4.9 KiB
4.9 KiB
ಬೋಧಕ, ಬೋಧಕರು
ಪದದ ಅರ್ಥವಿವರಣೆ:
ಬೋಧಕ ಎನ್ನುವ ಪದಕ್ಕೆ ಇತರ ಜನರಿಗೆ ಹೊಸ ಮಾಹಿತಿಯನ್ನು ಕೊಡುವ ವ್ಯಕ್ತಿ ಎಂದರ್ಥ. ಬೋಧಕರು ಇತರರಿಗೆ ಕೌಶಲ್ಯಗಳನ್ನು ಮತ್ತು ಜ್ಞಾನವನ್ನು ಪಡೆದುಕೊಂಡು, ಅದನ್ನು ಉಪಯೋಗಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತಾರೆ.
- ಸತ್ಯವೇದದಲ್ಲಿ “ಬೋಧಕ” ಎನ್ನುವ ಪದವು ದೇವರ ಕುರಿತಾಗಿ ಬೋಧನೆ ಮಾಡುವ ವ್ಯಕ್ತಿಯನ್ನು ಸೂಚಿಸುವುದಕ್ಕೆ ವಿಶೇಷವಾದ ಭಾವನೆಯಲ್ಲಿ ಉಪಯೋಗಿಸಿರುತ್ತಾರೆ.
- ಬೋಧಕನಿಂದ ಕಲಿತುಕೊಳ್ಳುವ ಜನರನ್ನು “ವಿದ್ಯಾರ್ಥಿಗಳು” ಅಥವಾ “ಶಿಷ್ಯರು” ಎಂದು ಕರೆಯುತ್ತಾರೆ.
- ಕೆಲವೊಂದು ಸತ್ಯವೇದ ಅನುವಾದಗಳಲ್ಲಿ ಈ ಪದವನ್ನು (ಬೋಧಕ) ಯೇಸುವಿಗೆ ಬಿರುದಾಗಿ ಉಪಯೋಗಿಸುತ್ತಿರುವಾಗ ಆ ಪದದ ಮೊದಲನೇ ಅಕ್ಷರವನ್ನು ದೊಡ್ಡದಾಗಿ ಮಾಡುತ್ತಾರೆ.
ಅನುವಾದ ಸಲಹೆಗಳು:
- ಬೋಧಕ ಎನ್ನುವ ಪದವನ್ನು ಅನುವಾದ ಮಾಡುವುದಕ್ಕೆ ಸಾಧಾರಣವಾಗಿ ಉಪಯೋಗಿಸುವ ಪದವನ್ನಿಟ್ಟು ಅನುವಾದ ಮಾಡಬಹುದು, ಆದರೆ ಇದನ್ನು ಶಾಲೆಯ ಉಪಾಧ್ಯಾಯನಿಗೆ ಮಾತ್ರವೇ ಸೂಚಿಸದಂತೆ ಇರಬಾರದು.
- ಕೆಲವೊಂದು ಸಂಸ್ಕೃತಿಗಳಲ್ಲಿ ಧರ್ಮ ಸಂಬಂಧವಾದ ಬೋಧಕರಿಗೆ ವಿಶೇಷವಾದ ಬಿರುದುಗಳನ್ನು ಹೊಂದಿರಬಹುದು, ಉದಾಹರಣೆಗೆ, “ಅಯ್ಯಾ” ಅಥವಾ “ರಬ್ಬೀ” ಅಥವಾ “ಪ್ರಸಂಗೀಕ”.
(ಈ ಪದಗಳನ್ನು ಸಹ ನೋಡಿರಿ : ಶಿಷ್ಯ, ಪ್ರಸಂಗಿಸು)
ಸತ್ಯವೇದದ ಅನುಬಂಧ ವಾಕ್ಯಗಳು:
- ಪ್ರಸಂಗಿ.01:12-15
- ಎಫೆಸ.04:11-13
- ಗಲಾತ್ಯ.06:6-8
- ಹಬ.02:18
- ಯಾಕೋಬ.03:02
- ಯೋಹಾನ.01:37-39
- ಲೂಕ.06:40
- ಮತ್ತಾಯ.12:38-40
ಸತ್ಯವೇದ ಕತೆಗಳಿಂದ ಉದಾಹರಣೆಗಳು:
- 27:01 ಒಂದು ದಿನ ಯೆಹೂದ್ಯರ ಧರ್ಮಶಾಸ್ತ್ರದಲ್ಲಿ ನಿಪುಣನು ಯೇಸುವನ್ನು ಪರೀಕ್ಷೆ ಮಾಡಲು ಆತನ ಬಳಿಗೆ ಬಂದು, “ಬೋಧಕನೆ, ನಿತ್ಯಜೀವವನ್ನು ಹೊಂದಿಕೊಳ್ಳುವುದಕ್ಕೆ ನಾನೇನು ಮಾಡಬೇಕು?” ಎಂದು ಕೇಳಿದನು
- 28:01 ಒಂದು ದಿನ ಒಬ್ಬ ಯೌವ್ವನ ಪಾಲಕನು ಯೇಸುವಿನ ಬಳಿಗೆ ಬಂದು, “ಒಳ್ಳೇಯ __ ಬೋಧಕನೆ __ ನಾನು ನಿತ್ಯಜೀವವನ್ನು ಪಡೆಯುವುದಕ್ಕೆ ಏನು ಮಾಡಬೇಕು?” ಎಂದು ಕೇಳಿದನು.
- 37:02 ಎರಡು ದಿನಗಳು ಕಳೆದು ಹೋದನಂತರ, ಯೇಸು ತನ್ನ ಶಿಷ್ಯರೊಂದಿಗೆ, “ನಾವು ಯೂದಾಗೆ ಹಿಂದಿರುಗಿ ಹೋಗೋಣ” ಎಂದು ಹೇಳಿದನು. “ಆದರೆ __ ಬೋಧಕನೆ __ “ “ಸ್ವಲ್ಪ ಸಮಯದ ಮುಂಚಿತವಾಗಿ ಅಲ್ಲಿರುವ ಜನರು ನಿಮ್ಮನ್ನು ಸಾಯಿಸಬೇಕೆಂದು ಬಯಸಿದ್ದರು” ಎಂದು ಶಿಷ್ಯರು ಹೇಳಿದರು.
- 38:14 ಯೂದಾನು ಯೇಸುವಿನ ಬಳಿಗೆ ಬಂದು, “__ ಬೋಧಕನಿಗೆ __ ಶುಭಗಳು” ಎಂದು ಹೇಳಿ, ಆತನಿಗೆ ಮುದ್ದಿಟ್ಟನು
- 49:03 ಯೇಸು ಕೂಡ ಉತ್ತಮ ಉನ್ನತ __ ಬೋಧಕನಾಗಿದ್ದನು __, ಆತನು ದೇವರ ಮಗನಾಗಿರುವದರಿಂದ ಅಧಿಕಾರದಿಂದ ಮಾತನಾಡಿದ್ದನು.
ಪದ ಡೇಟಾ:
- Strong's: H3384, H3925, G1320, G2567, G3547, G5572