kn_tw/bible/other/suffer.md

7.1 KiB

ಕಷ್ಟ, ಕಷ್ಟಗಳು, ಕಷ್ಟಪಟ್ಟಿದೆ, ಕಷ್ಟಪಡುವುದು, ಕಷ್ಟಗಳು

ಪದದ ಅರ್ಥವಿವರಣೆ:

“ಕಷ್ಟ” ಮತ್ತು “ಕಷ್ಟಪಡುವುದು” ಎನ್ನುವ ಪದಗಳು ರೋಗ, ಬಾಧೆ, ಅಥವಾ ಇತರ ಕಠಿಣ ಪರಿಸ್ಥಿತಿಗಳಂತೆ ಯಾವುದಾದರೊಂದು ಅಹಿತಕರವಾದದ್ದನ್ನು ಅನುಭವಿಸಿದ್ದನ್ನು ಸೂಚಿಸುತ್ತದೆ.

  • ಜನರು ಹಿಂಸೆಗಳನ್ನು ಅನುಭವಿಸುತ್ತಿರುವಾಗ ಅಥವಾ ಅವರು ರೋಗಗಳಲ್ಲಿರುವಾಗ, ಅವರು ಕಷ್ಟಪಡುತ್ತಿದ್ದಾರೆ.
  • ಕೆಲವೊಂದುಬಾರಿ ಜನರು ತಾವು ಮಾಡಿರುವ ತಪ್ಪು ಕಾರ್ಯಗಳಿಂದ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ; ಇನ್ನೂ ಕೆಲವೊಂದುಬಾರಿ ಅವರು ಮಾಡಿರುವ ಪಾಪಗಳಿಂದ ಮತ್ತು ಲೋಕದಲ್ಲಿರುವ ರೋಗಗಳಿಂದ ನರಳುತ್ತಾಯಿರುತ್ತಾರೆ.
  • ಕಷ್ಟಪಡುವಂತದ್ದು ಭೌತಿಕವಾಗಿರಬಹುದು, ಉದಾಹರಣೆಗೆ, ಬಾಧೆ ಅಥವಾ ರೋಗ. ಇದು ಭಾವೋದ್ರೇಕವಾಗಿರಬಹುದು , ಉದಾಹರಣೆಗೆ, ಭಯ, ದುಃಖ, ಅಥವಾ ಒಂಟಿತನ ಭಾವನೆಗಳು.
  • “ನನ್ನ ಕಷ್ಟ” ಎನ್ನುವ ಮಾತಿಗೆ “ನನ್ನನ್ನು ಸಹಿಸು” ಅಥವಾ “ನನ್ನ ಮಾತುಗಳು ಕೇಳು” ಅಥವಾ “ಸಹನೆಯಿಂದ ನನ್ನ ಮಾತುಗಳನ್ನು ಕೇಳು” ಎಂದರ್ಥ.

ಅನುವಾದ ಸಲಹೆಗಳು:

  • “ಕಷ್ಟ” ಎನ್ನುವ ಪದವನ್ನು “ಬಾಧೆಯನ್ನು ಅನುಭವಿಸು” ಅಥವಾ “ಕಷ್ಟವನ್ನು ತಾಳಿಕೋ” ಅಥವಾ “ಕಠಿಣ ಪರಿಸ್ಥಿತಿಗಳನ್ನು ಅನುಭವಿಸು” ಅಥವಾ “ಕಠಿಣವಾದ ಮತ್ತು ಬಾಧೆಗಳ ಅನುಭವಗಳ ಮೂಲಕ ಹಾದು ಹೋಗು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ, “ಕಷ್ಟಪಡುವುದು” ಎನ್ನುವ ಪದವನ್ನು “ಅತೀ ಗಂಭೀರವಾದ ಕಠಿಣವಾದ ಪರಿಸ್ಥಿತಿಗಳು” ಅಥವಾ “ತೀವ್ರವಾದ ಕಠಿಣ ಪರಿಸ್ಥಿತಿಗಳು” ಅಥವಾ “ಕಠಿಣತೆಯನ್ನು ಅನುಭವಿಸುವುದು” ಅಥವಾ “ಬಾಧೆಪಡುವ ಅನುಭವಗಳು” ಎಂದೂ ಅನುವಾದ ಮಾಡಬಹುದು.
  • “ದಾಹಕ್ಕಾಗಿ ಕಷ್ಟಪಡು” ಎನ್ನುವ ಮಾತನ್ನು “ದಾಹವನ್ನು ಅನುಭವಿಸು” ಅಥವಾ “ದಾಹದೊಂದಿಗೆ ಕಷ್ಟಪಡುವುದು” ಎಂದೂ ಅನುವಾದ ಮಾಡಬಹುದು.
  • “ಹಿಂಸೆಯಿಂದ ಕಷ್ಟಪಡುವುದು” ಎನ್ನುವ ಮಾತನ್ನು “ಹಿಂಸೆಯ ಮೂಲಕ ಹಾದುಹೋಗು” ಅಥವಾ “ಹಿಂಸೆಯ ಕೃತ್ಯಗಳಿಂದ ಹಾನಿಯನ್ನು ಅನುಭವಿಸುವುದು” ಎಂದೂ ಅನುವಾದ ಮಾಡಬಹುದು.

