2.7 KiB
2.7 KiB
ಪ್ರತಿಜ್ಞೆ, ಪ್ರತಿಜ್ಞೆ ಮಾಡಲಾಗಿದೆ
ಪದದ ಅರ್ಥವಿವರಣೆ:
“ಪ್ರತಿಜ್ಞೆ” ಎನ್ನುವ ಪದವು ಯಾವುದಾದರೊಂದನ್ನು ಕೊಡುವುದಕ್ಕೆ ಅಥವಾ ಏನಾದರೊಂದು ಮಾಡುವುದಕ್ಕೆ ಸಾಂಪ್ರದಾಯಿಕವಾಗಿ ಮತ್ತು ಗಂಭೀರವಾಗಿ ಭರವಸೆ ಕೊಡುವುದನ್ನು ಸೂಚಿಸುತ್ತದೆ.
- ಹಳೇ ಒಡಂಬಡಿಕೆಯಲ್ಲಿ ಇಸ್ರಾಯೇಲಿನ ಅಧಿಕಾರಿಗಳು ಅರಸನಾದ ದಾವೀದನಿಗೆ ನಂಬಿಗಸ್ತರಾಗಿರುತ್ತಾರೆಂದು ಪ್ರತಿಜ್ಞೆ ಮಾಡಿದರು.
- ಪ್ರತಿಜ್ಞೆಯಾಗಿ ಒಂದು ವಸ್ತುವು ಕೊಡಲಾಗುತ್ತಿತ್ತು, ತನ್ನ ವಾಗ್ಧಾನವನ್ನು ನೆರವೇರಿಸಿದಾಗ ಆ ವಸ್ತುವನ್ನು ಹಿಂದುರಿಗಿ ಕೊಡಲಾಗುತ್ತಿತ್ತು.
- “ಪ್ರತಿಜ್ಞೆ” ಎನ್ನುವ ಪದವನ್ನು “ಸಾಂಪ್ರದಾಯಿಕವಾಗಿ ಬದ್ಧರಾಗಿರುವುದು” ಅಥವಾ “ಬಲವಾಗಿ ವಾಗ್ಧಾನ ಮಾಡುವುದು” ಎಂದೂ ಅನುವಾದ ಮಾಡಬಹುದು.
- “ಪ್ರತಿಜ್ಞೆ” ಎನ್ನುವ ಪದವು ಸಾಲವನ್ನು ತೀರಿಸುವ ವಾಗ್ಧಾನವಾಗಿ ಅಥವಾ ಖಾತಿರಿಯಾಗಿ ವಸ್ತುವನ್ನು ಕೊಡುವುದನ್ನು ಸೂಚಿಸುತ್ತದೆ.
- “ಪ್ರತಿಜ್ಞೆ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ, “ಗಂಭೀರವಾದ ವಾಗ್ಧಾನ” ಅಥವಾ “ಸಾಂಪ್ರದಾಯಿಕವಾದ ಬದ್ಧತೆ” ಅಥವಾ “ಖಾತರಿ” ಅಥವಾ “ಔಪಚಾರಿಕವಾದ ಭರವಸೆ” ಎನ್ನುವ ಮಾತುಗಳನ್ನು ಸಂದರ್ಭಾನುಸಾರವಾಗಿ ಬಳಸಬಹುದು.
(ಈ ಪದಗಳನ್ನು ಸಹ ನೋಡಿರಿ : ವಾಗ್ಧಾನ, ಪ್ರಮಾಣ ವಚನ, ಆಣೆ)
ಸತ್ಯವೇದದ ಅನುಬಂಧ ವಾಕ್ಯಗಳು:
ಪದ ಡೇಟಾ:
- Strong's: H781, H2254, H2258, H5667, H5671, H6148, H6161, H6162