kn_tw/bible/other/tomb.md

37 lines
6.1 KiB
Markdown

# ಸಮಾಧಿ, ಸಮಾಧಿ ತೋಡುವವನು, ಸಮಾಧಿಗಳು, ಗೋರಿ, ಗೋರಿಗಳು, ಹೂಣಿಡುವ ಸ್ಥಳ
## ಪದದ ಅರ್ಥವಿವರಣೆ:
“ಗೋರಿ” ಮತ್ತು “ಸಮಾಧಿ” ಎನ್ನುವ ಪದಗಳು ಸತ್ತಂತ ವ್ಯಕ್ತಿಯ ದೇಹವನ್ನು ಜನರು ಇಡುವ ಸ್ಥಳವನ್ನು ಸೂಚಿಸುತ್ತದೆ. “ಹೂಣಿಡುವ ಸ್ಥಳ” ಎಂದರೆ ಈ ವಿಷಯವನ್ನೇ ಸೂಚಿಸುವ ಸರ್ವ ಸಾಧಾರಣ ಪದವಾಗಿರುತ್ತದೆ.
* ಯೆಹೂದ್ಯರು ಕೆಲವೊಂದುಬಾರಿ ಗುಹೆಗಳನ್ನು ಸಮಾಧಿಗಳನ್ನಾಗಿ ಉಪಯೋಗಿಸುತ್ತಿದ್ದರು, ಮತ್ತು ಕೆಲವೊಂದುಬಾರಿ ದೊಡ್ಡ ಕಲ್ಲು ಬಂಡೆಗಳನ್ನು ಗುಹೆಗಳನ್ನಾಗಿ ಅಗೆದು ಅವುಗಳನ್ನು ಸಮಾಧಿಗಳನ್ನಾಗಿ ಉಪಯೋಗಿಸುತ್ತಿದ್ದರು.
* ಹೊಸ ಒಡಂಬಡಿಕೆಯ ಕಾಲದಲ್ಲಿ ಸಮಾಧಿಯಾಗಿರುವ ಗುಹೆಯನ್ನು ಮುಚ್ಚುವುದಕ್ಕೆ ಒಂದು ದೊಡ್ಡ ಕಲ್ಲನ್ನು ಉರುಳಿಸುವುದು ಸಾಧಾರಣವಾಗಿ ನಡೆಯುವ ವಿಷಯವಾಗಿತ್ತು.
* ಅನುವಾದ ಮಾಡುವ ಭಾಷೆಯಲ್ಲಿ ಸಮಾಧಿಗೆ ಉಪಯೋಗಿಸುವ ಪದವು ನೆಲವನ್ನು ಅಗೆದು ಶವವನ್ನು ಇಡುವ ಸ್ಥಳವನ್ನು ಮಾತ್ರ ಸೂಚಿಸುವುದಾಗಿದ್ದರೆ, ಇದನ್ನು “ಗುಹೆ” ಅಥವಾ “ಬೆಟ್ಟದ ಪಕ್ಕದಲ್ಲಿ ರಂಧ್ರವನ್ನು ಅಗೆಯುವುದು” ಎಂದೂ ಅನುವಾದ ಮಾಡಬಹುದು.
* “ಸಮಾಧಿ” ಎನ್ನುವ ಮಾತು ಅನೇಕಬಾರಿ ಸತ್ತಂತ ಜನರ ಆತ್ಮಗಳು ಇರುವ ಸ್ಥಳ ಅಥವಾ ಸತ್ತಂತ ಸ್ಥಿತಿಯನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಮತ್ತು ಸಾಧಾರಣವಾಗಿ ಉಪಯೋಗಿಸಲ್ಪಟ್ಟಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ಹೂಣಿಡುವುದು](../other/bury.md), [ಮರಣ](../other/death.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.02:29-31](rc://*/tn/help/act/02/29)
* [ಆದಿ.23:5-6](rc://*/tn/help/gen/23/05)
* [ಆದಿ.50:4-6](rc://*/tn/help/gen/50/04)
* [ಯೋಹಾನ.19:40-42](rc://*/tn/help/jhn/19/40)
* [ಲೂಕ.23:52-53](rc://*/tn/help/luk/23/52)
* [ಮಾರ್ಕ.05:1-2](rc://*/tn/help/mrk/05/01)
* [ಮತ್ತಾಯ.27:51-53](rc://*/tn/help/mat/27/51)
* [ರೋಮಾ.03:13-14](rc://*/tn/help/rom/03/13)
## ಸತ್ಯವೇದದಿಂದ ಉದಾಹರಣೆಗಳು:
* __[32:04](rc://*/tn/help/obs/32/04)__ ಆ ಪ್ರಾಂತ್ಯದಲ್ಲಿ ___ಸಮಾಧಿಗಳ ___ ಮಧ್ಯೆದಲ್ಲಿ ಆ ಮನುಷ್ಯನು ಜೀವಿಸಿದ್ದನು.
