kn_tw/bible/other/receive.md

7.2 KiB
Raw Permalink Blame History

ಸ್ವೀಕರಿಸು, ಸ್ವಾಗತ, ಕೈಗೆತ್ತಿಕೊಳ್ಳುವುದು, ಸ್ವೀಕಾರ

ಪದದ ಅರ್ಥವಿವರಣೆ:

“ಸ್ವೀಕರಿಸು” ಎನ್ನುವ ಪದವು ಸಾಧಾರಣವಾಗಿ ಕೊಡಲ್ಪಟ್ಟವುಗಳನ್ನು, ಕಾಣಿಕೆಗಳನ್ನು ಅಥವಾ ಉಡುಗೊರೆಗಳನ್ನು ಅಂಗೀಕರಿಸುವುದು ಅಥವಾ ಪಡೆದುಕೊಳ್ಳುವುದು ಎಂದರ್ಥ.

  • “ಸ್ವೀಕರಿಸು” ಎನ್ನುವ ಪದವು ಯಾವುದಾದರೊಂದನ್ನು ಅನುಭವಿಸು ಅಥವಾ ನರಳು ಎಂದರ್ಥವನ್ನೂ ಕೊಡುತ್ತದೆ, ಉದಾಹರಣೆಗೆ, “ಅವನು ಮಾಡಿದ ಕೆಲಸಗಳಿಗೆ ತಕ್ಕ ಶಿಕ್ಷೆಯನ್ನು ಹೊಂದಿಕೊಂಡಿದ್ದಾನೆ” ಎನ್ನುವ ಮಾತಿನಂತೆ ಇರುತ್ತದೆ.
  • ನಾವು ಒಬ್ಬ ವ್ಯಕ್ತಿಯನ್ನು “ಪಡೆದುಕೊಳ್ಳುವುದರಲ್ಲಿ” ಒಂದು ವಿಶೇಷವಾದ ಭಾವನೆಯೂ ಒಳಗೊಂಡಿರುತ್ತದೆ. ಉದಾಹರಣೆಗೆ, ಅತಿಥಿಗಳನ್ನು ಅಥವಾ ಸಂದರ್ಶಕರನ್ನು “ಸ್ವಾಗತಿಸುವದು” ಎಂದರೆ ಅವರನ್ನು ಆಹ್ವಾನಿಸುವುದು ಮತ್ತು ಅವರೊಂದಿಗೆ ಸಂಬಂಧವನ್ನು ಬೆಳಸಿಕೊಳ್ಳುವ ಕ್ರಮದಲ್ಲಿ ಅವರನ್ನು ಘನಪಡಿಸುವುದು ಎಂದರ್ಥ.

“ಪವಿತ್ರಾತ್ಮನ ವರವನ್ನು ಪಡೆದುಕೊಳ್ಳುವುದು” ಎಂದರೆ ಪವಿತ್ರಾತ್ಮನು ನಮಗೆ ಕೊಡಲ್ಪಟ್ಟಿದ್ದಾನೆ ಮತ್ತು ನಮ್ಮ ಜೀವನಗಳ ಮೂಲಕ ನಮ್ಮಲ್ಲಿ ಕೆಲಸ ಮಾಡುವುದಕ್ಕೆ ಆತನನ್ನು ಆಹ್ವಾನಿಸಿದ್ದೇವೆ ಎಂದರ್ಥ.

