kn_tw/bible/other/shepherd.md

9.6 KiB

ಕುರುಬ, ಕುರುಬರು, ಕಾಯುಕೊಂಡಿದ್ದೇನೆ, ಕಾಯುತ್ತಿರುವುದು

ಪದದ ಅರ್ಥವಿವರಣೆ:

ಕುರುಬ ಎಂದರೆ ಕುರಿಗಳ ಕಾಳಜಿವಹಿಸುವಂತ ವ್ಯಕ್ತಿ ಎಂದರ್ಥ. ಹಳೇ ಒಡಂಬಡಿಕೆಯಲ್ಲಿ, ಈ ಪದವು ಮೇಕೆ ಮತ್ತು ದನದಂತಹ ಇತರ ರೀತಿಯ ಸಾಕುಪ್ರಾಣಿಗಳನ್ನು ನೋಡಿಕೊಳ್ಳುವ "ಪಶುಪಾಲಕ" ಎಂದು ಉಲ್ಲೇಖಿಸಬಹುದು

  • “ಕುರುಬ” ಎನ್ನುವ ಪದಕ್ಕೆ ಕ್ರಿಯಾಪದವು ಕುರಿಗಳನ್ನು ಸಂರಕ್ಷಿಸುವುದು ಮತ್ತು ಅವುಗಳಿಗೆ ನೀರು ಆಹಾರಗಳನ್ನು ಒದಗಿಸಿಕೊಡುವುದು ಎಂದರ್ಥವಾಗಿರುತ್ತದೆ. ಕುರುಬರು ಕುರಿಗಳು ತಪ್ಪಿಹೋಗದಂತೆ ನೋಡಿಕೊಳ್ಳಬೇಕು ಮತ್ತು ಅವುಗಳನ್ನು ಅಡವಿ ಪ್ರಾಣಿಗಳಿಂದ ಸಂರಕ್ಷಿಸಬೇಕು.
  • ಜನರ ಆತ್ಮೀಕವಾದ ಅಗತ್ಯತೆಗಳನ್ನು ಪೂರೈಸುವುದಕ್ಕೆ ಸೂಚಿಸಲು ಈ ಪದವನ್ನು ಸತ್ಯವೇದದಲ್ಲಿ ಅನೇಕಬಾರಿ ರೂಪಕಾಲಂಕಾರವಾಗಿ ಉಪಯೋಗಿಸಿರುತ್ತಾರೆ. ಸತ್ಯವೇದದಲ್ಲಿ ದೇವರು ಜನರಿಗೆ ಹೇಳಿದ ವಿಷಯಗಳೆಲ್ಲವುಗಳನ್ನು ಬೋಧಿಸುವುದು ಮತ್ತು ಅವರು ನಡೆಯಬೇಕಾದ ಮಾರ್ಗದಲ್ಲಿ ಅವರನ್ನು ನಡೆಸುವುದು ಇದರಲ್ಲಿ ಒಳಗೊಂಡಿರುತ್ತದೆ.
  • ಹಳೇ ಒಡಂಬಡಿಕೆಯಲ್ಲಿ ದೇವರನ್ನು ತನ್ನ ಜನರ “ಕುರುಬ” ಎಂಬುದಾಗಿ ಕರೆಯಲ್ಪಟ್ಟಿದ್ದಾನೆ, ಯಾಕಂದರೆ ಆತನು ಅವರ ಎಲ್ಲಾ ಅಗತ್ಯತೆಗಳನ್ನು ಪೂರೈಸಿ, ಅವರನ್ನು ಸಂರಕ್ಷಿಸುತ್ತಿದ್ದನು. ಆತನು ಅವರನ್ನು ನಡೆಸಿ, ಅವರಿಗೆ ಮಾರ್ಗದರ್ಶನವನ್ನು ನೀಡಿದ್ದನು. (ನೋಡಿರಿ: ರೂಪಕಾಲಂಕಾರ)
  • ಮೋಶೆ ಇಸ್ರಾಯೇಲ್ಯರಿಗೆ ಕುರುಬನಾಗಿದ್ದನು, ಆತನು ಅವರನ್ನು ಯೆಹೋವವನ್ನು ಆರಾಧಿಸುವದರಲ್ಲಿ ಆತ್ಮೀಯಕವಾಗಿ ನಡೆಸಿದ್ದನು ಮತ್ತು ಕಾನಾನ್ ಭೂಮಿಗೆ ತಮ್ಮ ಪ್ರಯಾಣದಲ್ಲಿ ಭೌತಿಕವಾಗಿಯೂ ನಡೆಸಿದ್ದನು.
  • ಹೊಸ ಒಡಂಬಡಿಕೆಯಲ್ಲಿ ಯೇಸು ತನ್ನನ್ನು ತಾನು “ಒಳ್ಳೇಯ ಕುರುಬ” ಎಂದು ಹೇಳಿಕೊಂಡಿದ್ದಾನೆ. ಸಭೆಯ ಮೇಲೆ “ಉನ್ನತ ಕುರುಬ” ಎಂಬುದಾಗಿ ಅಪೊಸ್ತಲನಾದ ಪೌಲನು ಕೂಡ ತನ್ನನ್ನು ತಾನು ಸೂಚಿಸಿಕೊಂಡಿದ್ದಾನೆ
  • ಹೊಸ ಒಡಂಬಡಿಕೆಯಲ್ಲಿ “ಕುರುಬ” ಎನ್ನುವ ಪದವನ್ನು ವಿಶ್ವಾಸಿಗಳ ಮೇಲೆ ಆತ್ಮೀಯಕವಾದ ನಾಯಕನಾಗಿರುವ ವ್ಯಕ್ತಿಯನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ. “ಪಾಸ್ಟರ್ (ಅಥವಾ ಸಭಾಪಾಲಕ)” ಎಂಬುದಾಗಿ ಅನುವಾದ ಮಾಡಲ್ಪಟ್ಟ ಪದವೂ “ಕುರುಬ” ಎಂಬುದಾಗಿ ಅನುವಾದ ಮಾಡಿದ ಈ ಪದವೂ ಒಂದೇಯಾಗಿರುತ್ತವೆ. ಹಿರಿಯರು ಮತ್ತು ಮೇಲ್ವೀಚಾರಕರು ಕೂಡ ಕುರುಬರು ಎಂದು ಕರೆಯಲ್ಪಟ್ಟಿರುತ್ತಾರೆ.

