kn_tw/bible/other/raise.md

11 KiB

ಎಬ್ಬಿಸು,ಎದ್ದೇಳು, ಎಬ್ಬಿಸುವುದು, ಎದ್ದೇಳು, ಎದ್ದಿದೆ

ಪದದ ಅರ್ಥವಿವರಣೆ:

ಎಬ್ಬಿಸು, ಮೇಲಕ್ಕೆ ಎಬ್ಬಿಸು

ಸಾಧಾರಣವಾಗಿ “ಎಬ್ಬಿಸು” ಎನ್ನುವ ಪದಕ್ಕೆ “ಮೇಲಕ್ಕೆ ಎಬ್ಬಿಸುವುದು” ಅಥವಾ “ಉನ್ನತವಾಗಿ ಮಾಡು” ಎಂದರ್ಥ.

  • “ಮೇಲಕ್ಕೆ ಎದ್ದೇಳು” ಎನ್ನುವ ಅಲಂಕಾರಿಕ ಮಾತಿಗೆ ಯಾವುದಾದರೊಂದನ್ನು ಕಾಣಿಸಿಕೊಳ್ಳುವಂತೆ ಅಥವಾ ಅಸ್ತಿತ್ವದಲ್ಲಿರಲು ಮಾಡುವುದು ಎಂದರ್ಥ. ಯಾವುದಾದರೊಂದನ್ನು ಮಾಡುವುದಕ್ಕೆ ಯಾರಾದರೊಬ್ಬರನ್ನು ನೇಮಿಸುವುದು ಎಂದರ್ಥವೂ ಈ ಪದಕ್ಕೆ ಇರುತ್ತದೆ.
  • ಕೆಲವೊಂದುಬಾರಿ “ಮೇಲಕ್ಕೆ ಎದ್ದೆಳು” ಎನ್ನುವ ಮಾತಿಗೆ “ಪುನರ್ ಸ್ಥಾಪಿಸು” ಅಥವಾ “ಪುನರ್ ನಿರ್ಮಿಸು” ಎಂದರ್ಥವಾಗಿರುತ್ತದೆ.
  • “ಎಬ್ಬಿಸು” ಎನ್ನುವ ಪದಕ್ಕೆ “ಮರಣದಿಂದ ಎಬ್ಬಿಸು” ಎನ್ನುವ ಮಾತಿನಲ್ಲಿರುವ ವಿಶೇಷವಾದ ಅರ್ಥವು ಇರುತ್ತದೆ. ಸತ್ತಿರುವ ವ್ಯಕ್ತಿಯನ್ನು ಜೀವಂತವನ್ನಾಗಿ ಮಾಡುವುದು ಎಂದು ಈ ಮಾತಿಗೆ ಅರ್ಥವಾಗಿರುತ್ತದೆ.
  • ಕೆಲವೊಂದುಬಾರಿ “ಮೇಲಕ್ಕೆ ಎಬ್ಬಿಸು” ಎನ್ನುವ ಪದಕ್ಕೆ ಯಾರಾದರೊಬ್ಬರನ್ನು ಅಥವಾ ಯಾವುದಾದರೊಂದನ್ನು “ಮಹಿಮೆಪಡಿಸು ಅಥವಾ ಹೊಗಳು” ಎಂದರ್ಥವಾಗಿರುತ್ತದೆ.

ಎಬ್ಬಿಸು, ಎದ್ದೇಳು

“ಎಬ್ಬಿಸು” ಅಥವಾ “ಎದ್ದೇಳು” ಎನ್ನುವ ಪದಕ್ಕೆ “ಮೇಲಕ್ಕೆ ಹೋಗು” ಅಥವಾ “ಎದ್ದು ಬಾ” ಎಂದರ್ಥ. “ಏರಿದೆ,” “ಬೆಳೆದಿದೆ”, ಮತ್ತು “ಎದ್ದಿದೆ” ಎನ್ನುವ ಪದಗಳು ಭೂತ ಕಾಲದ ಕ್ರಿಯೆಯನ್ನು ವ್ಯಕ್ತಪಡಿಸುತ್ತಿವೆ.

  • ಒಬ್ಬ ವ್ಯಕ್ತಿ ಎಲ್ಲಿಗಾದರು ಹೋಗುವುದಕ್ಕೆ ಮೇಲಕ್ಕೆ ಎದ್ದಾಗ, ಇದು ಕೆಲವೊಂದುಬಾರಿ “ಅವನು ಎದ್ದು, ಹೊರಟನು” ಅಥವಾ “ಅವನು ಮೇಲಕ್ಕೆ ಎದ್ದು, ಹೊರಟುಹೋದನು” ಎಂದೂ ವ್ಯಕ್ತಗೊಳಿಸಲಾಗುತ್ತದೆ.
  • ಯಾವುದಾದರೊಂದು “ಎದ್ದು ಬರುತ್ತಿರುವಾಗ”, ಇದಕ್ಕೆ ಇದು “ನಡೆದಿದೆ” ಅಥವಾ “ನಡೆಯುವುದಕ್ಕೆ ಆರಂಭವಾಗುತ್ತಿದೆ” ಎಂದರ್ಥ.
  • ಯೇಸು “ಮರಣದಿಂದ ಎಬ್ಬಿಸಲ್ಪಡುವನು” ಎಂದು ಆತನು ಮುಂಚಿತವಾಗಿಯೇ ಹೇಳಿದ್ದನು. ಯೇಸು ಮರಣಿಸಿದ ಮೂರು ದಿನಗಳಾದನಂತರ, “ಆತನು ಎದ್ದು ಬಂದನು” ಎಂದು ದೂತ ಹೇಳಿದನು.

