kn_tw/bible/other/rod.md

27 lines
3.5 KiB
Markdown

# ಕೋಲು
## ಪದದ ಅರ್ಥವಿವರಣೆ:
"ಕೋಲು” ಎನ್ನುವ ಪದವು ಅನೇಕ ವಿಧಾನಗಳಲ್ಲಿ ಉಪಯೋಗಿಸಲ್ಪಡುವ ಚಿಕ್ಕಾದಾದ ಬಲವಾದ ಕೋಲಿನಂತಿರುವ ಉಪಕರಣವನ್ನು ಸೂಚಿಸುತ್ತದೆ. ಇದು ಬಹುಶಃ ಕನಿಷ್ಟಪಕ್ಷ ಉದ್ದದಲ್ಲಿ ಒಂದು ಮೀಟರು ಇರುತ್ತದೆ.
* ಕಟ್ಟಿಗೆಯ ಕೋಲು ಎನ್ನುವುದು ಇತರ ಪ್ರಾಣಿಗಳಿಂದ ಕುರಿಗಳನ್ನು ರಕ್ಷಿಸುವುದಕ್ಕೆ ಕುರುಬನಿಂದ ಉಪಯೋಗಿಸಲ್ಪಡುವದಾಗಿರುತ್ತದೆ. ಇದನ್ನು ತಪ್ಪಿ ಹೋಗುತ್ತಿರುವ ಕುರಿಯ ಮೇಲೆ ಎಸೆದು, ಅದನ್ನು ಹಿಂಡಿಗೆ ಹಿಂತಿರುಗಿ ತೆಗೆದುಕೊಂಡು ಬರುವುದಕ್ಕೆ ಉಪಯೋಗಿಸುತ್ತಿದ್ದರು.
* ಕೀರ್ತನೆ 23ರಲ್ಲಿ ಅರಸನಾದ ದಾವೀದನು ತನ್ನ ಜನರಿಗಾಗಿ ದೇವರ ಮಾರ್ಗದರ್ಶನವನ್ನು ಮತ್ತು ಕ್ರಮಶಿಕ್ಷಣಯನ್ನು ಸೂಚಿಸುವುದಕ್ಕೆ “ದೊಣ್ಣೆಯೂ” ಮತ್ತು “ಕೋಲು” ಎನ್ನುವ ಪದಗಳನ್ನು ಅಲಂಕಾರಿಕವಾಗಿ ಉಪಯೋಗಿಸಿರುತ್ತಾನೆ.
* ಕುರುಬನ ಕೋಲು ಎನ್ನುವುದನ್ನು ಇದರ ಕೆಳಗೆ ಕುರಿಗಳು ಹಾದು ಹೋಗುತ್ತಿರುವಾಗ ಎಣಿಸುವುದಕ್ಕೆ ಉಪಯೋಗಿಸುತ್ತಿದ್ದರು.
* “ಕಬ್ಬಿಣದ ಕೋಲು” ಎನ್ನುವ ಇನ್ನೊಂದು ರೂಪಕಾಲಂಕಾರದ ಮಾತು ದೇವರನ್ನು ತಿರಸ್ಕರಿಸಿ, ದುಷ್ಟ ಕಾರ್ಯಗಳನ್ನು ಮಾಡುತ್ತಿರುವ ಜನರಿಗಾಗಿ ಕೊಡಲ್ಪಡುವ ದೇವರ ಶಿಕ್ಷೆಯನ್ನು ಸೂಚಿಸುತ್ತದೆ.
* ಪುರಾತನ ಕಾಲಗಳಲ್ಲಿ, ಅಳತೆ ಮಾಡುವ ಕೋಲುಗಳನ್ನು ಲೋಹ, ಕಟ್ಟಿಗೆ, ಅಥವಾ ಕಲ್ಲಿನಿಂದ ತಯಾರು ಮಾಡುತ್ತಿದ್ದರು, ಇವುಗಳನ್ನು ವಸ್ತು ಅಥವಾ ಭವನಗಳ ಉದ್ದವನ್ನು ಅಳತೆ ಮಾಡುವುದಕ್ಕೆ ಉಪಯೋಗಿಸುತ್ತಿದ್ದರು.
* ಸತ್ಯವೇದದಲ್ಲಿ, ಕಟ್ಟಿಗೆಯ ಕೋಲು ಮಕ್ಕಳನ್ನು ಕ್ರಮಶಿಕ್ಷಣದಲ್ಲಿಡುವುದಕ್ಕೆ ಒಂದು ಉಪಕರಣವನ್ನಾಗಿಯೂ ಸೂಚಿಸಲ್ಪಟ್ಟಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ: [ದೊಣ್ಣೆ](../other/staff.md), [ಕುರಿಗಳು](../other/sheep.md), [ಕುರುಬ](../other/shepherd.md))
## ಸತ್ಯವೇದದ ವಾಕ್ಯಗಳು:
* [1 ಕೊರಿಂಥ 4:21](rc://*/tn/help/1co/04/21)
* [1 ಸಮು 14:43-44](rc://*/tn/help/1sa/14/43)
* [ಅಪೊ.ಕೃತ್ಯ 16:23](rc://*/tn/help/act/16/23)
* [ವಿಮೋ 27:9-10](rc://*/tn/help/exo/27/09)
* [ಪ್ರಕ 11:1](rc://*/tn/help/rev/11/01)
## ಪದ ಡೇಟಾ:
* Strong's: H2415, H4294, H4731, H7626, G25630, G44630, G44640