kn_tw/bible/other/rebuke.md

2.8 KiB

ಗದರಿಸು, ಖಂಡಿಸು

ಪದದ ಅರ್ಥವಿವರಣೆ:

"ಗದರಿಸುವುದು" ಎಂದರೆ ಯಾರನ್ನಾದರೂ ಮೌಖಿಕವಾಗಿ ಸರಿಪಡಿಸುವುದನ್ನು ಸೂಚಿಸುತ್ತದೆ, ಸಾಮಾನ್ಯವಾಗಿ ಅದು ಬಲದಿಂದ ಅಥವಾ ಕಠಿಣತೆಯಿಂದ ಆಗಿರಬಹುದು.

  • ವಿಶ್ವಾಸಿಗಳು ದೇವರಿಗೆ ಸ್ಪಷ್ಟವಾಗಿ ಅವಿಧೇಯತೆಯನ್ನು ತೋರಿಸುವಾಗ ಅವರನ್ನು ಗದರಿಸಬೇಕೆಂದು ಹೊಸ ಒಡಂಬಡಿಕೆಯು ಕ್ರೈಸ್ತರಿಗೆ ಅಜ್ಞಾಪಿಸುತ್ತಿದೆ.
  • ಮಕ್ಕಳು ತಂದೆತಾಯಿಗಳಿಗೆ ಅವಿಧೇಯತೆಯನ್ನು ತೋರಿಸುವಾಗ ತಮ್ಮ ಮಕ್ಕಳನ್ನು ಗದರಿಸಬೇಕೆಂದು ಜ್ಞಾನೋಕ್ತಿಗಳ ಪುಸ್ತಕವು ಸೂಚನೆಗಳನ್ನು ಕೊಟ್ಟಿರುತ್ತದೆ.
  • ಪಾಪದಲ್ಲಿ ತಮ್ಮನ್ನು ತಾವು ಮುಳುಗಿಸಿಕೊಳ್ಳುವವರ ಮೂಲಕ ಪಾಪವನ್ನು ಮಾಡಿದ ಪ್ರತಿಯೊಬ್ಬರನ್ನು ತಡೆಗಟ್ಟುವುದಕ್ಕೆ ಗದರಿಸುವುದೆನ್ನುವುದು ವಿಶಿಷ್ಟವಾಗಿ ಕೊಡಲ್ಪಟ್ಟಿರುತ್ತದೆ.
  • ಇದನ್ನು “ತೀವ್ರವಾಗಿ ಸರಿಪಡಿಸು” ಅಥವಾ “ಎಚ್ಚರಿಸು” ಎನ್ನುವ ಮಾತುಗಳ ಮೂಲಕ ಅನುವಾದ ಮಾಡಬಹುದು.
  • “ಗದರಿಸು” ಎನ್ನುವ ಪದವನ್ನು “ಗಂಭೀರವಾಗಿ ಸರಿಪಡಿಸು” ಅಥವಾ “ಬಲವಾದ ವಿಮರ್ಶೆ” ಎಂದೂ ಅನುವಾದ ಮಾಡಬಹುದು.
  • “ಗದರಿಸದಿರುವುದು” ಎನ್ನುವ ಮಾತನ್ನು “ಎಚ್ಚರಿಸದಿರುವುದು” ಅಥವಾ “ವಿಮರ್ಶೆ ಮಾಡದಿರುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಎಚ್ಚರಿಸು, ಅವಿಧೇಯತೆ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1605, H1606, H2778, H2781, H3198, H4045, H4148, H8156, H8433, G1649, G1651, G1969, G2008, G3679