ಅನುವಾದ ಸಲಹೆಗಳು:

  • ಇದನ್ನು ಅಕ್ಷರಾರ್ಥವಾಗಿ ಉಪಯೋಗಿಸಿದಾಗ, “ಕುರುಬ” ಎನ್ನುವ ಕ್ರಿಯಾ ಪದವನ್ನು “ಕುರಿಗಳನ್ನು ಕಾಯುವವನು” ಅಥವಾ “ಕುರಿಗಳ ಮೇಲೆ ಮೇಲ್ವೀಚಾರಕನು” ಎಂದೂ ಅನುವಾದ ಮಾಡಬಹುದು.
  • “ಕುರುಬ” ಎನ್ನುವ ವ್ಯಕ್ತಿಯನ್ನು “ಕುರಿಗಳನ್ನು ನೋಡಿಕೊಳ್ಳುವ ವ್ಯಕ್ತಿ” ಅಥವಾ “ಕುರಿಗಳ ವ್ಯಾಪಾರಿ” ಅಥವಾ “ಕುರಿಗಳ ಸಾಕುವಾತನು” ಎಂದೂ ಅನುವಾದ ಮಾಡಬಹುದು.
  • ರೂಪಕಾಲಂಕಾರವಾಗಿ ಈ ಪದವನ್ನು ಉಪಯೋಗಿಸಿದಾಗ, ಈ ಪದವನ್ನು ಅನುವಾದ ಮಾಡುವ ಅನೇಕವಾದ ವಿಧಾನಗಳಲ್ಲಿ “ಆತ್ಮೀಯಕವಾದ ಕುರುಬ” ಅಥವಾ “ಆತ್ಮೀಯಕವಾದ ನಾಯಕ” ಅಥವಾ “ಕುರುಬನ ಹಾಗೆ ಇರುವ ವ್ಯಕ್ತಿ” ಅಥವಾ “ಕುರುಬನು ತನ್ನ ಕುರಿಗಳನ್ನು ನೋಡಿಕೊಳ್ಳುವ ಹಾಗೆ ತನ್ನ ಜನರನ್ನು ನಡೆಸುವ ವ್ಯಕ್ತಿ” ಅಥವಾ “ದೇವರ ಕುರಿಗಳನ್ನು ನೋಡಿಕೊಳ್ಳುವ ವ್ಯಕ್ತಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಕೆಲವೊಂದು ಸಂದರ್ಭಗಳಲ್ಲಿ “ಕುರುಬ” ಎನ್ನುವ ಪದವನ್ನು “ನಾಯಕ” ಅಥವಾ “ಮಾರ್ಗದರ್ಶಿ” ಅಥವಾ “ಪಾಲನೆದಾರ” ಎಂದೂ ಅನುವಾದ ಮಾಡಬಹುದು.
  • “ಕುರುಬ” ಎನ್ನುವ ಪದಕ್ಕೆ ಆತ್ಮೀಯಕವಾದ ಮಾತನ್ನು “ಚೆನ್ನಾಗಿ ನೋಡಿಕೊಳ್ಳುವ” ಅಥವಾ “ಆತ್ಮೀಯಕವಾಗಿ ಪೋಷಿಸುವ” ಅಥವಾ “ಮಾರ್ಗದರ್ಶನ ಕೊಡುವ ಮತ್ತು ಬೋಧಿಸುವ” ಅಥವಾ “ನಡೆಸುವ ಮತ್ತು (ಕುರುಬನು ಕುರಿಯನ್ನು ನೋಡಿಕೊಳ್ಳುವ ಹಾಗೆಯೇ) ನೋಡಿಕೊಳ್ಳುವ” ವ್ಯಕ್ತಿ ಎಂದೂ ಅನುವಾದ ಮಾಡಬಹುದು.
  • ಅಲಂಕಾರಿಕ ಭಾಷೆಯಲ್ಲಿ ಉಪಯೋಗಿಸುವಾಗ, ಈ ಪದವನ್ನು ಅನುವಾದ ಮಾಡುವುದರಲ್ಲಿ “ಕುರುಬ” ಎನ್ನುವ ಪದಕ್ಕೆ ಅಕ್ಷರಾರ್ಥವಾದ ಪದವನ್ನು ಒಳಪಡಿಸುವುದು ಅಥವಾ ಉಪಯೋಗಿಸುವುದು ಉತ್ತಮ.

