kn_tw/bible/other/seal.md

2.7 KiB
Raw Permalink Blame History

ಮುದ್ರೆ, ಮುದ್ರಿಸಲ್ಪಟ್ಟಿದೆ, ಮುದ್ರೆ ಹಾಕದಿರುವ

ಪದದ ಅರ್ಥವಿವರಣೆ:

"ಸೀಲ್"(ಮುದ್ರೆ) ಎಂಬ ಪದದ ಅರ್ಥವೇನೆಂದರೆ ವಸ್ತುವನ್ನು ಯಾವುದನ್ನಾದರೂ ಉಪಯೋಗಿಸಿ ಮುಚ್ಚುವುದು (ಸಾಮಾನ್ಯವಾಗಿ ಇದನ್ನು "ಸೀಲ್" ಎಂದು ಕರೆಯಲಾಗುತ್ತದೆ) ಅದು ಮುದ್ರೆಯನ್ನು ಮುರಿಯದೆ ವಸ್ತುವನ್ನು ತೆರೆಯಲು ಅಸಾಧ್ಯವಾಗುತ್ತದೆ.

  • ಅನೇಕಬಾರಿ ಈ ಮುದ್ರೆಯೂ ಯಾರಿಗೆ ಸಂಬಂಧಪಟ್ಟಿರುತ್ತದೆಯೆಂದು ಅದರ ಮೇಲೆ ತಮ್ಮದೇಯಾದ ಅಲಂಕಾರವನ್ನು ಮುದ್ರಿಸಿರುತ್ತಾರೆ.
  • ಭದ್ರವಾಗಿರುವುದಕ್ಕೆ ಪತ್ರಗಳನ್ನು ಅಥವಾ ಇತರ ಕಾಗದಗಳನ್ನು ಮುದ್ರಿಸುವುದಕ್ಕೆ ಕರಗಿದ ಮೇಣವನ್ನು ಉಪಯೋಗಿಸುತ್ತಿದ್ದರು. ಮೇಣವು ತಣ್ಣಗಾಗಿ, ಗಟ್ಟಿಯಾದ ಮೇಲೆ ಆ ಪತ್ರದ ಮುದ್ರೆಯನ್ನು ಮುರಿಯುವುತನಕ ಅದನ್ನು ತೆರೆಯುವುದಕ್ಕೆ ಸಾಧ್ಯವಾಗುವುದಿಲ್ಲ.
  • ಯೇಸುವಿನ ಸಮಾಧಿಗೆ ಇಟ್ಟಿರುವ ಕಲ್ಲನ್ನು ಯಾರೂ ಪಕ್ಕಕ್ಕೆ ತೊಲಗಿಸದೇ ಇರುವುದಕ್ಕೆ ಆ ಕಲ್ಲಿನ ಮೇಲೆ ಮುದ್ರೆಯನ್ನು ಹಾಕಿದ್ದರು.
  • ನಮ್ಮ ರಕ್ಷಣೆಯು ಭದ್ರವಾಗಿದೆಯೆಂದು ತೋರಿಸುವುದಕ್ಕೆ “ಮುದ್ರೆ”ಯನ್ನಾಗಿ ಪವಿತ್ರಾತ್ಮನನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಪೌಲನು ಈ ಪದವನ್ನು ಉಪಯೋಗಿಸಿದ್ದನು.

(ಈ ಪದಗಳನ್ನು ಸಹ ನೋಡಿರಿ : ಪವಿತ್ರಾತ್ಮ, ಸಮಾಧಿ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H2368, H2560, H2856, H2857, H2858, H5640, G2696, G4972, G4973