3.5 KiB
3.5 KiB
ಕೋಲು
ಪದದ ಅರ್ಥವಿವರಣೆ:
"ಕೋಲು” ಎನ್ನುವ ಪದವು ಅನೇಕ ವಿಧಾನಗಳಲ್ಲಿ ಉಪಯೋಗಿಸಲ್ಪಡುವ ಚಿಕ್ಕಾದಾದ ಬಲವಾದ ಕೋಲಿನಂತಿರುವ ಉಪಕರಣವನ್ನು ಸೂಚಿಸುತ್ತದೆ. ಇದು ಬಹುಶಃ ಕನಿಷ್ಟಪಕ್ಷ ಉದ್ದದಲ್ಲಿ ಒಂದು ಮೀಟರು ಇರುತ್ತದೆ.
- ಕಟ್ಟಿಗೆಯ ಕೋಲು ಎನ್ನುವುದು ಇತರ ಪ್ರಾಣಿಗಳಿಂದ ಕುರಿಗಳನ್ನು ರಕ್ಷಿಸುವುದಕ್ಕೆ ಕುರುಬನಿಂದ ಉಪಯೋಗಿಸಲ್ಪಡುವದಾಗಿರುತ್ತದೆ. ಇದನ್ನು ತಪ್ಪಿ ಹೋಗುತ್ತಿರುವ ಕುರಿಯ ಮೇಲೆ ಎಸೆದು, ಅದನ್ನು ಹಿಂಡಿಗೆ ಹಿಂತಿರುಗಿ ತೆಗೆದುಕೊಂಡು ಬರುವುದಕ್ಕೆ ಉಪಯೋಗಿಸುತ್ತಿದ್ದರು.
- ಕೀರ್ತನೆ 23ರಲ್ಲಿ ಅರಸನಾದ ದಾವೀದನು ತನ್ನ ಜನರಿಗಾಗಿ ದೇವರ ಮಾರ್ಗದರ್ಶನವನ್ನು ಮತ್ತು ಕ್ರಮಶಿಕ್ಷಣಯನ್ನು ಸೂಚಿಸುವುದಕ್ಕೆ “ದೊಣ್ಣೆಯೂ” ಮತ್ತು “ಕೋಲು” ಎನ್ನುವ ಪದಗಳನ್ನು ಅಲಂಕಾರಿಕವಾಗಿ ಉಪಯೋಗಿಸಿರುತ್ತಾನೆ.
- ಕುರುಬನ ಕೋಲು ಎನ್ನುವುದನ್ನು ಇದರ ಕೆಳಗೆ ಕುರಿಗಳು ಹಾದು ಹೋಗುತ್ತಿರುವಾಗ ಎಣಿಸುವುದಕ್ಕೆ ಉಪಯೋಗಿಸುತ್ತಿದ್ದರು.
- “ಕಬ್ಬಿಣದ ಕೋಲು” ಎನ್ನುವ ಇನ್ನೊಂದು ರೂಪಕಾಲಂಕಾರದ ಮಾತು ದೇವರನ್ನು ತಿರಸ್ಕರಿಸಿ, ದುಷ್ಟ ಕಾರ್ಯಗಳನ್ನು ಮಾಡುತ್ತಿರುವ ಜನರಿಗಾಗಿ ಕೊಡಲ್ಪಡುವ ದೇವರ ಶಿಕ್ಷೆಯನ್ನು ಸೂಚಿಸುತ್ತದೆ.
- ಪುರಾತನ ಕಾಲಗಳಲ್ಲಿ, ಅಳತೆ ಮಾಡುವ ಕೋಲುಗಳನ್ನು ಲೋಹ, ಕಟ್ಟಿಗೆ, ಅಥವಾ ಕಲ್ಲಿನಿಂದ ತಯಾರು ಮಾಡುತ್ತಿದ್ದರು, ಇವುಗಳನ್ನು ವಸ್ತು ಅಥವಾ ಭವನಗಳ ಉದ್ದವನ್ನು ಅಳತೆ ಮಾಡುವುದಕ್ಕೆ ಉಪಯೋಗಿಸುತ್ತಿದ್ದರು.
- ಸತ್ಯವೇದದಲ್ಲಿ, ಕಟ್ಟಿಗೆಯ ಕೋಲು ಮಕ್ಕಳನ್ನು ಕ್ರಮಶಿಕ್ಷಣದಲ್ಲಿಡುವುದಕ್ಕೆ ಒಂದು ಉಪಕರಣವನ್ನಾಗಿಯೂ ಸೂಚಿಸಲ್ಪಟ್ಟಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ: ದೊಣ್ಣೆ, ಕುರಿಗಳು, ಕುರುಬ)
ಸತ್ಯವೇದದ ವಾಕ್ಯಗಳು:
ಪದ ಡೇಟಾ:
- Strong's: H2415, H4294, H4731, H7626, G25630, G44630, G44640