kn_tw/bible/other/death.md

9.6 KiB

ಮರಣಿಸು, ಮರಣಿಸುತ್ತಾನೆ, ಮರಣಕರವಾದ, ಮರಣ,

ಪದದ ಅರ್ಥವಿವರಣೆ:

ಈ ಪದವು ಭೌತಿಕವಾದ ಮರಣವನ್ನು ಮತ್ತು ಆತ್ಮೀಯಕವಾದ ಮರಣವನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.

1. ಭೌತಿಕವಾದ ಮರಣ

  • “ಮರಣಿಸು” ಎನ್ನುವದಕ್ಕೆ ಬದುಕುವುದನ್ನು ನಿಲ್ಲಿಸು ಎಂದರ್ಥ. ಮರಣವು ಭೌತಿಕ ಜೀವನಕ್ಕೆ ಅಂತ್ಯವಾಗಿರುತ್ತದೆ.
  • “ಮರಣದಂಡನೆ” ಎಂಬ ಅಭಿವ್ಯಕ್ತಿ ಯಾರನ್ನಾದರೂ ಕೊಲ್ಲುವುದು ಅಥವಾ ಕೊಲ್ಲುವುದನ್ನು ಸೂಚಿಸುತ್ತದೆ, ವಿಶೇಷವಾಗಿ ಒಬ್ಬ ರಾಜ ಅಥವಾ ಇತರ ಆಡಳಿತಗಾರ ಯಾರನ್ನಾದರೂ ಕೊಲ್ಲಲು ಆದೇಶ ನೀಡಿದಾಗ.

2. ಆತ್ಮೀಕವಾದ ಮರಣ

  • ಆತ್ಮೀಕವಾದ ಮರಣ ಎನ್ನುವುದು ದೇವರಿಂದ ಒಬ್ಬ ವ್ಯಕ್ತಿ ದೂರಾಗುವುದನ್ನು ಸೂಚಿಸುತ್ತದೆ.
  • ಆದಾಮನು ದೇವರಿಗೆ ಅವಿಧೇಯತೆಯನ್ನು ತೋರಿಸಿದಾಗ ಆತನು ಆತ್ಮೀಯಕವಾಗಿ ಸತ್ತುಹೋದನು. ದೇವರೊಂದಿಗೆ ಆತನಿಗಿರುವ ಸಂಬಂಧವು ಕಳೆದುಕೊಂಡಿದ್ದಾನೆ. ಅವನು ನಾಚಿಕೆಗೊಂಡು, ದೇವರಿಗೆ ಕಾಣದಂತೆ ಮರೆಯಾಗುವುದಕ್ಕೆ ಪ್ರಯತ್ನಿಸಿದನು.
  • ಆದಾಮನಿಂದ ಬಂದಿರುವ ಪ್ರತಿಯೊಬ್ಬ ವ್ಯಕ್ತಿ ಪಾಪಿಯಾಗಿರುತ್ತಾನೆ, ಮತ್ತು ಆತ್ಮೀಯಕವಾಗಿ ಸತ್ತವನಾಗಿರುತ್ತಾನೆ. ನಾವೆಲ್ಲರು ಯೇಸುವಿನಲ್ಲಿ ನಂಬಿಕೆ ಇಟ್ಟಾಗ ದೇವರು ನಮ್ಮೆಲ್ಲರನ್ನೂ ಮತ್ತೊಮ್ಮೆ ಆತ್ಮೀಯಕವಾಗಿ ಜೀವಿಸುವವರನ್ನಾಗಿ ಮಾಡಿದ್ದಾನೆ.

ಅನುವಾದ ಸಲಹೆಗಳು:

