kn_tw/bible/other/tongue.md

4.4 KiB

ನಾಲಿಗೆ, ನಾಲಿಗೆಗಳು

ಪದದ ಅರ್ಥವಿವರಣೆ:

ಸತ್ಯವೇದದಲ್ಲಿರುವ “ನಾಲಿಗೆ” ಎನ್ನುವ ಪದಕ್ಕೆ ಅನೇಕವಾದ ಅಲಂಕಾರಿಕ ಅರ್ಥಗಳಿವೆ.

  • ಸತ್ಯವೇದದಲ್ಲಿ ಈ ಪದಕ್ಕೆ ಅತೀ ಸಾಧಾರಣವಾದ ಅಲಂಕಾರಿಕ ಅರ್ಥವು ಏನಂದರೆ “ಭಾಷೆ” ಅಥವಾ “ಮಾತುಗಳು” ಎಂದರ್ಥ.
  • ಕೆಲವೊಂದುಬಾರಿ “ನಾಲಿಗೆ” ಎನ್ನುವುದು ನಿರ್ದಿಷ್ಟವಾದ ಜನರ ಗುಂಪಿನಿಂದ ಮಾತನಾಡುವ ಮಾನವ ಭಾಷೆಯನ್ನು ಸೂಚಿಸುತ್ತದೆ.
  • ಬೇರೊಂದು ಸಮಯಗಳಲ್ಲಿ ಇದು “ಪವಿತ್ರಾತ್ಮ ವರಗಳಲ್ಲಿ” ಒಂದಾಗಿ ಕ್ರಿಸ್ತನ ವಿಶ್ವಾಸಿಗಳಿಗೆ ಪವಿತ್ರಾತ್ಮನು ಕೊಡುವ ಪ್ರಕೃತಾತೀತವಾದ ಭಾಷೆಯನ್ನೂ ಸೂಚಿಸುತ್ತದೆ.
  • ಬೆಂಕಿ “ನಾಲಿಗೆಗಳು” ಎನ್ನುವ ಮಾತು ಬೆಂಕಿ “ಜ್ವಾಲೆಗಳನ್ನು” ಸೂಚಿಸುತ್ತದೆ.
  • “ನನ್ನ ನಾಲಿಗೆ ಆನಂದಪಡುತ್ತಿದೆ” ಎನ್ನುವ ಮಾತಿನಲ್ಲಿರುವ “ನಾಲಿಗೆ” ಎನ್ನುವ ಪದವಿಲ್ಲಿ ಪೂರ್ತಿಯಾಗಿ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. (ನೋಡಿರಿ: ಲಾಕ್ಷಣಿಕ ಪ್ರಯೋಗ)
  • “ಸುಳ್ಳಿನ ನಾಲಿಗೆ” ಎನ್ನುವ ಮಾತು ಒಬ್ಬ ವ್ಯಕ್ತಿಯ ಸ್ವರವನ್ನು ಅಥವಾ ಮಾತುಗಳನ್ನು ಸೂಚಿಸುತ್ತದೆ. (ನೋಡಿರಿ: ಗೌಣೀ ಲಕ್ಷಣ)

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ “ನಾಲಿಗೆ” ಎನ್ನುವ ಪದವನ್ನು “ಭಾಷೆ” ಅಥವಾ “ಅತ್ಮಿಕವಾದ ಭಾಷೆ” ಎಂದೂ ಅನುವಾದ ಮಾಡಬಹುದು. ಸೂಚಿಸುವ ಪದವು ಸ್ಪಷ್ಟವಾಗಿಲ್ಲದಿದ್ದರೆ, “ಭಾಷೆ” ಎಂದು ಅನುವಾದ ಮಾಡುವುದು ಉತ್ತಮ.
  • ಬೆಂಕಿಯನ್ನು ಸೂಚಿಸಿದಾಗ, ಈ ಪದವು “ಜ್ವಾಲೆಗಳು” ಎಂದು ಅನುವಾದ ಮಾಡಬಹುದು.
  • “ನನ್ನ ನಾಲಿಗೆ ಆನಂದಪಡುತ್ತಿದೆ” ಎನ್ನುವ ಮಾತನ್ನು “ನಾನು ಆನಂದಪಟ್ಟು, ದೇವರನ್ನು ಸ್ತುತಿಸುವೆನು” ಅಥವಾ “ನಾನು ಆನಂದಕರವಾಗಿ ದೇವರನ್ನು ಸ್ತುತಿಸುತ್ತೇನೆ” ಎಂದೂ ಅನುವಾದ ಮಾಡಬಹುದು.
  • “ಸುಳ್ಳಾಡುವ ನಾಲಿಗೆ” ಎನ್ನುವ ಮಾತು “ಸುಳ್ಳಾಡುವ ವ್ಯಕ್ತಿ” ಅಥವಾ “ಸುಳ್ಳಾಡುವ ಜನರು” ಎಂದೂ ಅನುವಾದ ಮಾಡಬಹುದು.
  • “ಅವರ ನಾಲಿಗೆಗಳೊಂದಿಗೆ” ಎನ್ನುವಂಥ ಮಾತುಗಳನ್ನು “ಅವರು ಹೇಳುವ ವಿಷಯಗಳೊಂದಿಗೆ” ಅಥವಾ “ಅವರ ಮಾತುಗಳಿಂದ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ವರ, ಪವಿತ್ರಾತ್ಮ, ಸಂತೋಷ, ಸ್ತುತಿ, ಆನಂದಿಸು, ಆತ್ಮ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H762, H2013, H2790, H3956, G1100, G1258, G1447, G2084