* __[37:06](rc://*/tn/help/obs/37/06)__ “ಲಾಜರನನ್ನು ಎಲ್ಲಿ ಇಟ್ಟಿದ್ದೀರಿ?” ಎಂದು ಯೇಸು ಅವರನ್ನು ಕೇಳಿದನು. “___ ಸಮಾಧಿಯಲ್ಲಿ ___ , ಬಂದು, ನೋಡಿ” ಎಂದು ಅವರು ಆತನಿಗೆ ಹೇಳಿದರು.
* __[37:07](rc://*/tn/help/obs/37/07)__ ___ ಸಮಾಧಿಯು ___ ಗುಹೆಯಾಗಿದ್ದಿತ್ತು, ಈ ಗುಹೆಯ ದ್ವಾರದ ಮುಂದೆ ಒಂದು ದೊಡ್ಡ ಕಲ್ಲನ್ನು ಉರುಳಿಸಿರುತ್ತಾರೆ.
* __[40:09](rc://*/tn/help/obs/40/09)__ ಆದನಂತರ ಯೋಸೇಫ ಮತ್ತು ನಿಕೊದೇಮ ಎನ್ನುವ ಇಬ್ಬರು ಯೆಹೂದ್ಯರ ನಾಯಕರು ಯೇಸುವು ಮೆಸ್ಸೀಯನೆಂದು ನಂಬಿದ್ದರು, ಇವರು ಯೇಸುವಿನ ದೇಹಕ್ಕಾಗಿ ಪಿಲಾತನ ಬಳಿಗೆ ಬಂದು ಕೇಳಿಕಂಡರು ಅವರು ಆತನ ದೇಹವನ್ನು ಬಟ್ಟೆಯಲ್ಲಿ ಸುತ್ತಿ, ಬಂಡೆಯ ಗುಹೆಯಂತಿರುವ ___ ಸಮಾಧಿಯೊಳಗೆ ___ ಇಟ್ಟರು. ಆದನಂತರ ಆ ___ ಸಮಾಧಿಯನ್ನು ___ ತೆರೆಯುವುದಕ್ಕಾಗದಿರುವಂತೆ ಅದರ ಮುಂಭಾಗದಲ್ಲಿ ಒಂದು ದೊಡ್ಡ ಕಲ್ಲನ್ನು ಉರುಳಿಸಿದರು.
* __[41:04](rc://*/tn/help/obs/41/04)__ ಅವನು (ದೂತನು)___ ಸಮಾಧಿಯ ___ ಪ್ರವೇಶ ದ್ವಾರವನ್ನು ಮುಚ್ಚಿರುವ ದೊಡ್ಡ ಕಲ್ಲು ಬಂಡೆಯನ್ನು ಉರುಳಿಸಿ, ಅದರ ಮೇಲೆ ಕುಳಿತುಕೊಂಡನು. ___ ಸಮಾಧಿಗೆ ___ ಕಾವಲು ಇರುವರು ತುಂಬಾ ಭಯಭ್ರಾಂತಿಗೆ ಗುರಿಯಾದರು ಮತ್ತು ಅವರು ಸತ್ತ ಮನುಷ್ಯರಂತೆ ನೆಲದ ಮೇಲೆ ಬಿದ್ದರು.
* __[41:05](rc://*/tn/help/obs/41/05)__ ಸ್ತ್ರೀಯರು __ ಸಮಾಧಿಯ __ ಬಳಿಗೆ ಬಂದಾಗ, “ಹೆದರಬೇಡಿರಿ, ಯೇಸು ಇಲ್ಲಿಲ್ಲ. ಆತನು ಹೇಳಿದ ಪ್ರಕಾರವೇ ಆತನು ಮರಣದಿಂದ ಎದ್ದಿದ್ದಾನೆ ___ ಸಮಾಧಿಯೊಳಗೆ ___ ಹೋಗಿ, ನೋಡಿರಿ” ಎಂದು ದೂತ ಅವರಿಗೆ ಹೇಳಿದನು. ಸ್ತ್ರೀಯರು ___ ಸಮಾಧಿಯೊಳಗೆ ___ ಹೋಗಿ, ಯೇಸುವಿನ ದೇಹವನ್ನು ಇಟ್ಟಿರುವ ಸ್ಥಳವನ್ನು ನೋಡಿದರು. ಆತನ ದೇಹವು ಅಲ್ಲಿರಲಿಲ್ಲ!
## ಪದ ಡೇಟಾ:
* Strong's: H1164, H1430, H6900, H6913, H7585, H7845, G86, G2750, G3418, G3419, G5028