(ಈ ಪದಗಳನ್ನು ಸಹ ನೋಡಿರಿ : ನಂಬು, ಕಾನಾನ್, ಸಭೆ, ಮೋಶೆ, ಸಭಾಪಾಲಕ, ಕುರಿ, ಆತ್ಮ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 09:11 ಐಗುಪ್ತದಿಂದ ದೂರ ಪ್ರದೇಶದಲ್ಲಿರುವ ಅರಣ್ಯದಲ್ಲಿ ಮೋಶೆ ___ ಕುರುಬನಾಗಿದ್ದನು ___.
  • 17:02 ಬೆತ್ಲೆಹೇಮಿನಲ್ಲಿ ದಾವೀದನು ಕುರುಬನಾಗಿದ್ದನು. ಅನೇಕ ಸಂದರ್ಭಗಳಲ್ಲಿ ತನ್ನ ತಂದೆ ___ ಕುರಿಗಳನ್ನು ___ ಕಾಯುತ್ತಿರುವಾಗ, ತನ್ನ ___ ಕುರಿಗಳ ___ ಮೇಲೆ ಧಾಳಿ ಮಾಡಿದ ಸಿಂಹವನ್ನು ಮತ್ತು ಕರಡಿಯನ್ನು ಕೊಂದು ಹಾಕಿದನು.
  • 23:06 ಆ ರಾತ್ರಿಯಲ್ಲಿ ಅವರು ತಮ್ಮ ಹಿಂಡುಗಳನ್ನು ಕಾಯುತ್ತಿರುವಾಗ ಆಲ್ಲಿ ಕೆಲವುಮಂದಿ ___ ಕುರುಬರಿದ್ದರು ___.
  • 23:08 ದೂತರು ಅವರಿಗೆ ಹೇಳಿದ ಪ್ರಕಾರವೇ, ಅವರು ಶಿಶುವಾದ ಯೇಸು ಇರುವ ಸ್ಥಳಕ್ಕೆ ___ ಕುರುಬರು ___ ಬೇಗನೆ ಬಂದರು, ಅವರು ಅಲ್ಲಿಗೆ ಬಂದು ಆಹಾರದ ತೊಟ್ಟಿಯಲ್ಲಿ ಆತನನ್ನು ಮಲಗಿಸಿರುವುದನ್ನು ಕಂಡುಕೊಂಡರು.
  • ___30:03___ಈ ಜನರೆಲ್ಲರು ಕುರುಬನಿಲ್ಲದ ___ ಕುರಿಗಳಾಗಿದ್ದಾರೆ ___ ಎಂದು ಯೇಸು ಹೇಳಿದನು.

ಪದ ಡೇಟಾ:

  • Strong's: H6629, H7462, H7469, H7473, G750, G4165, G4166