kn_tw/bible/other/teacher.md

40 lines
4.9 KiB
Markdown

# ಬೋಧಕ, ಬೋಧಕರು
## ಪದದ ಅರ್ಥವಿವರಣೆ:
ಬೋಧಕ ಎನ್ನುವ ಪದಕ್ಕೆ ಇತರ ಜನರಿಗೆ ಹೊಸ ಮಾಹಿತಿಯನ್ನು ಕೊಡುವ ವ್ಯಕ್ತಿ ಎಂದರ್ಥ. ಬೋಧಕರು ಇತರರಿಗೆ ಕೌಶಲ್ಯಗಳನ್ನು ಮತ್ತು ಜ್ಞಾನವನ್ನು ಪಡೆದುಕೊಂಡು, ಅದನ್ನು ಉಪಯೋಗಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತಾರೆ.
* ಸತ್ಯವೇದದಲ್ಲಿ “ಬೋಧಕ” ಎನ್ನುವ ಪದವು ದೇವರ ಕುರಿತಾಗಿ ಬೋಧನೆ ಮಾಡುವ ವ್ಯಕ್ತಿಯನ್ನು ಸೂಚಿಸುವುದಕ್ಕೆ ವಿಶೇಷವಾದ ಭಾವನೆಯಲ್ಲಿ ಉಪಯೋಗಿಸಿರುತ್ತಾರೆ.
* ಬೋಧಕನಿಂದ ಕಲಿತುಕೊಳ್ಳುವ ಜನರನ್ನು “ವಿದ್ಯಾರ್ಥಿಗಳು” ಅಥವಾ “ಶಿಷ್ಯರು” ಎಂದು ಕರೆಯುತ್ತಾರೆ.
* ಕೆಲವೊಂದು ಸತ್ಯವೇದ ಅನುವಾದಗಳಲ್ಲಿ ಈ ಪದವನ್ನು (ಬೋಧಕ) ಯೇಸುವಿಗೆ ಬಿರುದಾಗಿ ಉಪಯೋಗಿಸುತ್ತಿರುವಾಗ ಆ ಪದದ ಮೊದಲನೇ ಅಕ್ಷರವನ್ನು ದೊಡ್ಡದಾಗಿ ಮಾಡುತ್ತಾರೆ.
## ಅನುವಾದ ಸಲಹೆಗಳು:
* ಬೋಧಕ ಎನ್ನುವ ಪದವನ್ನು ಅನುವಾದ ಮಾಡುವುದಕ್ಕೆ ಸಾಧಾರಣವಾಗಿ ಉಪಯೋಗಿಸುವ ಪದವನ್ನಿಟ್ಟು ಅನುವಾದ ಮಾಡಬಹುದು, ಆದರೆ ಇದನ್ನು ಶಾಲೆಯ ಉಪಾಧ್ಯಾಯನಿಗೆ ಮಾತ್ರವೇ ಸೂಚಿಸದಂತೆ ಇರಬಾರದು.
* ಕೆಲವೊಂದು ಸಂಸ್ಕೃತಿಗಳಲ್ಲಿ ಧರ್ಮ ಸಂಬಂಧವಾದ ಬೋಧಕರಿಗೆ ವಿಶೇಷವಾದ ಬಿರುದುಗಳನ್ನು ಹೊಂದಿರಬಹುದು, ಉದಾಹರಣೆಗೆ, “ಅಯ್ಯಾ” ಅಥವಾ “ರಬ್ಬೀ” ಅಥವಾ “ಪ್ರಸಂಗೀಕ”.
