5.6 KiB
5.6 KiB
ಸ್ತುತಿ, ಸ್ತುತಿಗಳು, ಸ್ತುತಿಸಿದೆ, ಸ್ತುತಿಗೆ ಯೋಗ್ಯನು
ಪದದ ಅರ್ಥವಿವರಣೆ:
ಯಾರಾದರೊಬ್ಬರನ್ನು ಸ್ತುತಿಸಬೇಕೆಂದರೆ ಆ ವ್ಯಕ್ತಿಯನ್ನು ಗೌರವಿಸುವುದನ್ನು ಮತ್ತು ಮೆಚ್ಚಿಕೊಳ್ಳುವುದನ್ನು ವ್ಯಕ್ತಪಡಿಸುವುದು ಎಂದರ್ಥ.
- ಜನರು ದೇವರನ್ನು ಸ್ತುತಿಸುತ್ತಾರೆ ಯಾಕಂದರೆ ಆತನು ಎಷ್ಟು ದೊಡ್ದವನೋ ಎಂದು ತಿಳಿದು, ಲೋಕ ರಕ್ಷಕನನ್ನಾಗಿ ಮತ್ತು ಸೃಷ್ಟಿಕರ್ತನನ್ನಾಗಿ ಆತನು ಮಾಡಿದ ಅನೇಕ ಅದ್ಭುತಕಾರ್ಯಗಳನ್ನು ತಿಳಿದು ಆತನನ್ನು ಸ್ತುತಿಸುತ್ತಾರೆ.
- ದೇವರಿಗಾಗಿ ಸಲ್ಲಿಸುವ ಸ್ತುತಿ ಅನೇಕಬಾರಿ ಆತನು ಮಾಡಿದ ಕಾರ್ಯಗಳಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿರುತ್ತದೆ.
- ಸಂಗೀತ ಮತ್ತು ಹಾಡುವುದೆನ್ನುವುದು ಅನೇಕಬಾರಿ ದೇವರನ್ನು ಸ್ತುತಿಸುವ ವಿಧಾನವನ್ನಾಗಿ ಉಪಯೋಗಿಸಲಾಗುತ್ತದೆ.
- ದೇವರನ್ನು ಸ್ತುತಿಸುವುದೆನ್ನುವುದು ಆತನನ್ನು ಆರಾಧಿಸುವುದರಲ್ಲಿ ಒಂದು ಭಾಗವಾಗಿರುತ್ತದೆ.
- “ಸ್ತುತಿ” ಎನ್ನುವ ಪದವನ್ನು “ಚೆನ್ನಾಗಿ ಮಾತನಾಡು” ಅಥವಾ “ಮಾತುಗಳೊಂದಿಗೆ ಉನ್ನತವಾಗಿ ಗೌರವಿಸು” ಅಥವಾ “ಆತನ ಕುರಿತು ಒಳ್ಳೇಯ ವಿಷಯಗಳನ್ನು ಹೇಳು” ಎಂದೂ ಅನುವಾದ ಮಾಡಬಹುದು.
- “ಸ್ತುತಿ” ಎನ್ನುವ ನಾಮಪದವನ್ನು “ಹೇಳುವುದರ ಮೂಲಕ ಗೌರವ” ಅಥವಾ “ಗೌರವಿಸುವುದಕ್ಕೆ ಮಾತನಾಡುವುದು” ಅಥವಾ “ಒಬ್ಬರ ಕುರಿತಾಗಿ ಒಳ್ಳೇಯ ವಿಷಯಗಳನ್ನು ಹೇಳುವುದು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಆರಾಧನೆ)
ಸತ್ಯವೇದದ ಅನುಬಂಧ ವಾಕ್ಯಗಳು:
- 2 ಕೊರಿಂಥ.01:3-4
- ಅಪೊ.ಕೃತ್ಯ.02:47
- ಅಪೊ.ಕೃತ್ಯ.13:48
- ದಾನಿ.03:28
- ಎಫೆಸ.01:03
- ಆದಿ.49:8
- ಯಾಕೋಬ.03:9-10
- ಯೋಹಾನ.05:41-42
- ಲೂಕ.01:46
- ಲೂಕ.01:64-66
- ಲೂಕ.19:37-38
- ಮತ್ತಾಯ.11:25-27
- ಮತ್ತಾಯ.15:29-31
ಸತ್ಯವೇದದಿಂದ ಉದಾಹರಣೆಗಳು:
- 12:13 ಇಸ್ರಾಯೇಲ್ಯರು ತಮ್ಮ ಹೊಸ ಸ್ವಾತಂತ್ರ್ಯವನ್ನು ಆಚರಿಸಿಕೊಳ್ಳುವುದಕ್ಕೆ ಮತ್ತು ದೇವರನ್ನು __ ಸ್ತುತಿಸುವುದಕ್ಕೆ __ ಅನೇಕ ಹಾಡುಗಳನ್ನು ಹಾಡಿದರು, ಯಾಕಂದರೆ ಐಗುಪ್ತ ಸೈನ್ಯದಿಂದ ಆತನು ಅವರನ್ನು ರಕ್ಷಿಸಿದನು.
- 17:08 ಈ ಮಾತುಗಳನ್ನು ದಾವೀದನು ಕೇಳಿಸಿಕೊಂಡಾಗ, ಆತನು ತಕ್ಷಣವೇ ಕೃತಜ್ಞತೆಗಳನ್ನು ಸಲ್ಲಿಸಿ, ದೇವರನ್ನು __ ಸ್ತುತಿಸಿದನು __, ಯಾಕಂದರೆ ಈ ಎಲ್ಲಾ ಉನ್ನತವಾದ ಮತ್ತು ಅನೇಕ ಆಶೀರ್ವಾದಗಳೊಂದಿಗೆ ಆತನು ದಾವೀದನು ವಾಗ್ಧಾನ ಮಾಡಿದ್ದನು.
- 22:07 “ದೇವರನ್ನು __ ಸ್ತುತಿಸಿ __, ಯಾಕಂದರೆ ಆತನು ತನ್ನ ಜನರನ್ನು ಜ್ಞಾಪಕ ಮಾಡಿಕೊಂಡನು!” ಎಂದು ಜೆಕರ್ಯನು ಹೇಳಿದನು.
- 43:13 ಅವರು (ಶಿಷ್ಯರು) ಎಲ್ಲರು ಸೇರಿ ದೇವರನ್ನು __ ಸ್ತುತಿಸುವುದರಲ್ಲಿ __ ಸಂತೋಷಪಟ್ಟರು ಮತ್ತು ಅವರೊಂದಿಗೆ ಇರುವ ಎಲ್ಲವುಗಳನ್ನು ಒಬ್ಬರೊಂದಿಗೆ ಒಬ್ಬರು ಹಂಚಿಕೊಂಡರು.
- 47:08 ಅವರು ಪೌಲ ಮತ್ತು ಸೀಲರನ್ನು ಸೆರೆಯ ಅತೀ ಭದ್ರವಾದ ಭಾಗದಲ್ಲಿ ತಮ್ಮ ಕಾಲುಗಳನ್ನು ಕಟ್ಟಿ ಹಾಕಿದ್ದರು. ಆದರೂ ಮಧ್ಯರಾತ್ರಿಯಲ್ಲಿ ಅವರು ದೇವರನ್ನು __ ಸ್ತುತಿಸುವ __ ಹಾಡುಗಳನ್ನು ಹಾಡುತ್ತಾ ಇದ್ದರು.
ಪದ ಡೇಟಾ:
- Strong's: H1319, H7121, G2980, G3853,