kn_tw/bible/other/praise.md

43 lines
5.6 KiB
Markdown

# ಸ್ತುತಿ, ಸ್ತುತಿಗಳು, ಸ್ತುತಿಸಿದೆ, ಸ್ತುತಿಗೆ ಯೋಗ್ಯನು
## ಪದದ ಅರ್ಥವಿವರಣೆ:
ಯಾರಾದರೊಬ್ಬರನ್ನು ಸ್ತುತಿಸಬೇಕೆಂದರೆ ಆ ವ್ಯಕ್ತಿಯನ್ನು ಗೌರವಿಸುವುದನ್ನು ಮತ್ತು ಮೆಚ್ಚಿಕೊಳ್ಳುವುದನ್ನು ವ್ಯಕ್ತಪಡಿಸುವುದು ಎಂದರ್ಥ.
* ಜನರು ದೇವರನ್ನು ಸ್ತುತಿಸುತ್ತಾರೆ ಯಾಕಂದರೆ ಆತನು ಎಷ್ಟು ದೊಡ್ದವನೋ ಎಂದು ತಿಳಿದು, ಲೋಕ ರಕ್ಷಕನನ್ನಾಗಿ ಮತ್ತು ಸೃಷ್ಟಿಕರ್ತನನ್ನಾಗಿ ಆತನು ಮಾಡಿದ ಅನೇಕ ಅದ್ಭುತಕಾರ್ಯಗಳನ್ನು ತಿಳಿದು ಆತನನ್ನು ಸ್ತುತಿಸುತ್ತಾರೆ.
* ದೇವರಿಗಾಗಿ ಸಲ್ಲಿಸುವ ಸ್ತುತಿ ಅನೇಕಬಾರಿ ಆತನು ಮಾಡಿದ ಕಾರ್ಯಗಳಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿರುತ್ತದೆ.
* ಸಂಗೀತ ಮತ್ತು ಹಾಡುವುದೆನ್ನುವುದು ಅನೇಕಬಾರಿ ದೇವರನ್ನು ಸ್ತುತಿಸುವ ವಿಧಾನವನ್ನಾಗಿ ಉಪಯೋಗಿಸಲಾಗುತ್ತದೆ.
* ದೇವರನ್ನು ಸ್ತುತಿಸುವುದೆನ್ನುವುದು ಆತನನ್ನು ಆರಾಧಿಸುವುದರಲ್ಲಿ ಒಂದು ಭಾಗವಾಗಿರುತ್ತದೆ.
* “ಸ್ತುತಿ” ಎನ್ನುವ ಪದವನ್ನು “ಚೆನ್ನಾಗಿ ಮಾತನಾಡು” ಅಥವಾ “ಮಾತುಗಳೊಂದಿಗೆ ಉನ್ನತವಾಗಿ ಗೌರವಿಸು” ಅಥವಾ “ಆತನ ಕುರಿತು ಒಳ್ಳೇಯ ವಿಷಯಗಳನ್ನು ಹೇಳು” ಎಂದೂ ಅನುವಾದ ಮಾಡಬಹುದು.