ಅನುವಾದ ಸಲಹೆಗಳು:

  • “ಎಬ್ಬಿಸು” ಅಥವಾ “ಎದ್ದೇಳು” ಎನ್ನುವ ಪದವನ್ನು “ಮೇಲಕ್ಕೆತ್ತು” ಅಥವಾ “ಉನ್ನತವಾಗಿ ಮಾಡು” ಎಂದೂ ಅನುವಾದ ಮಾಡಬಹುದು.
  • “ಮೇಲಕ್ಕೆ ಎಬ್ಬಿಸು” ಎನ್ನುವ ಪದವನ್ನು “ಕಾಣಿಸಿಕೊಳ್ಳುವಂತೆ ಮಾಡು” ಅಥವಾ “ನೇಮಿಸು” ಅಥವಾ “ಅಸ್ತಿತ್ವದಲ್ಲಿರಿಸು” ಎಂದೂ ಅನುವಾದ ಮಾಡಬಹುದು.
  • “ನಿಮ್ಮ ಶತ್ರುಗಳ ಬಲವನ್ನು ಮೇಲಕ್ಕೆ ಎಬ್ಬಿಸು” ಎನ್ನುವ ಮಾತನ್ನು “ನಿಮ್ಮ ಶತ್ರುಗಳನ್ನು ತುಂಬಾ ಬಲವುಳ್ಳವರನ್ನಾಗಿ ಮಾಡು” ಎಂದೂ ಅನುವಾದ ಮಾಡಬಹುದು.
  • “ಮರಣದಿಂದ ಯಾರಾದರೊಬ್ಬರನ್ನು ಎಬ್ಬಿಸು” ಎನ್ನುವ ಮಾತನ್ನು “ಸತ್ತಂತ ಯಾರಾದರೊಬ್ಬರನ್ನು ಮರಣದಿಂದ ಜೀವಂತನನ್ನಾಗಿ ಮಾಡು” ಅಥವಾ “ಒಬ್ಬ ವ್ಯಕ್ತಿ ತಿರುಗಿ ಜೀವಂತವಾಗುವಂತೆ ಮಾಡು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಗುಣವಾಗಿ, “ಮೇಲಕ್ಕೆತ್ತು” ಎನ್ನುವ ಪದವನ್ನು “ಒದಗಿಸು” ಅಥವಾ “ನೇಮಿಸು” ಅಥವಾ “ಹೊಂದಿಕೊಳ್ಳು” ಅಥವಾ “ನಿರ್ಮಿಸು” ಅಥವಾ “ಪುನರ್ ನಿರ್ಮಿಸು” ಅಥವಾ “ಸರಿಪಡಿಸು” ಎಂದೂ ಅನುವಾದ ಮಾಡಬಹುದು.
  • “ಎದ್ದು, ಹೊರಟನು” ಎನ್ನುವ ಮಾತನ್ನು “ಮೇಲಕ್ಕೆ ಎದ್ದು, ಹೊರಟನು” ಅಥವಾ “ಹೋದನು” ಎಂದು ಅನುವಾದ ಮಾಡಬಹುದು.
  • ಸಂದರ್ಭಾನುಗುಣವಾಗಿ, “ಎದ್ದಿದೆ” ಎನ್ನುವ ಪದವನ್ನು “ಆರಂಭಿಸಿದೆ” ಅಥವಾ “ಆರಂಭ ಮಾಡಲಾಗಿದೆ” ಅಥವಾ “ಮೇಲಕ್ಕೆ ಎದ್ದಿದೆ” ಅಥವಾ “ನಿಂತಿದೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪುನರುತ್ಹಾನ, ನೇಮಿಸು, ಘನಪಡಿಸು)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದ ಕತೆಗಳಿಂದ ಉದಾಹರಣೆಗಳು:

