kn_tw/bible/other/spear.md

3.0 KiB

ಭರ್ಜಿ, ಭಲ್ಲೆಯಗಾರ

ಅರ್ಥವಿವರಣೆ:

ಭರ್ಜಿ ಎನ್ನುವುದು ಉದ್ದವಾದ ಕಟ್ಟಿಗೆಯ ತುದಿ ಭಾಗದಲ್ಲಿ ಚೂಪಾದ ಲೋಹದ ಕತ್ತಿಯನ್ನು ಹೊಂದಿರುವ ಸಾಧನವಾಗಿರುತ್ತದೆ, ಇದನ್ನು ದೂರಕ್ಕೆ ಎಸೆಯುವುದಕ್ಕೆ ಉಪಯೋಗಿಸುತ್ತಾರೆ.

  • ಸತ್ಯವೇದದ ಕಾಲಗಳಲ್ಲಿ ಭರ್ಜಿಗಳನ್ನು ಯುದ್ಧದಲ್ಲಿ ಉಪಯೋಗಿಸುತ್ತಿದ್ದರು. ನಿರ್ದಿಷ್ಟವಾದ ಜನರ ಗುಂಪುಗಳ ಮಧ್ಯೆದಲ್ಲಿಯೂ ಈಗಿನ ಕಾಲದಲ್ಲಿ ಇನ್ನೂ ಅವುಗಳನ್ನು ಉಪಯೋಗಿಸುತ್ತಿದ್ದಾರೆ.
  • ಯೇಸುವನ್ನು ಶಿಲುಬೆಗೆ ಏರಿಸಿದನಂತರ ಯೇಸುವಿನ ಪಕ್ಕೆಯಲ್ಲಿ ತಿವಿಯುವುದಕ್ಕೆ ರೋಮದ ಸೈನಿಕನು ಭರ್ಜಿಯನ್ನು ಉಪಯೋಗಿಸಿರುತ್ತಾನೆ.
  • ಕೆಲವೊಂದುಬಾರಿ ಜನರು ಭರ್ಜಿಗಳನ್ನು ಮೀನುಗಳನ್ನು ಹಿಡಿಯುವದಕ್ಕೆ ಎಸೆಯಲು ಅಥವಾ ಬೇರೊಂದು ಬೇಟಿಯಲ್ಲಿ ಆಹಾರಕ್ಕಾಗಿ ಎಸೆಯಲು ಉಪಯೋಗಿಸಿರುತ್ತಾರೆ.
  • ಇದಕ್ಕೆ ಸಮಾನವಾಗಿ “ಹಗುರಾದ ಈಟಿ” ಅಥವಾ “ಶೂಲ” ಎನ್ನುವ ಆಯುಧಗಳು ಇರುತ್ತವೆ.
  • "ಭರ್ಜಿ" ಎನ್ನುವ ಅನುವಾದವು "ಖಡ್ಗ" ಎನ್ನುವ ಅನುವಾದಕ್ಕಿಂತ ಭಿನ್ನವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಇದನ್ನು ಎಸೆಯಲು ಅಲ್ಲ, ತಳ್ಳಲು ಅಥವಾ ತಿವಿಯುವುದಕ್ಕೆ ಉಪಯೋಗಿಸುವ ಆಯುಧವಾಗಿದೆ. ಅಲ್ಲದೇ, ಖಡ್ಗವು ಹಿಡಿಕೆಯೊಂದಿಗೆ ಉದ್ದವಾದ ಕತ್ತಿಯನ್ನು ಹೊಂದಿರುತ್ತದೆ, ಆದರೆ ಭರ್ಜಿಯು ಉದ್ದವಾದ ಬಾಣದ ತುದಿಯಲ್ಲಿ ಸಣ್ಣ ಕತ್ತಿಯನ್ನು ಹೊಂದಿರುತ್ತದೆ.

(ಇವುಗಳನ್ನು ಸಹ ನೋಡಿರಿ : ಬೇಟೆ, ರೋಮ್, ಖಡ್ಗ, ಸೈನಿಕ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದದ ಡೇಟಾ:

  • Strong's: H1265, H2595, H3591, H6767, H7013, H7420, G30570