kn_tw/bible/other/sword.md

5.6 KiB

ಖಡ್ಗ, ಖಡ್ಗಗಳು, ಖಡ್ಗಗಗಳನ್ನು ಹಿಡಿಯುವವರು

ಪದದ ಅರ್ಥವಿವರಣೆ:

ಖಡ್ಗ ಎನ್ನುವುದು ತಿವಿಯುವುದಕ್ಕೆ ಅಥವಾ ಕತ್ತರಿಸುವುದಕ್ಕೆ ಉಪಯೋಗಿಸುವ ಸಪಟವಾದ ಕತ್ತಿಯನ್ನು ಹೊಂದಿರುವ ಲೋಹದ ಸಾಧನೆಯಾಗಿರುತ್ತದೆ. ಇದಕ್ಕೆ ದೊಡ್ಡದಾದ ಒಂದು ಕೈಪಿಡಿ ಇರುತ್ತದೆ, ಕತ್ತರಿಸುವುದಕ್ಕೆ ಚೂಪಾದ ತುದಿಯನ್ನು ಹೊಂದಿರುವ ಕತ್ತಿಯನ್ನು ಹೊಂದಿರುತ್ತದೆ.

  • ಪುರಾತನ ಕಾಲಗಳಲ್ಲಿ ಖಡ್ಗದ ಉದ್ದವು 60 ರಿಂದ 91 ಸೆಂಟಿಮೀಟರುಗಳಿರುತ್ತಿತ್ತು.
  • ಕೆಲವೊಂದು ಖಡ್ಗಗಳಿಗೆ ಎರಡು ಕಡೆಗೆ ಚೂಪಾದ ತುದಿಗಳು ಇರುತ್ತಿದ್ದವು, ಇದನ್ನು “ಇಬ್ಬಾಯಿ ಕತ್ತಿ” ಅಥವಾ “ಎರಡು ತುದಿಗಳಿರುವ ಕತ್ತಿ” ಎಂದು ಕರೆಯುತ್ತಾರೆ.
  • ಯೇಸು ಶಿಷ್ಯರು ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಕತ್ತಿಗಳನ್ನು ಇಟ್ಟುಕೊಂಡಿದ್ದರು. ಪೇತ್ರನು ತನ್ನ ಬಳಿ ಇರುವ ಕತ್ತಿಯಿಂದ ಮಹಾ ಯಾಜಕನ ಸೇವಕನ ಕಿವಿಯನ್ನು ಕತ್ತರಿಸಿದನು.
  • ಸ್ನಾನಿಕನಾದ ಯೋಹಾನ ಮತ್ತು ಅಪೊಸ್ತಲನಾದ ಯಾಕೋಬರು ಖಡ್ಗಗಳಿಂದ ಶಿರಚ್ಛೇದನ ಮಾಡಲ್ಪಟ್ಟರು.

ಅನುವಾದ ಸಲಹೆಗಳು:

  • ಖಡ್ಗ ಎನ್ನುವ ಪದವನ್ನು ದೇವರ ವಾಕ್ಯಕ್ಕೆ ಅಲಂಕಾರಿಕವಾಗಿ ಉಪಯೋಗಿಸಿದ್ದಾರೆ. ಸತ್ಯವೇದದಲ್ಲಿರುವ ದೇವರ ಬೋಧನೆಗಳು ಜನರ ಅಂತರಂಗದ ಆಲೋಚನೆಗಳನ್ನು ಮತ್ತು ಅವರು ಮಾಡಿದ ಪಾಪಗಳನ್ನು ಒಪ್ಪಿಕೊಳ್ಳುವುದನ್ನು ಹೊರಕ್ಕೆ ವ್ಯಕ್ತಗೊಳಿಸುತ್ತದೆ. ಅದೇ ರೀತಿಯಲ್ಲಿ ಖಡ್ಗ ಎನ್ನುವುದು ತುಂಬಾ ಆಳವಾಗಿ ಕತ್ತರಿಸುವುದು ಮತ್ತು ನೋವನ್ನು ಉಂಟುಮಾಡುತ್ತದೆ. (ನೋಡಿರಿ: ರೂಪಕಾಲಂಕಾರ)
  • ಈ ಪದವನ್ನು ಅಲಂಕಾರಿಕವಾಗಿ ಉಪಯೋಗಿಸಿದಾಗ, “ದೇವರ ವಾಕ್ಯವು ಖಡ್ಗದಂತಿದೆ, ಇದು ಆಳವಾಗಿ ಕತ್ತರಿಸಿ, ಪಾಪವನ್ನು ತೋರಿಸುತ್ತದೆ” ಎಂದೂ ಅನುವಾದ ಮಾಡಬಹುದು.
  • ಈ ರೀತಿಯ ಅಲಂಕಾರಿಕ ಉಪಯೋಗವು ಕೀರ್ತನೆಗಳ ಪುಸ್ತಕದಲ್ಲಿ ಕಾಣಿಸಿಕೊಳ್ಳುತ್ತದೆ, ಒಬ್ಬ ವ್ಯಕ್ತಿಯ ನಾಲಗೆಯು ಅಥವಾ ಮಾತು ಖಡ್ಗಕ್ಕೆ ಹೋಲಿಸಲಾಗಿರುತ್ತದೆ, ಇದು ಜನರಿಗೆ ಹಾನಿ ಮಾಡುತ್ತದೆ. ಇದನ್ನು “ನಾಲಗೆಯು ಖಡ್ಗದಂತಿದೆ, ಇದು ಮನುಷ್ಯರಿಗೆ ಅತೀ ಭಯಂಕರವಾಗಿ ಹಾನಿಯನ್ನುಂಟು ಮಾಡುತ್ತದೆ” ಎಂದೂ ಅನುವಾದ ಮಾಡಬಹುದು.
  • ನಿಮ್ಮ ಸಂಸ್ಕೃತಿಯಲ್ಲಿ ಖಡ್ಗಗಳನ್ನು ಉಪಯೋಗಿಸದಿದ್ದರೆ, ಈ ಪದವನ್ನು ತಿವಿಯುವುದಕ್ಕೆ ಅಥವಾ ಕತ್ತರಿಸುವುದಕ್ಕೆ ಉಪಯೋಗಿಸುವ ಉದ್ದವಾದ ಕತ್ತಿಯ ಹೆಸರಿನೊಂದಿಗೆ ಅನುವಾದ ಮಾಡಬಹುದು.
  • ಖಡ್ಗವನ್ನು “ಚೂಪಾದ ಆಯುಧ” ಅಥವಾ “ಉದ್ದವಾದ ಕತ್ತಿ” ಎಂದು ವಿವರಿಸುವುದಕ್ಕೆ ಉಪಯೋಗಿಸುತ್ತಾರೆ. ಕೆಲವೊಂದು ಅನುವಾದಗಳಲ್ಲಿ ಖಡ್ಗದ ಚಿತ್ರಣವನ್ನು ಇಟ್ಟಿರುತ್ತಾರೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ಯಾಕೋಬ (ಯೇಸುವಿನ ಸಹೋದರ), ಯೋಹಾನ (ಸ್ನಾನಿಕನು), ನಾಲಗೆ, ದೇವರ ವಾಕ್ಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H19, H1300, H2719, H4380, H6609, H7524, H7973, G3162, G4501