kn_tw/bible/other/raise.md

60 lines
11 KiB
Markdown

# ಎಬ್ಬಿಸು,ಎದ್ದೇಳು, ಎಬ್ಬಿಸುವುದು, ಎದ್ದೇಳು, ಎದ್ದಿದೆ
## ಪದದ ಅರ್ಥವಿವರಣೆ:
### ಎಬ್ಬಿಸು, ಮೇಲಕ್ಕೆ ಎಬ್ಬಿಸು
ಸಾಧಾರಣವಾಗಿ “ಎಬ್ಬಿಸು” ಎನ್ನುವ ಪದಕ್ಕೆ “ಮೇಲಕ್ಕೆ ಎಬ್ಬಿಸುವುದು” ಅಥವಾ “ಉನ್ನತವಾಗಿ ಮಾಡು” ಎಂದರ್ಥ.
* “ಮೇಲಕ್ಕೆ ಎದ್ದೇಳು” ಎನ್ನುವ ಅಲಂಕಾರಿಕ ಮಾತಿಗೆ ಯಾವುದಾದರೊಂದನ್ನು ಕಾಣಿಸಿಕೊಳ್ಳುವಂತೆ ಅಥವಾ ಅಸ್ತಿತ್ವದಲ್ಲಿರಲು ಮಾಡುವುದು ಎಂದರ್ಥ. ಯಾವುದಾದರೊಂದನ್ನು ಮಾಡುವುದಕ್ಕೆ ಯಾರಾದರೊಬ್ಬರನ್ನು ನೇಮಿಸುವುದು ಎಂದರ್ಥವೂ ಈ ಪದಕ್ಕೆ ಇರುತ್ತದೆ.
* ಕೆಲವೊಂದುಬಾರಿ “ಮೇಲಕ್ಕೆ ಎದ್ದೆಳು” ಎನ್ನುವ ಮಾತಿಗೆ “ಪುನರ್ ಸ್ಥಾಪಿಸು” ಅಥವಾ “ಪುನರ್ ನಿರ್ಮಿಸು” ಎಂದರ್ಥವಾಗಿರುತ್ತದೆ.
* “ಎಬ್ಬಿಸು” ಎನ್ನುವ ಪದಕ್ಕೆ “ಮರಣದಿಂದ ಎಬ್ಬಿಸು” ಎನ್ನುವ ಮಾತಿನಲ್ಲಿರುವ ವಿಶೇಷವಾದ ಅರ್ಥವು ಇರುತ್ತದೆ. ಸತ್ತಿರುವ ವ್ಯಕ್ತಿಯನ್ನು ಜೀವಂತವನ್ನಾಗಿ ಮಾಡುವುದು ಎಂದು ಈ ಮಾತಿಗೆ ಅರ್ಥವಾಗಿರುತ್ತದೆ.
* ಕೆಲವೊಂದುಬಾರಿ “ಮೇಲಕ್ಕೆ ಎಬ್ಬಿಸು” ಎನ್ನುವ ಪದಕ್ಕೆ ಯಾರಾದರೊಬ್ಬರನ್ನು ಅಥವಾ ಯಾವುದಾದರೊಂದನ್ನು “ಮಹಿಮೆಪಡಿಸು ಅಥವಾ ಹೊಗಳು” ಎಂದರ್ಥವಾಗಿರುತ್ತದೆ.
### ಎಬ್ಬಿಸು, ಎದ್ದೇಳು
“ಎಬ್ಬಿಸು” ಅಥವಾ “ಎದ್ದೇಳು” ಎನ್ನುವ ಪದಕ್ಕೆ “ಮೇಲಕ್ಕೆ ಹೋಗು” ಅಥವಾ “ಎದ್ದು ಬಾ” ಎಂದರ್ಥ. “ಏರಿದೆ,” “ಬೆಳೆದಿದೆ”, ಮತ್ತು “ಎದ್ದಿದೆ” ಎನ್ನುವ ಪದಗಳು ಭೂತ ಕಾಲದ ಕ್ರಿಯೆಯನ್ನು ವ್ಯಕ್ತಪಡಿಸುತ್ತಿವೆ.