* “ಸ್ತುತಿ” ಎನ್ನುವ ನಾಮಪದವನ್ನು “ಹೇಳುವುದರ ಮೂಲಕ ಗೌರವ” ಅಥವಾ “ಗೌರವಿಸುವುದಕ್ಕೆ ಮಾತನಾಡುವುದು” ಅಥವಾ “ಒಬ್ಬರ ಕುರಿತಾಗಿ ಒಳ್ಳೇಯ ವಿಷಯಗಳನ್ನು ಹೇಳುವುದು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಆರಾಧನೆ](../kt/worship.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [2 ಕೊರಿಂಥ.01:3-4](rc://*/tn/help/2co/01/03)
* [ಅಪೊ.ಕೃತ್ಯ.02:47](rc://*/tn/help/act/02/47)
* [ಅಪೊ.ಕೃತ್ಯ.13:48](rc://*/tn/help/act/13/48)
* [ದಾನಿ.03:28](rc://*/tn/help/dan/03/28)
* [ಎಫೆಸ.01:03](rc://*/tn/help/eph/01/03)
* [ಆದಿ.49:8](rc://*/tn/help/gen/49/08)
* [ಯಾಕೋಬ.03:9-10](rc://*/tn/help/jas/03/09)
* [ಯೋಹಾನ.05:41-42](rc://*/tn/help/jhn/05/41)
* [ಲೂಕ.01:46](rc://*/tn/help/luk/01/46)
* [ಲೂಕ.01:64-66](rc://*/tn/help/luk/01/64)
* [ಲೂಕ.19:37-38](rc://*/tn/help/luk/19/37)
* [ಮತ್ತಾಯ.11:25-27](rc://*/tn/help/mat/11/25)
* [ಮತ್ತಾಯ.15:29-31](rc://*/tn/help/mat/15/29)
## ಸತ್ಯವೇದದಿಂದ ಉದಾಹರಣೆಗಳು:
* __[12:13](rc://*/tn/help/obs/12/13)__ ಇಸ್ರಾಯೇಲ್ಯರು ತಮ್ಮ ಹೊಸ ಸ್ವಾತಂತ್ರ್ಯವನ್ನು ಆಚರಿಸಿಕೊಳ್ಳುವುದಕ್ಕೆ ಮತ್ತು ದೇವರನ್ನು __ ಸ್ತುತಿಸುವುದಕ್ಕೆ __ ಅನೇಕ ಹಾಡುಗಳನ್ನು ಹಾಡಿದರು, ಯಾಕಂದರೆ ಐಗುಪ್ತ ಸೈನ್ಯದಿಂದ ಆತನು ಅವರನ್ನು ರಕ್ಷಿಸಿದನು.
* __[17:08](rc://*/tn/help/obs/17/08)__ ಈ ಮಾತುಗಳನ್ನು ದಾವೀದನು ಕೇಳಿಸಿಕೊಂಡಾಗ, ಆತನು ತಕ್ಷಣವೇ ಕೃತಜ್ಞತೆಗಳನ್ನು ಸಲ್ಲಿಸಿ, ದೇವರನ್ನು __ ಸ್ತುತಿಸಿದನು __, ಯಾಕಂದರೆ ಈ ಎಲ್ಲಾ ಉನ್ನತವಾದ ಮತ್ತು ಅನೇಕ ಆಶೀರ್ವಾದಗಳೊಂದಿಗೆ ಆತನು ದಾವೀದನು ವಾಗ್ಧಾನ ಮಾಡಿದ್ದನು.
* __[22:07](rc://*/tn/help/obs/22/07)__ “ದೇವರನ್ನು __ ಸ್ತುತಿಸಿ __, ಯಾಕಂದರೆ ಆತನು ತನ್ನ ಜನರನ್ನು ಜ್ಞಾಪಕ ಮಾಡಿಕೊಂಡನು!” ಎಂದು ಜೆಕರ್ಯನು ಹೇಳಿದನು.
* __[43:13](rc://*/tn/help/obs/43/13)__ ಅವರು (ಶಿಷ್ಯರು) ಎಲ್ಲರು ಸೇರಿ ದೇವರನ್ನು __ ಸ್ತುತಿಸುವುದರಲ್ಲಿ __ ಸಂತೋಷಪಟ್ಟರು ಮತ್ತು ಅವರೊಂದಿಗೆ ಇರುವ ಎಲ್ಲವುಗಳನ್ನು ಒಬ್ಬರೊಂದಿಗೆ ಒಬ್ಬರು ಹಂಚಿಕೊಂಡರು.
* __[47:08](rc://*/tn/help/obs/47/08)__ ಅವರು ಪೌಲ ಮತ್ತು ಸೀಲರನ್ನು ಸೆರೆಯ ಅತೀ ಭದ್ರವಾದ ಭಾಗದಲ್ಲಿ ತಮ್ಮ ಕಾಲುಗಳನ್ನು ಕಟ್ಟಿ ಹಾಕಿದ್ದರು. ಆದರೂ ಮಧ್ಯರಾತ್ರಿಯಲ್ಲಿ ಅವರು ದೇವರನ್ನು __ ಸ್ತುತಿಸುವ __ ಹಾಡುಗಳನ್ನು ಹಾಡುತ್ತಾ ಇದ್ದರು.
## ಪದ ಡೇಟಾ:
* Strong's: H1319, H7121, G2980, G3853,