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 09:13 “ನಾನು ನನ್ನ ಜನರು __ ಕಷ್ಟ ಪಡುತ್ತಿರುವುದನ್ನು __ ನೋಡಿದ್ದೇನೆ” ಎಂದು ದೇವರು ಹೇಳಿದರು.
  • 38:12 “ನನ್ನ ತಂದೆಯೇ, ಸಾಧ್ಯವಾದರೆ, ಈ ___ ಕಷ್ಟದ ___ ಬಟ್ಟಲನ್ನು ಕುಡಿಯದಂತೆ ಮಾಡು” ಎಂದು ಯೇಸು ಮೂರುಬಾರಿ ಪ್ರಾರ್ಥಿಸಿದನು.
  • 42:03 ಮೆಸ್ಸೀಯನು ___ ಕಷ್ಟಪಡುವನು ___ ಮತ್ತು ಕೊಲ್ಲಲ್ಪಡುವನು, ಆದರೆ ಮೂರನೇ ದಿನದಂದು ಎದ್ದು ಬರುವನೆಂದು ಪ್ರವಾದಿಗಳು ಹೇಳಿರುವದನ್ನು ಆತನು (ಯೇಸು) ಜ್ಞಾಪಿಸಿಕೊಂಡನು.
  • 42:07 “ಮೆಸ್ಸೀಯನು ___ ಕಷ್ಟಪಡುವನು ___ ಸಾಯುವನು ಮತ್ತು ಮೂರನೇ ದಿನದಂದು ಎದ್ದು ಬರುವನೆಂದು ಬರೆಯಲ್ಪಟ್ಟಿದೆ” ಎಂದು ಆತನು (ಯೇಸು) ಹೇಳಿದನು.
  • 44:05 “ನೀವು ಮಾಡುತ್ತಿರುವುದನ್ನು ನೀವು ಅರ್ಥಮಾಡಿಕೊಳ್ಳದಿದ್ದರೂ, ಮೆಸ್ಸೀಯನು ___ ಕಷ್ಟಪಡುವನು ___ ಮತ್ತು ಸಾಯುವನೆಂದು ಪ್ರವಾದನೆಗಳನ್ನು ನೆರವೇರಿಸುವುದಕ್ಕೆ ನಿಮ್ಮ ಕ್ರಿಯೆಗಳನ್ನು ದೇವರು ಉಪಯೋಗಿಸಿಕೊಂಡಿದ್ದಾರೆ.”
  • 46:04 “ರಕ್ಷಣೆ ಹೊಂದದಿರುವವರಿಗೆ ನನ್ನ ಹೆಸರನ್ನು ಪ್ರಕಟಿಸುವುದಕ್ಕೆ ನಾನು ಇವನನ್ನು (ಸೌಲ) ಆಯ್ಕೆಮಾಡಿಕೊಂಡಿದ್ದೇನೆ. ನನ್ನ ಕುರಿತಾಗಿ ಇವನು ಎಷ್ಟು ___ ಕಷ್ಟಪಡಬೇಕೆಂದು ___ ನಾನು ತೋರಿಸುತ್ತೇನೆ” ಎಂದು ದೇವರು ಹೇಳಿದರು.
  • 50:17 ಈತನು (ಯೇಸು) ಪ್ರತಿಯೊಬ್ಬರ ಕಣ್ಣೀರನ್ನು ಹೊರೆಸುವನು ಮತ್ತು ಆಲ್ಲಿ ಯಾವ ___ ಕಷ್ಟ ___, ದುಃಖ, ಅಳು, ಕೆಟ್ಟದ್ದು, ಬಾಧೆ, ಅಥವಾ ಮರಣವು ಇರುವುದಿಲ್ಲ.

ಪದ ಡೇಟಾ:

  • Strong's: H943, H1741, H1934, H4342, H4531, H4912, H5142, H5254, H5375, H5999, H6031, H6040, H6041, H6064, H6090, H6770, H6869, H6887, H7661, G91, G941, G971, G2210, G2346, G2347, G3804, G3958, G4310, G4778, G4841, G5004, G5723