  • “ಯೇಸುವನ್ನು ಸ್ವೀಕರಿಸು” ಎಂದರೆ ಯೇಸು ಕ್ರಿಸ್ತನ ಮೂಲಕ ದೇವರು ಕೊಡುವ ರಕ್ಷಣೆಯನ್ನು ಸ್ವೀಕರಿಸುವುದು ಎಂದರ್ಥವಾಗಿರುತ್ತದೆ.
  • ಒಬ್ಬ ಕುರುಡನು “ತನ್ನ ದೃಷ್ಟಿಯನ್ನು ತಿರುಗಿ ಪಡೆದುಕೊಂಡನು” ಎಂದರೆ ದೇವರು ಅವನನ್ನು ಸ್ವಸ್ಥಪಡಿಸಿದ್ದಾನೆ ಮತ್ತು ನೋಡುವುದಕ್ಕೆ ಅವನಿಗೆ ದೃಷ್ಟಿಯನ್ನು ಕೊಟ್ಟಿದ್ದಾನೆ ಎಂದರ್ಥವಾಗಿರುತ್ತದೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ “ಪಡೆದುಕೋ” ಎನ್ನುವ ಪದವನ್ನು “ಅಂಗೀಕರಿಸು” ಅಥವಾ “ಆಹ್ವಾನಿಸು” ಅಥವಾ ‘ಅನುಭವ” ಅಥವಾ “ಕೊಡಲ್ಪಟ್ಟಿರುವ” ಎಂದೂ ಅನುವಾದ ಮಾಡಬಹುದು.
  • “ನೀವು ಶಕ್ತಿಯನ್ನು ಪಡೆದುಕೊಳ್ಳುವಿರಿ” ಎನ್ನುವ ಮಾತನ್ನು “ನಿಮಗೆ ಶಕ್ತಿ ಕೊಡಲ್ಪಡುವುದು” ಅಥವಾ “ದೇವರು ನಿಮಗೆ ಶಕ್ತಿಯನ್ನು ನೀಡುವರು” ಅಥವಾ “(ದೇವರಿಂದ) ನಿಮಗೆ ಶಕ್ತಿ ಅನುಗ್ರಹಿಸಲ್ಪಡುವುದು” ಅಥವಾ “ನಿಮ್ಮಲ್ಲಿ ಶಕ್ತಿಯುತವಾಗಿ ಕೆಲಸ ಮಾಡುವುದಕ್ಕೆ ದೇವರು ನಿಮಗೆ ಪವಿತ್ರಾತ್ಮನನ್ನು ಅನುಗ್ರಹಿಸುವರು” ಎಂದೂ ಅನುವಾದ ಮಾಡಬಹುದು.
  • “ತನ್ನ ದೃಷ್ಟಿಯನ್ನು ಪಡೆದುಕೊಂಡನು” ಎನ್ನುವ ಮಾತು “ಅವನು ನೋಡುತ್ತಿದ್ದಾನೆ” ಅಥವಾ “ಅವನು ತಿರುಗಿ ನೋಡುವವನಾದನು” ಅಥವಾ “ದೇವರಿಂದ ಗುಣವನ್ನು ಹೊಂದಿ, ಅವನು ನೋಡುವ ವ್ಯಕ್ತಿಯಾದನು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪವಿತ್ರಾತ್ಮ, ಯೇಸು, ಒಡೆಯ, ರಕ್ಷಿಸು)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದದಿಂದ ಉದಾಹರಣೆಗಳು:

  • 21:13 ಮೆಸ್ಸೀಯ ಪರಿಪೂರ್ಣನಾಗಿರುತ್ತಾನೆ, ಆತನು ಯಾವ ಪಾಪ ಮಾಡಿರುವುದಿಲ್ಲ ಎಂದು ಪ್ರವಾದಿಗಳು ಹೇಳಿದ್ದರು. ಇತರ ಜನರ ಪಾಪಗಳಿಗಾಗಿ ಶಿಕ್ಷೆಯನ್ನು __ ಪಡೆದುಕೊಳ್ಳುವುದಕ್ಕೆ __ ಆತನು ಸತ್ತನು. ಆತನ ಶಿಕ್ಷೆಯು ದೇವರಿಗೆ ಮತ್ತು ಜನರಿಗೆ ಮಧ್ಯದಲ್ಲಿ ಸಮಾಧಾನವನ್ನುಂಟು ಮಾಡುತ್ತದೆ.
  • 45:05 ಸ್ತೆಫನನು ಸಾಯುತ್ತಿರುವಾಗ, “ಯೇಸುವೆ, ನನ್ನ ಆತ್ಮವನ್ನು __ ತೆಗೆದುಕೋ __ “ ಎಂದು ಅಳುತ್ತಾ ಕೂಗಿದನು.
  • 49:06 ನನ್ನನ್ನು ಕೆಲವರು ಅಂಗೀಕರಿಸಿ, ರಕ್ಷಣೆ ಹೊಂದುತ್ತಾರೆ, ಆದರೆ ಕೆಲವರು ನಂಬದೆ ರಕ್ಷಣೆ ಹೊಂದುವುದಿಲ್ಲ ಎಂದು ಆತನು (ಯೇಸು) ಹೇಳಿದನು.
  • 49:10 ಯೇಸು ಶಿಲುಬೆಯಲ್ಲಿ ಮರಣ ಹೊಂದುತ್ತಿರುವಾಗ, ಆತನು ನಿನ್ನ ಶಿಕ್ಷೆಯನ್ನು __ ಪಡೆದುಕೊಂಡಿದ್ದಾನೆ __.
  • 49:13 ಯೇಸುವಿನಲ್ಲಿ ನಂಬಿಕೆಯಿಟ್ಟು, ಆತನನ್ನು ತಮ್ಮ ಯಜಮಾನನನ್ನಾಗಿ __ ಸ್ವೀಕರಿಸುವ __ ಪ್ರತಿಯೊಬ್ಬರನ್ನು ದೇವರು ರಕ್ಷಿಸುವನು.

ಪದ ಡೇಟಾ:

  • Strongs: H3557, H3947, H6901, H6902, H8254, G308, G324, G353, G354, G568, G588, G618, G1183, G1209, G1523, G1653, G1926, G2865, G2983, G3028, G3335, G3336, G3549, G3858, G3880, G4327, G4355, G4356, G4687, G5264, G5562