* ಒಬ್ಬ ವ್ಯಕ್ತಿ ಎಲ್ಲಿಗಾದರು ಹೋಗುವುದಕ್ಕೆ ಮೇಲಕ್ಕೆ ಎದ್ದಾಗ, ಇದು ಕೆಲವೊಂದುಬಾರಿ “ಅವನು ಎದ್ದು, ಹೊರಟನು” ಅಥವಾ “ಅವನು ಮೇಲಕ್ಕೆ ಎದ್ದು, ಹೊರಟುಹೋದನು” ಎಂದೂ ವ್ಯಕ್ತಗೊಳಿಸಲಾಗುತ್ತದೆ.
* ಯಾವುದಾದರೊಂದು “ಎದ್ದು ಬರುತ್ತಿರುವಾಗ”, ಇದಕ್ಕೆ ಇದು “ನಡೆದಿದೆ” ಅಥವಾ “ನಡೆಯುವುದಕ್ಕೆ ಆರಂಭವಾಗುತ್ತಿದೆ” ಎಂದರ್ಥ.
* ಯೇಸು “ಮರಣದಿಂದ ಎಬ್ಬಿಸಲ್ಪಡುವನು” ಎಂದು ಆತನು ಮುಂಚಿತವಾಗಿಯೇ ಹೇಳಿದ್ದನು. ಯೇಸು ಮರಣಿಸಿದ ಮೂರು ದಿನಗಳಾದನಂತರ, “ಆತನು ಎದ್ದು ಬಂದನು” ಎಂದು ದೂತ ಹೇಳಿದನು.
## ಅನುವಾದ ಸಲಹೆಗಳು:
* “ಎಬ್ಬಿಸು” ಅಥವಾ “ಎದ್ದೇಳು” ಎನ್ನುವ ಪದವನ್ನು “ಮೇಲಕ್ಕೆತ್ತು” ಅಥವಾ “ಉನ್ನತವಾಗಿ ಮಾಡು” ಎಂದೂ ಅನುವಾದ ಮಾಡಬಹುದು.
* “ಮೇಲಕ್ಕೆ ಎಬ್ಬಿಸು” ಎನ್ನುವ ಪದವನ್ನು “ಕಾಣಿಸಿಕೊಳ್ಳುವಂತೆ ಮಾಡು” ಅಥವಾ “ನೇಮಿಸು” ಅಥವಾ “ಅಸ್ತಿತ್ವದಲ್ಲಿರಿಸು” ಎಂದೂ ಅನುವಾದ ಮಾಡಬಹುದು.
* “ನಿಮ್ಮ ಶತ್ರುಗಳ ಬಲವನ್ನು ಮೇಲಕ್ಕೆ ಎಬ್ಬಿಸು” ಎನ್ನುವ ಮಾತನ್ನು “ನಿಮ್ಮ ಶತ್ರುಗಳನ್ನು ತುಂಬಾ ಬಲವುಳ್ಳವರನ್ನಾಗಿ ಮಾಡು” ಎಂದೂ ಅನುವಾದ ಮಾಡಬಹುದು.
* “ಮರಣದಿಂದ ಯಾರಾದರೊಬ್ಬರನ್ನು ಎಬ್ಬಿಸು” ಎನ್ನುವ ಮಾತನ್ನು “ಸತ್ತಂತ ಯಾರಾದರೊಬ್ಬರನ್ನು ಮರಣದಿಂದ ಜೀವಂತನನ್ನಾಗಿ ಮಾಡು” ಅಥವಾ “ಒಬ್ಬ ವ್ಯಕ್ತಿ ತಿರುಗಿ ಜೀವಂತವಾಗುವಂತೆ ಮಾಡು” ಎಂದೂ ಅನುವಾದ ಮಾಡಬಹುದು.
* ಸಂದರ್ಭಾನುಗುಣವಾಗಿ, “ಮೇಲಕ್ಕೆತ್ತು” ಎನ್ನುವ ಪದವನ್ನು “ಒದಗಿಸು” ಅಥವಾ “ನೇಮಿಸು” ಅಥವಾ “ಹೊಂದಿಕೊಳ್ಳು” ಅಥವಾ “ನಿರ್ಮಿಸು” ಅಥವಾ “ಪುನರ್ ನಿರ್ಮಿಸು” ಅಥವಾ “ಸರಿಪಡಿಸು” ಎಂದೂ ಅನುವಾದ ಮಾಡಬಹುದು.
