6.1 KiB
6.1 KiB
ಸಮಾಧಿ, ಸಮಾಧಿ ತೋಡುವವನು, ಸಮಾಧಿಗಳು, ಗೋರಿ, ಗೋರಿಗಳು, ಹೂಣಿಡುವ ಸ್ಥಳ
ಪದದ ಅರ್ಥವಿವರಣೆ:
“ಗೋರಿ” ಮತ್ತು “ಸಮಾಧಿ” ಎನ್ನುವ ಪದಗಳು ಸತ್ತಂತ ವ್ಯಕ್ತಿಯ ದೇಹವನ್ನು ಜನರು ಇಡುವ ಸ್ಥಳವನ್ನು ಸೂಚಿಸುತ್ತದೆ. “ಹೂಣಿಡುವ ಸ್ಥಳ” ಎಂದರೆ ಈ ವಿಷಯವನ್ನೇ ಸೂಚಿಸುವ ಸರ್ವ ಸಾಧಾರಣ ಪದವಾಗಿರುತ್ತದೆ.
- ಯೆಹೂದ್ಯರು ಕೆಲವೊಂದುಬಾರಿ ಗುಹೆಗಳನ್ನು ಸಮಾಧಿಗಳನ್ನಾಗಿ ಉಪಯೋಗಿಸುತ್ತಿದ್ದರು, ಮತ್ತು ಕೆಲವೊಂದುಬಾರಿ ದೊಡ್ಡ ಕಲ್ಲು ಬಂಡೆಗಳನ್ನು ಗುಹೆಗಳನ್ನಾಗಿ ಅಗೆದು ಅವುಗಳನ್ನು ಸಮಾಧಿಗಳನ್ನಾಗಿ ಉಪಯೋಗಿಸುತ್ತಿದ್ದರು.
- ಹೊಸ ಒಡಂಬಡಿಕೆಯ ಕಾಲದಲ್ಲಿ ಸಮಾಧಿಯಾಗಿರುವ ಗುಹೆಯನ್ನು ಮುಚ್ಚುವುದಕ್ಕೆ ಒಂದು ದೊಡ್ಡ ಕಲ್ಲನ್ನು ಉರುಳಿಸುವುದು ಸಾಧಾರಣವಾಗಿ ನಡೆಯುವ ವಿಷಯವಾಗಿತ್ತು.
- ಅನುವಾದ ಮಾಡುವ ಭಾಷೆಯಲ್ಲಿ ಸಮಾಧಿಗೆ ಉಪಯೋಗಿಸುವ ಪದವು ನೆಲವನ್ನು ಅಗೆದು ಶವವನ್ನು ಇಡುವ ಸ್ಥಳವನ್ನು ಮಾತ್ರ ಸೂಚಿಸುವುದಾಗಿದ್ದರೆ, ಇದನ್ನು “ಗುಹೆ” ಅಥವಾ “ಬೆಟ್ಟದ ಪಕ್ಕದಲ್ಲಿ ರಂಧ್ರವನ್ನು ಅಗೆಯುವುದು” ಎಂದೂ ಅನುವಾದ ಮಾಡಬಹುದು.
- “ಸಮಾಧಿ” ಎನ್ನುವ ಮಾತು ಅನೇಕಬಾರಿ ಸತ್ತಂತ ಜನರ ಆತ್ಮಗಳು ಇರುವ ಸ್ಥಳ ಅಥವಾ ಸತ್ತಂತ ಸ್ಥಿತಿಯನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಮತ್ತು ಸಾಧಾರಣವಾಗಿ ಉಪಯೋಗಿಸಲ್ಪಟ್ಟಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : ಹೂಣಿಡುವುದು, ಮರಣ)
ಸತ್ಯವೇದದ ಅನುಬಂಧ ವಾಕ್ಯಗಳು :
- ಅಪೊ.ಕೃತ್ಯ.02:29-31
- ಆದಿ.23:5-6
- ಆದಿ.50:4-6
- ಯೋಹಾನ.19:40-42
- ಲೂಕ.23:52-53
- ಮಾರ್ಕ.05:1-2
- ಮತ್ತಾಯ.27:51-53
- ರೋಮಾ.03:13-14
ಸತ್ಯವೇದದಿಂದ ಉದಾಹರಣೆಗಳು:
- 32:04 ಆ ಪ್ರಾಂತ್ಯದಲ್ಲಿ ___ಸಮಾಧಿಗಳ ___ ಮಧ್ಯೆದಲ್ಲಿ ಆ ಮನುಷ್ಯನು ಜೀವಿಸಿದ್ದನು.