(ಈ ಪದಗಳನ್ನು ಸಹ ನೋಡಿರಿ : [ಶಿಷ್ಯ](../kt/disciple.md), [ಪ್ರಸಂಗಿಸು](../other/preach.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [ಪ್ರಸಂಗಿ.01:12-15](rc://*/tn/help/ecc/01/12)
* [ಎಫೆಸ.04:11-13](rc://*/tn/help/eph/04/11)
* [ಗಲಾತ್ಯ.06:6-8](rc://*/tn/help/gal/06/06)
* [ಹಬ.02:18](rc://*/tn/help/hab/02/18)
* [ಯಾಕೋಬ.03:02](rc://*/tn/help/jas/03/02)
* [ಯೋಹಾನ.01:37-39](rc://*/tn/help/jhn/01/37)
* [ಲೂಕ.06:40](rc://*/tn/help/luk/06/40)
* [ಮತ್ತಾಯ.12:38-40](rc://*/tn/help/mat/12/38)
## ಸತ್ಯವೇದ ಕತೆಗಳಿಂದ ಉದಾಹರಣೆಗಳು:
* __[27:01](rc://*/tn/help/obs/27/01)__ ಒಂದು ದಿನ ಯೆಹೂದ್ಯರ ಧರ್ಮಶಾಸ್ತ್ರದಲ್ಲಿ ನಿಪುಣನು ಯೇಸುವನ್ನು ಪರೀಕ್ಷೆ ಮಾಡಲು ಆತನ ಬಳಿಗೆ ಬಂದು, “__ಬೋಧಕನೆ__, ನಿತ್ಯಜೀವವನ್ನು ಹೊಂದಿಕೊಳ್ಳುವುದಕ್ಕೆ ನಾನೇನು ಮಾಡಬೇಕು?” ಎಂದು ಕೇಳಿದನು
* __[28:01](rc://*/tn/help/obs/28/01)__ ಒಂದು ದಿನ ಒಬ್ಬ ಯೌವ್ವನ ಪಾಲಕನು ಯೇಸುವಿನ ಬಳಿಗೆ ಬಂದು, “ಒಳ್ಳೇಯ __ ಬೋಧಕನೆ __ ನಾನು ನಿತ್ಯಜೀವವನ್ನು ಪಡೆಯುವುದಕ್ಕೆ ಏನು ಮಾಡಬೇಕು?” ಎಂದು ಕೇಳಿದನು.
* __[37:02](rc://*/tn/help/obs/37/02)__ ಎರಡು ದಿನಗಳು ಕಳೆದು ಹೋದನಂತರ, ಯೇಸು ತನ್ನ ಶಿಷ್ಯರೊಂದಿಗೆ, “ನಾವು ಯೂದಾಗೆ ಹಿಂದಿರುಗಿ ಹೋಗೋಣ” ಎಂದು ಹೇಳಿದನು. “ಆದರೆ __ ಬೋಧಕನೆ __ “ “ಸ್ವಲ್ಪ ಸಮಯದ ಮುಂಚಿತವಾಗಿ ಅಲ್ಲಿರುವ ಜನರು ನಿಮ್ಮನ್ನು ಸಾಯಿಸಬೇಕೆಂದು ಬಯಸಿದ್ದರು” ಎಂದು ಶಿಷ್ಯರು ಹೇಳಿದರು.
* __[38:14](rc://*/tn/help/obs/38/14)__ ಯೂದಾನು ಯೇಸುವಿನ ಬಳಿಗೆ ಬಂದು, “__ ಬೋಧಕನಿಗೆ __ ಶುಭಗಳು” ಎಂದು ಹೇಳಿ, ಆತನಿಗೆ ಮುದ್ದಿಟ್ಟನು
* __[49:03](rc://*/tn/help/obs/49/03)__ ಯೇಸು ಕೂಡ ಉತ್ತಮ ಉನ್ನತ __ ಬೋಧಕನಾಗಿದ್ದನು __, ಆತನು ದೇವರ ಮಗನಾಗಿರುವದರಿಂದ ಅಧಿಕಾರದಿಂದ ಮಾತನಾಡಿದ್ದನು.
## ಪದ ಡೇಟಾ:
* Strong's: H3384, H3925, G1320, G2567, G3547, G5572