  • ಈ ಪದವನ್ನು ಅನುವಾದ ಮಾಡುವುದಕ್ಕೆ ಮರಣವನ್ನು ಸೂಚಿಸುವ ಯಾವುದೇ ಸ್ವಾಭಾವಿಕ ಪದವು ಅಥವಾ ಮಾತು ಅನುವಾದ ಮಾಡುವ ಭಾಷೆಯಲ್ಲಿದ್ದರೆ ಅದನ್ನೇ ಪ್ರತಿದಿನ ಉಪಯೋಗಿಸುವುದು ಒಳ್ಳೇಯದು.
  • ಇತರ ಬೇರೆ ಭಾಷೆಗಳಲ್ಲಿ “ಮರಣಿಸು” ಎನ್ನುವ ಮಾತನ್ನು “ಜೀವಿಸಬೇಡ” ಎಂದು ವ್ಯಕ್ತೀಕರಿಸುತ್ತಾರೆ. “ಮೃತ” ಎನ್ನುವ ಪದವನ್ನು “ಜೀವಂತವಾಗಿಲ್ಲ” ಅಥವಾ “ಪ್ರಾಣವಿಲ್ಲ” ಅಥವಾ “ಜೀವಿಸುತ್ತಿಲ್ಲ” ಎಂದೂ ಅನುವಾದ ಮಾಡಬಹುದು.
  • ಮರಣವನ್ನು ವಿವರಿಸುವುದಕ್ಕೆ ಅನೇಕ ಭಾಷೆಗಳಲ್ಲಿ ಅಲಂಕಾರಿಕ ಮಾತುಗಳನ್ನು ಉಪಯೋಗಿಸುತ್ತಾರೆ, “ಸತ್ತು ಹೋದನು” ಎಂದು ಹೇಳುತ್ತಾರೆ. ಆದರೆ, ಸತ್ಯವೇದದಲ್ಲಿ ಮರಣ ಎನ್ನುವ ಪದಕ್ಕೆ ದೈನಂದಿನ ಭಾಷೆಯಲ್ಲಿ ಉಪಯೋಗಿಸುವ ಪದವನ್ನೇ ನೇರವಾಗಿ ಉಪಯೋಗಿಸುವುದು ಒಳ್ಳೇಯದು.
  • ಸತ್ಯವೇದದಲ್ಲಿ ಭೌತಿಕ ಜೀವನ ಮತ್ತು ಮರಣಗಳು ಅನೇಕಬಾರಿ ಆತ್ಮೀಕ ಜೀವನ ಮತ್ತು ಮರಣಗಳಿಗೆ ಹೋಲಿಸಲ್ಪಟ್ಟಿದೆ. ಭೌತಿಕ ಮರಣಕ್ಕೂ ಮತ್ತು ಆತ್ಮೀಕವಾದ ಮರಣಕ್ಕೂ ಒಂದೇ ಪದವನ್ನು ಅಥವಾ ಒಂದೇ ಮಾತನ್ನು ಉಪಯೋಗಿಸುವುದು ಉತ್ತಮ.
  • ಕೆಲವೊಂದು ಭಾಷೆಗಳಲ್ಲಿ “ಆತ್ಮೀಕವಾದ ಮರಣ” ಎಂದು ಸ್ಪಷ್ಟವಾಗಿ ಹೇಳುತ್ತಾರೆ, ಇದು ಆ ಸಂದರ್ಭ ಬಂದಾಗ ಮಾತ್ರವೇ ಆ ಪದವನ್ನು ಉಪಯೋಗಿಸುತ್ತಾರೆ. ಆತ್ಮೀಯಕವಾದ ಮರಣಕ್ಕೆ ವಿರುದ್ಧವಾಗಿ ಹೇಳುವ ಸಂದರ್ಭಗಳಲ್ಲಿ “ಭೌತಿಕ ಮರಣ” ಎಂದು ಹೇಳುವುದು ಉತ್ತಮವೆಂದು ಅನುವಾದಕರಲ್ಲಿ ಕೆಲವರು ಆಲೋಚನೆ ಮಾಡುತ್ತಾರೆ.
  • “ಮೃತ” ಎನ್ನುವ ಮಾತು ಸತ್ತುಹೋದಂತ ಮನುಷ್ಯರನ್ನು ಸೂಚಿಸುವ ನಾಮಾಂಕಿತ ವಿಶೇಷಣವಾಗಿರುತ್ತದೆ. ಕೆಲವೊಂದು ಭಾಷೆಗಳಲ್ಲಿ ಈ ಪದವನ್ನು “ಮೃತಪಟ್ಟವರು” ಎಂದೂ ಅಥವಾ “ಸತ್ತುಹೋದ ಜನರು” ಎಂದೂ ಅನುವಾದ ಮಾಡುತ್ತಾರೆ. (ನೋಡಿರಿ: ನಾಮಾಂಕಿತ ವಿಶೇಷಣ)
  • “ಸಾಯಿಸು” ಎನ್ನುವ ಪದವನ್ನು “ಕೊಲ್ಲು” ಅಥವಾ “ನರಹತ್ಯೆಮಾಡು” ಅಥವಾ “ಗಲ್ಲಿಗೇರಿಸು” ಎಂದೂ ಅನುವಾದ ಮಾಡುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ನಂಬು, ನಂಬಿಕೆ, ಜೀವನ, ಆತ್ಮ)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದ ಕತೆಗಳಿಂದ ಉದಾಹರಣೆಗಳು:

  • 01:11 ಒಳ್ಳೇದರ ಕೆಟ್ಟದರ ಅರಿವನ್ನು ಹುಟ್ಟಿಸುವ ಈ ಮರದ ಹಣ್ಣನ್ನು ಮಾತ್ರ ತಿನ್ನಬಾರದು. ತಿಂದ ದಿನವೇ ಸತ್ತು ಹೋಗುವೆ ಎಂದು ದೇವರು ಆದಾಮನಿಗೆ ಆಜ್ಞಾಪಿಸಿದನು. ಈ ಮರದ ಹಣ್ಣನ್ನು ಅವನು ತಿಂದರೆ, ಅವನು __ ಸತ್ತು __ ಹೋಗುತ್ತಾನೆ.
  • 02:11 “ನೀನು __ ಸಾಯುವಿ __ ಮತ್ತು ನಿನ್ನ ದೇಹವು ಮಣ್ಣಿಗೆ ಹಿಂದುರಿಗೆ ಹೋಗುವುದು.”
  • 07:10 ಇಸಾಕನು __ ಮರಣ ಹೊಂದಿದನು __, ಯಾಕೋಬ ಮತ್ತು ಏಸಾವರಿಬ್ಬರು ಅವನನ್ನು ಸಮಾಧಿ ಮಾಡಿದರು.
  • 37:05 “ನಾನೇ ಪುನರುತ್ಥಾನವು ಜೀವವೂ ಆಗಿದ್ದೇನೆ ನನ್ನಲ್ಲಿ ನಂಬಿಕೆ ಇಡುವವನು __ ಸತ್ತರೂ __ ಬದುಕುವನು. ಜೀವಿಸುವ ಪ್ರತಿಯೊಬ್ಬನು ನನ್ನಲ್ಲಿ ನಂಬಿಕೆಯಿಟ್ಟರೆ, ಅವನು ಎಂದಿಗೂ __ ಸಾಯುವುದಿಲ್ಲ __” ಎಂದು ಯೇಸು ಉತ್ತರಕೊಟ್ಟನು.
  • 40:08 ಆತನ __ ಮರಣದ __ ಮೂಲಕ ಜನರೆಲ್ಲರೂ ದೇವರ ಬಳಿಗೆ ಬರುವುದಕ್ಕೆ ಆತನು ಮಾರ್ಗವನ್ನು ತೆರೆದನು.
  • 43:07 “ಯೇಸು __ ಸತ್ತರೂ __, ದೇವರು ಆತನನ್ನು ಮರಣ ವೇದನೆಗಳಿಂದ ಬಿಡಿಸಿ ಎಬ್ಬಿಸಿದನು.
  • 48:02 ಅವರು ಪಾಪಮಾಡಿರುವುದರಿಂದ ಭೂಮಿಯ ಮೇಲಿರುವ ಪ್ರತಿಯೊಬ್ಬರೂ ರೋಗಗ್ರಸ್ತರಾಗಿ, ಪ್ರತಿಯೊಬ್ಬರೂ __ ಸಾಯುತ್ತಿದ್ದಾರೆ __.
  • 50:17 ಆತನು (ಯೇಸು) ಪ್ರತಿಯೊಬ್ಬರ ಕಣ್ಣೀರನ್ನು ಹೊರೆಸುವನು ಮತ್ತು ಅಲ್ಲಿ ಶ್ರಮೆ, ಬಾಧೆ, ಅಳು, ದುಷ್ಟ, ನೋವು, ಅಥವಾ __ ಮರಣ __ ಎನ್ನುವವುಗಳು ಯಾವುವು ಇರುವುದಿಲ್ಲ.

ಪದ ಡೇಟಾ:

  • Strong's: H6, H1478, H1826, H1934, H2491, H4191, H4192, H4193, H4194, H4463, H5038, H5315, H6297, H6757, H7496, H7523, H8045, H8546, H8552, G336, G337, G520, G599, G615, G622, G1634, G1935, G2079, G2253, G2286, G2287, G2288, G2289, G2348, G2837, G2966, G3498, G3499, G3500, G4430, G4880, G4881, G5053, G5054