* “ಎದ್ದು, ಹೊರಟನು” ಎನ್ನುವ ಮಾತನ್ನು “ಮೇಲಕ್ಕೆ ಎದ್ದು, ಹೊರಟನು” ಅಥವಾ “ಹೋದನು” ಎಂದು ಅನುವಾದ ಮಾಡಬಹುದು.
* ಸಂದರ್ಭಾನುಗುಣವಾಗಿ, “ಎದ್ದಿದೆ” ಎನ್ನುವ ಪದವನ್ನು “ಆರಂಭಿಸಿದೆ” ಅಥವಾ “ಆರಂಭ ಮಾಡಲಾಗಿದೆ” ಅಥವಾ “ಮೇಲಕ್ಕೆ ಎದ್ದಿದೆ” ಅಥವಾ “ನಿಂತಿದೆ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಪುನರುತ್ಹಾನ](../kt/resurrection.md), [ನೇಮಿಸು](../kt/appoint.md), [ಘನಪಡಿಸು](../kt/exalt.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [2 ಪೂರ್ವ.06:41](rc://*/tn/help/2ch/06/41)
* [2 ಸಮು.07:12](rc://*/tn/help/2sa/07/12)
* [ಅಪೊ.ಕೃತ್ಯ.10:40](rc://*/tn/help/act/10/40)
* [ಕೊಲೊಸ್ಸ.03:01](rc://*/tn/help/col/03/01)
* [ಧರ್ಮೋ.13:1-3](rc://*/tn/help/deu/13/01)
* [ಯೆರೆ.06:01](rc://*/tn/help/jer/06/01)
* [ನ್ಯಾಯಾ.02:18](rc://*/tn/help/jdg/02/18)
* [ಲೂಕ.07:22](rc://*/tn/help/luk/07/22)
* [ಮತ್ತಾಯ.20:19](rc://*/tn/help/mat/20/19)
## ಸತ್ಯವೇದ ಕತೆಗಳಿಂದ ಉದಾಹರಣೆಗಳು:
* __[21:14](rc://*/tn/help/obs/21/14)__ ಮೆಸ್ಸೀಯ ಮರಣಿಸುತ್ತಾನೆ ಮತ್ತು ದೇವರು ಆತನನ್ನು ಮರಣದಿಂದ __ ಎಬ್ಬಿಸುತ್ತಾನೆ __ ಎಂದು ಪ್ರವಾದಿಗಳು ಮುಂಚಿತವಾಗಿ ಹೇಳಿದ್ದರು.
* __[41:05](rc://*/tn/help/obs/41/05)__ “ಯೇಸು ಇಲ್ಲಿ ಇಲ್ಲ. ಆತನು ಹೇಳಿದ ಪ್ರಕಾರವೇ, ಆತನು ಮರಣದಿಂದ __ ಎಬ್ಬಿಸಲ್ಪಟ್ಟಿದ್ದಾನೆ __!”
* __[43:07](rc://*/tn/help/obs/43/07)__ “ಯೇಸು ಮರಣ ಹೊಂದಿದರೂ, ದೇವರು ಆತನನ್ನು ಮರಣದಿಂದ __ ಎಬ್ಬಿಸಲ್ಪಟ್ಟಿದ್ದಾನೆ __. “ನಿನ್ನ ಪರಿಶುದ್ಧನನ್ನು ಸಮಾಧಿಯಲ್ಲಿರುವಂತೆ ಬಿಡುವುದಿಲ್ಲ” ಎನ್ನುವ ಪ್ರವಾದನೆಯು ಈ ರೀತಿಯಲ್ಲಿ ನೆರವೇರಿಸಲ್ಪಟ್ಟಿತು. ಯೇಸು ತಿರುಗಿ ಜೀವಂತವಾಗಿರುವಕ್ಕೆ ದೇವರು ಯೇಸುವನ್ನು __ ಎಬ್ಬಿಸಿದ್ದಾನೆ __ ಎನ್ನುವ ಸತ್ಯ ಸಂಘಟನೆಗೆ ನಾವೆಲ್ಲರು ಸಾಕ್ಷಿಗಳಾಗಿದ್ದೇವೆ.