- 37:06 “ಲಾಜರನನ್ನು ಎಲ್ಲಿ ಇಟ್ಟಿದ್ದೀರಿ?” ಎಂದು ಯೇಸು ಅವರನ್ನು ಕೇಳಿದನು. “___ ಸಮಾಧಿಯಲ್ಲಿ ___ , ಬಂದು, ನೋಡಿ” ಎಂದು ಅವರು ಆತನಿಗೆ ಹೇಳಿದರು.
- 37:07 ___ ಸಮಾಧಿಯು ___ ಗುಹೆಯಾಗಿದ್ದಿತ್ತು, ಈ ಗುಹೆಯ ದ್ವಾರದ ಮುಂದೆ ಒಂದು ದೊಡ್ಡ ಕಲ್ಲನ್ನು ಉರುಳಿಸಿರುತ್ತಾರೆ.
- 40:09 ಆದನಂತರ ಯೋಸೇಫ ಮತ್ತು ನಿಕೊದೇಮ ಎನ್ನುವ ಇಬ್ಬರು ಯೆಹೂದ್ಯರ ನಾಯಕರು ಯೇಸುವು ಮೆಸ್ಸೀಯನೆಂದು ನಂಬಿದ್ದರು, ಇವರು ಯೇಸುವಿನ ದೇಹಕ್ಕಾಗಿ ಪಿಲಾತನ ಬಳಿಗೆ ಬಂದು ಕೇಳಿಕಂಡರು ಅವರು ಆತನ ದೇಹವನ್ನು ಬಟ್ಟೆಯಲ್ಲಿ ಸುತ್ತಿ, ಬಂಡೆಯ ಗುಹೆಯಂತಿರುವ ___ ಸಮಾಧಿಯೊಳಗೆ ___ ಇಟ್ಟರು. ಆದನಂತರ ಆ ___ ಸಮಾಧಿಯನ್ನು ___ ತೆರೆಯುವುದಕ್ಕಾಗದಿರುವಂತೆ ಅದರ ಮುಂಭಾಗದಲ್ಲಿ ಒಂದು ದೊಡ್ಡ ಕಲ್ಲನ್ನು ಉರುಳಿಸಿದರು.
- 41:04 ಅವನು (ದೂತನು)___ ಸಮಾಧಿಯ ___ ಪ್ರವೇಶ ದ್ವಾರವನ್ನು ಮುಚ್ಚಿರುವ ದೊಡ್ಡ ಕಲ್ಲು ಬಂಡೆಯನ್ನು ಉರುಳಿಸಿ, ಅದರ ಮೇಲೆ ಕುಳಿತುಕೊಂಡನು. ___ ಸಮಾಧಿಗೆ ___ ಕಾವಲು ಇರುವರು ತುಂಬಾ ಭಯಭ್ರಾಂತಿಗೆ ಗುರಿಯಾದರು ಮತ್ತು ಅವರು ಸತ್ತ ಮನುಷ್ಯರಂತೆ ನೆಲದ ಮೇಲೆ ಬಿದ್ದರು.
- 41:05 ಸ್ತ್ರೀಯರು __ ಸಮಾಧಿಯ __ ಬಳಿಗೆ ಬಂದಾಗ, “ಹೆದರಬೇಡಿರಿ, ಯೇಸು ಇಲ್ಲಿಲ್ಲ. ಆತನು ಹೇಳಿದ ಪ್ರಕಾರವೇ ಆತನು ಮರಣದಿಂದ ಎದ್ದಿದ್ದಾನೆ ___ ಸಮಾಧಿಯೊಳಗೆ ___ ಹೋಗಿ, ನೋಡಿರಿ” ಎಂದು ದೂತ ಅವರಿಗೆ ಹೇಳಿದನು. ಸ್ತ್ರೀಯರು ___ ಸಮಾಧಿಯೊಳಗೆ ___ ಹೋಗಿ, ಯೇಸುವಿನ ದೇಹವನ್ನು ಇಟ್ಟಿರುವ ಸ್ಥಳವನ್ನು ನೋಡಿದರು. ಆತನ ದೇಹವು ಅಲ್ಲಿರಲಿಲ್ಲ!
ಪದ ಡೇಟಾ:
- Strong's: H1164, H1430, H6900, H6913, H7585, H7845, G86, G2750, G3418, G3419, G5028