  • 21:14 ಮೆಸ್ಸೀಯ ಮರಣಿಸುತ್ತಾನೆ ಮತ್ತು ದೇವರು ಆತನನ್ನು ಮರಣದಿಂದ __ ಎಬ್ಬಿಸುತ್ತಾನೆ __ ಎಂದು ಪ್ರವಾದಿಗಳು ಮುಂಚಿತವಾಗಿ ಹೇಳಿದ್ದರು.
  • 41:05 “ಯೇಸು ಇಲ್ಲಿ ಇಲ್ಲ. ಆತನು ಹೇಳಿದ ಪ್ರಕಾರವೇ, ಆತನು ಮರಣದಿಂದ __ ಎಬ್ಬಿಸಲ್ಪಟ್ಟಿದ್ದಾನೆ __!”
  • 43:07 “ಯೇಸು ಮರಣ ಹೊಂದಿದರೂ, ದೇವರು ಆತನನ್ನು ಮರಣದಿಂದ __ ಎಬ್ಬಿಸಲ್ಪಟ್ಟಿದ್ದಾನೆ __. “ನಿನ್ನ ಪರಿಶುದ್ಧನನ್ನು ಸಮಾಧಿಯಲ್ಲಿರುವಂತೆ ಬಿಡುವುದಿಲ್ಲ” ಎನ್ನುವ ಪ್ರವಾದನೆಯು ಈ ರೀತಿಯಲ್ಲಿ ನೆರವೇರಿಸಲ್ಪಟ್ಟಿತು. ಯೇಸು ತಿರುಗಿ ಜೀವಂತವಾಗಿರುವಕ್ಕೆ ದೇವರು ಯೇಸುವನ್ನು __ ಎಬ್ಬಿಸಿದ್ದಾನೆ __ ಎನ್ನುವ ಸತ್ಯ ಸಂಘಟನೆಗೆ ನಾವೆಲ್ಲರು ಸಾಕ್ಷಿಗಳಾಗಿದ್ದೇವೆ.
  • 44:05 “ನೀವು ಜೀವಾಧಿಪತಿಯನ್ನು ಸಾಯಿಸಿದ್ದೀರಿ, ಆದರೆ ದೇವರು ಆತನನ್ನು ಮರಣದಿಂದ __ ಎಬ್ಬಿಸಿದನು __.
  • 44:08 “ನಿಮ್ಮ ಮುಂದೆ ನಿಂತಿರುವ ಈ ಮನುಷ್ಯನು ಮೆಸ್ಸೀಯನಾದ ಯೇಸುವಿನ ಶಕ್ತಿಯಿಂದ ಸ್ವಸ್ಥತೆಯನ್ನು ಪಡೆದುಕೊಂಡಿದ್ದಾನೆ. ನೀವು ಯೇಸುವನ್ನು ಶಿಲುಬೆಗೆ ಹಾಕಿದ್ದೀರಿ, ಆದರೆ ದೇವರು ಆತನು ತಿರುಗಿ ಜೀವಿಸುವಂತೆ __ ಎಬ್ಬಿಸಿದನು __!”
  • 48:04 ಸೈತಾನನು ಮೆಸ್ಸೀಯನನ್ನು ಕೊಂದನು ಎಂದು ಇದರ ಅರ್ಥವಾಗಿರುತ್ತದೆ, ಆದರೆ ಆತನು ತಿರುಗಿ ಜೀವಂತವಾಗಿರುವುದಕ್ಕೆ ದೇವರು ಆತನನ್ನು __ ಎಬ್ಬಿಸಿದನು __, ಮತ್ತು ಮೆಸ್ಸೀಯ ಶಾಶ್ವತವಾಗಿ ಸೈತಾನನ ಶಕ್ತಿಯನ್ನು ಜಜ್ಜುವನು.
  • 49:02 ಆತನು (ಯೇಸು) ನೀರಿನ ಮೇಲೆ ನಡೆದನು, ಬಿರುಗಾಳಿಯನ್ನು ಶಾಂತಗೊಳಿಸಿದನು, ಅನೇಕ ರೋಗಿಗಳನ್ನು ಗುಣಪಡಿಸಿದನು, ದೆವ್ವಗಳನ್ನು ಹೋಗಲಾಡಿಸಿದನು, ಸತ್ತಂತವರನ್ನು ಜೀವಂತವಾಗಿರುವುದಕ್ಕೆ ತಿರುಗಿ __ ಎಬ್ಬಿಸಿದನು __, ಮತ್ತು ಐದು ರೊಟ್ಟಿ ಎರಡು ಮೀನುಗಳನ್ನು ಸುಮಾರು 5,000 ಜನರಿಗೆ ಹಂಚಿದನು.
  • 49:12 ಯೇಸು ದೇವರ ಮಗನೆಂದು, ನಿನಗೆ ಬದಲಾಗಿ ಆತನು ಶಿಲುಬೆಯಲ್ಲಿ ಮರಣಿಸಿದ್ದಾನೆಂದು, ಮತ್ತು ದೇವರು ಆತನನ್ನು ತಿರುಗಿ __ ಎಬ್ಬಿಸಿದ್ದಾನೆಂದು __ ನೀನು ತಪ್ಪದೇ ನಂಬಬೇಕು.

ಪದ ಡೇಟಾ:

  • Strong's: H2210, H2224, H5549, H5782, H5927, H5975, H6965, H6966, H6974, H7613 G305, G386, G393, G450, G1096, G1326, G1453, G1525, G1817, G1825, G1892, G1999, G4891