿಸುತ್ತದೆ.
* ಅಪೊಸ್ತಲನಾದ ಯೋಹಾನನು ಪ್ರಕಟನೆ ಗ್ರಂಥದಲ್ಲಿ ಯೇಸುವನ್ನು ತಮ್ಮ ರಕ್ಷಕನಾಗಿ ನಂಬದ ಜನರು ಬೆಂಕಿಯ ಕೆರೆಯಲ್ಲಿ ನಿತ್ಯ ಯಾತನೆಯನ್ನು ಅನುಭವಿಸುವರು ಎಂದು ಬರೆದಿದ್ದಾನೆ.
* ಈ ಪದವನ್ನು “ಭಯಾನಕವಾದ ಶ್ರಮೆ” ಅಥವಾ “ಒಬ್ಬರು ಹೆಚ್ಚಾಗಿ ಶ್ರಮೆಯನ್ನು ಅನುಭವಿಸುವಂತೆ ಮಾಡು” ಅಥವಾ “ಸಂಕಟ” ಎಂದೂ ಅನುವಾದ ಮಾಡಬಹುದು. ಕೆಲವೊಂದು ಅನುವಾದಕರು ಈ ಪದವು ಇನ್ನೂ ಸ್ಪಷ್ಟವಾಗಿರುವುದಕ್ಕೆ “ಭೌತಿಕ” ಅಥವಾ “ಅತ್ಮೀಯಕ” ಎಂದು ಆ ಪದಕ್ಕೆ ಜೋಡಿಸುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : [ಮೃಗ](../other/beast.md), [ನಿತ್ಯತ್ವ](../kt/eternity.md), [ಯೋಬ](../names/job.md), [ರಕ್ಷಕ](../kt/savior.md), [ಆತ್ಮ](../kt/spirit.md), [ಶ್ರಮೆ](../other/suffer.md), [ಆರಾಧನೆ](../kt/worship.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಪೇತ್ರ.02:7-9](rc://*/tn/help/2pe/02/07)
* [ಯೆರೆ.30:20-22](rc://*/tn/help/jer/30/20)
* [ಪ್ರಲಾಪ.01:11-12](rc://*/tn/help/lam/01/11)
* [ಲೂಕ.08:28-29](rc://*/tn/help/luk/08/28)
* [ಪ್ರಕ.11:10-12](rc://*/tn/help/rev/11/10)
## ಪದ ಡೇಟಾ:
* Strong's: H3013, G928, G929, G930, G931, G2558, G2851, G3600