* __[44:05](rc://*/tn/help/obs/44/05)__ “ನೀವು ಜೀವಾಧಿಪತಿಯನ್ನು ಸಾಯಿಸಿದ್ದೀರಿ, ಆದರೆ ದೇವರು ಆತನನ್ನು ಮರಣದಿಂದ __ ಎಬ್ಬಿಸಿದನು __.
* __[44:08](rc://*/tn/help/obs/44/08)__ “ನಿಮ್ಮ ಮುಂದೆ ನಿಂತಿರುವ ಈ ಮನುಷ್ಯನು ಮೆಸ್ಸೀಯನಾದ ಯೇಸುವಿನ ಶಕ್ತಿಯಿಂದ ಸ್ವಸ್ಥತೆಯನ್ನು ಪಡೆದುಕೊಂಡಿದ್ದಾನೆ. ನೀವು ಯೇಸುವನ್ನು ಶಿಲುಬೆಗೆ ಹಾಕಿದ್ದೀರಿ, ಆದರೆ ದೇವರು ಆತನು ತಿರುಗಿ ಜೀವಿಸುವಂತೆ __ ಎಬ್ಬಿಸಿದನು __!”
* __[48:04](rc://*/tn/help/obs/48/04)__ ಸೈತಾನನು ಮೆಸ್ಸೀಯನನ್ನು ಕೊಂದನು ಎಂದು ಇದರ ಅರ್ಥವಾಗಿರುತ್ತದೆ, ಆದರೆ ಆತನು ತಿರುಗಿ ಜೀವಂತವಾಗಿರುವುದಕ್ಕೆ ದೇವರು ಆತನನ್ನು __ ಎಬ್ಬಿಸಿದನು __, ಮತ್ತು ಮೆಸ್ಸೀಯ ಶಾಶ್ವತವಾಗಿ ಸೈತಾನನ ಶಕ್ತಿಯನ್ನು ಜಜ್ಜುವನು.
* __[49:02](rc://*/tn/help/obs/49/02)__ ಆತನು (ಯೇಸು) ನೀರಿನ ಮೇಲೆ ನಡೆದನು, ಬಿರುಗಾಳಿಯನ್ನು ಶಾಂತಗೊಳಿಸಿದನು, ಅನೇಕ ರೋಗಿಗಳನ್ನು ಗುಣಪಡಿಸಿದನು, ದೆವ್ವಗಳನ್ನು ಹೋಗಲಾಡಿಸಿದನು, ಸತ್ತಂತವರನ್ನು ಜೀವಂತವಾಗಿರುವುದಕ್ಕೆ ತಿರುಗಿ __ ಎಬ್ಬಿಸಿದನು __, ಮತ್ತು ಐದು ರೊಟ್ಟಿ ಎರಡು ಮೀನುಗಳನ್ನು ಸುಮಾರು 5,000 ಜನರಿಗೆ ಹಂಚಿದನು.
* __[49:12](rc://*/tn/help/obs/49/12)__ ಯೇಸು ದೇವರ ಮಗನೆಂದು, ನಿನಗೆ ಬದಲಾಗಿ ಆತನು ಶಿಲುಬೆಯಲ್ಲಿ ಮರಣಿಸಿದ್ದಾನೆಂದು, ಮತ್ತು ದೇವರು ಆತನನ್ನು ತಿರುಗಿ __ ಎಬ್ಬಿಸಿದ್ದಾನೆಂದು __ ನೀನು ತಪ್ಪದೇ ನಂಬಬೇಕು.
## ಪದ ಡೇಟಾ:
* Strong's: H2210, H2224, H5549, H5782, H5927, H5975, H6965, H6966, H6974, H7613 G305, G386, G393, G450, G1096, G1326, G1453, G1525, G1817, G1825, G1892, G1999, G4891