4.0 KiB
4.0 KiB
ಪುನರುತ್ಥಾನ
ಪದದ ಅರ್ಥವಿವರಣೆ:
“ಪುನರುತ್ಥಾನ” ಎನ್ನುವ ಪದವು ಸತ್ತಂತ ನಂತರ ತಿರುಗಿ ಜೀವಂತವಾಗುವ ಕಾರ್ಯವನ್ನು ಸೂಚಿಸುತ್ತದೆ.
- ಯಾರಾದರೊಬ್ಬರು ಪುನರುತ್ಥಾನವಾಗುವುದೆಂದರೆ ಸತ್ತಂತ ಆ ವ್ಯಕ್ತಿಯನ್ನು ತಿರುಗಿ ಜೀವಂತವನ್ನಾಗಿ ಮಾಡುವುದು ಎಂದರ್ಥವಾಗಿರುತ್ತದೆ. ಈ ಕಾರ್ಯವನ್ನು ಮಾಡುವುದಕ್ಕೆ ದೇವರಿಗೆ ಮಾತ್ರ ಶಕ್ತಿ ಇರುತ್ತದೆ.
- “ಪುನರುತ್ಥಾನ” ಎನ್ನುವ ಪದವನ್ನು ಅನೇಕಬಾರಿ ಯೇಸು ಸತ್ತನಂತರ ಆತನು ತಿರುಗಿ ಜೀವಂತವಾಗಿರುವ ಕಾರ್ಯವನ್ನು ಸೂಚಿಸುತ್ತದೆ.
- “ನಾನೇ ಪುನರುತ್ಥಾನ ಮತ್ತು ನಾನೇ ಜೀವ” ಎಂದು ಯೇಸು ಹೇಳಿದಾಗ, ಆತನ ಮಾತಿಗೆ ಆತನೇ ಪುನರುತ್ಥಾನಕ್ಕೆ ಆಧಾರ, ಜನರು ಸತ್ತಾಗ ಅವರನ್ನು ಜೀವಂತರನ್ನಾಗಿ ಮಾಡುವುದಕ್ಕೆ ಕಾರಣನು ಆಗಿರುತ್ತಾನೆಂದು ಅರ್ಥವಾಗಿರುತ್ತದೆ.
ಅನುವಾದ ಸಲಹೆಗಳು:
- ಒಬ್ಬ ವ್ಯಕ್ತಿಯ “ಪುನರುತ್ಥಾನ” ಎನ್ನುವ ಮಾತನ್ನು “ಜೀವಂತವಾಗುವುದಕ್ಕೆ ತಿರುಗಿ ಬರುವುದು” ಅಥವಾ “ಸತ್ತಂತ ವ್ಯಕ್ತಿಯನ್ನು ತಿರುಗಿ ಜೀವಂತವನ್ನಾಗಿ ಮಾಡುವುದು” ಎಂದೂ ಅನುವಾದ ಮಾಡಬಹುದು.
- ಈ ಮಾತಿಗೆ ಅಕ್ಷರಾರ್ಥವು ಏನೆಂದರೆ “ಎಬ್ಬಿಸುವುದು” ಅಥವಾ “(ಮರಣದಿಂದ) ಎಬ್ಬಿಸುವ ಕಾರ್ಯ” ಎಂದರ್ಥವಾಗಿರುತ್ತದೆ. ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ ಹೀಗೆಯೇ ಬಳಸುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : ಜೀವ, ಮರಣ, ಎಬ್ಬಿಸು)
ಸತ್ಯವೇದದ ಅನುಬಂಧ ವಾಕ್ಯಗಳು :
- 1 ಕೊರಿಂಥ.15:12-14
- 1 ಪೇತ್ರ.03:21-22
- ಇಬ್ರಿ.11:35-38
- ಯೋಹಾನ.05:28-29
- ಲೂಕ.20:27-28
- ಲೂಕ.20:34-36
- ಮತ್ತಾಯ.22:23-24
- ಮತ್ತಾಯ.22:29-30
- ಫಿಲಿಪ್ಪಿ.03:8-11
ಸತ್ಯವೇದದಿಂದ ಉದಾಹರಣೆಗಳು:
- 21:14 ಮೆಸ್ಸೀಯ ಮರಣ ಮತ್ತು ___ ಪುನರುತ್ಹಾನದ ___ ಮೂಲಕ, ದೇವರು ಪಾಪಿಗಳನ್ನು ರಕ್ಷಿಸುವುದಕ್ಕೆ ಹಾಕಿರುವ ತನ್ನ ಪ್ರಣಾಳಿಕೆಯು ಪೂರ್ತಿಯಾಯಿತು ಮತ್ತು ಹೊಸ ಒಡಂಬಡಿಕೆಯನ್ನು ಆರಂಭಿಸಿದನು.
- 37:05 “ನಾನೇ ___ ಪುನರುತ್ಥಾನ ___ ಮತ್ತು ಜೀವ”, ನನ್ನಲ್ಲಿ ನಂಬುವ ಅಥವಾ ಭರವಸೆಯಿಡುವ ಪ್ರತಿಯೊಬ್ಬರು ಸತ್ತರೂ ಅವರು ತಿರುಗಿ ಬದುಕುವರು ಎಂದು ಯೇಸು ಉತ್ತರಿಸಿದನು.
ಪದ ಡೇಟಾ:
- Strong's: G386, G1454, G1815